ETV Bharat / technology

ಗ್ಲಾಕೋಮಾ & ರೆಟಿನಾ ರೋಗಪತ್ತೆ: ತಜ್ಞರನ್ನೂ ಮೀರಿಸಿದ GPT-4

author img

By ETV Bharat Karnataka Team

Published : Feb 25, 2024, 3:04 PM IST

ಗ್ಲಾಕೋಮಾ ಮತ್ತು ರೆಟಿನಾ ಕಾಯಿಲೆಯ ಪತ್ತೆ ಮತ್ತು ನಿರ್ವಹಣೆಯಲ್ಲಿ ಓಪನ್ಎಐ ಆಧಾರಿತ ಜಿಪಿಟಿ -4 ಮಾನವ ತಜ್ಞ ವೈದ್ಯರಿಗಿಂತಲೂ ಉತ್ತಮವಾಗಿ ಕಾರ್ಯಕ್ಷಮತೆ ಪ್ರದರ್ಶಿಸಿದೆ ಎಂದು ಹೊಸ ವರದಿಯೊಂದು ಹೇಳಿದೆ.

GPT-4 better than eye specialists in retina & glaucoma management: Study

ನ್ಯೂಯಾರ್ಕ್ : ಗ್ಲಾಕೋಮಾ ಮತ್ತು ರೆಟಿನಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಓಪನ್ಎಐ ಆಧಾರಿತ ಜಿಪಿಟಿ -4 ಮಾನವ ನೇತ್ರತಜ್ಞರ ನೈಪುಣ್ಯತೆಯನ್ನು ಸರಿಗಟ್ಟಬಲ್ಲದು ಮತ್ತು ಕೆಲ ಸಂದರ್ಭಗಳಲ್ಲಿ ವೈದ್ಯರಿಗಿಂತಲೂ ಚೆನ್ನಾಗಿ ಕೆಲಸ ಮಾಡಬಲ್ಲದು ಎಂದು ಸಂಶೋಧನೆಯೊಂದು ತಿಳಿಸಿದೆ.

ಜಾಮಾ ಆಪ್ಥಾಲ್ಮಾಲಾಜಿ (JAMA Ophthalmology) ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ- ಅಪಾರ ಪ್ರಮಾಣದ ಡೇಟಾ, ಪಠ್ಯ ಮತ್ತು ಚಿತ್ರಗಳ ಬಗ್ಗೆ ತರಬೇತಿ ಪಡೆದ ಕೃತಕ ಬುದ್ಧಿಮತ್ತೆ -(ಎಐ) ಆಧಾರಿತ ದೊಡ್ಡ ಭಾಷಾ ಮಾದರಿಗಳಂಥ (ಎಲ್ಎಲ್ಎಂ) ಸುಧಾರಿತ ಸಾಧನಗಳು ಲಕ್ಷಾಂತರ ರೋಗಿಗಳನ್ನು ಬಾಧಿಸುವ ಗ್ಲಾಕೋಮಾ ಮತ್ತು ರೆಟಿನಾ ಅಸ್ವಸ್ಥತೆಗಳನ್ನು ಒಳಗೊಂಡ ಪ್ರಕರಣಗಳ ರೋಗನಿರ್ಣಯ ಮತ್ತು ನಿರ್ವಹಣೆ ಮಾಡುವಲ್ಲಿ ನೇತ್ರತಜ್ಞರಿಗೆ ಅಪಾರ ಸಹಾಯ ಮಾಡಬಹುದು ಎಂದು ತಿಳಿಸಿದೆ.

"ನಮ್ಮ ಅಧ್ಯಯನದಲ್ಲಿ ಜಿಪಿಟಿ -4 ರ ಕಾರ್ಯಕ್ಷಮತೆಯ ಬಗ್ಗೆ ಸಾಕಷ್ಟು ಹೊಸ ಮಾಹಿತಿಗಳು ತಿಳಿದು ಬಂದಿವೆ" ಎಂದು ಯುಎಸ್​ನ ಮೌಂಟ್ ಸಿನಾಯ್ ಆಸ್ಪತ್ರೆಯ ನ್ಯೂಯಾರ್ಕ್ ಕಣ್ಣು ಮತ್ತು ಕಿವಿ ಆಸ್ಪತ್ರೆಯ ನೇತ್ರಶಾಸ್ತ್ರ ವೈದ್ಯ ಆಂಡಿ ಹುವಾಂಗ್ ಹೇಳಿದ್ದಾರೆ.

"ನಾವು ಜಿಪಿಟಿ-4 ಅನ್ನು ಪರೀಕ್ಷಿಸಲು ಪ್ರಾರಂಭಿಸಿದ ಕ್ಷಣದಿಂದ ಈ ಎಐ ವ್ಯವಸ್ಥೆಯ ಅಗಾಧ ಸಾಮರ್ಥ್ಯವನ್ನು ಗುರುತಿಸಿದ್ದೇವೆ ಮತ್ತು ಜಿಪಿಟಿ -4 ಸಹಾಯ ಮಾಡುವುದು ಮಾತ್ರವಲ್ಲದೆ ಕೆಲ ಸಂದರ್ಭಗಳಲ್ಲಿ ಅನುಭವಿ ನೇತ್ರ ತಜ್ಞರ ಪರಿಣತಿಗೆ ಸಮನಾಗಿ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪರಿಣತಿಯನ್ನು ತೋರಿಸುತ್ತದೆ" ಎಂದು ಹುವಾಂಗ್ ಹೇಳಿದರು.

ಮೌಂಟ್ ಸಿನಾಯ್​ನಲ್ಲಿರುವ ಇಕಾನ್ ಸ್ಕೂಲ್ ಆಫ್ ಮೆಡಿಸಿನ್ ನ ನೇತ್ರಶಾಸ್ತ್ರ ವಿಭಾಗದ 12 ತಜ್ಞರು ಮತ್ತು ಮೂವರು ಹಿರಿಯ ತರಬೇತಿದಾರರೊಂದಿಗೆ ಜಿಪಿಟಿ -4 (ಜನೆರೇಟಿವ್ ಪ್ರಿ-ಟ್ರೈನಿಂಗ್-ಮಾಡೆಲ್ 4) ಜ್ಞಾನವನ್ನು ಸಂಶೋಧಕರು ಹೋಲಿಕೆ ಮಾಡಿದರು.

ಅಮೇರಿಕನ್ ಅಕಾಡೆಮಿ ಆಫ್ ನೇತ್ರವಿಜ್ಞಾನದ ರೋಗಿಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳ ಪಟ್ಟಿಯಿಂದ 20 ಪ್ರಶ್ನೆಗಳ (ಗ್ಲಾಕೋಮಾ ಮತ್ತು ರೆಟಿನಾಗೆ ತಲಾ 10) ಮೂಲ ಸೆಟ್ ಅನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಯಿತು, ಜೊತೆಗೆ ಮೌಂಟ್ ಸಿನಾಯ್-ಸಂಯೋಜಿತ ಕಣ್ಣಿನ ಚಿಕಿತ್ಸಾಲಯಗಳಿಂದ ಗುರುತಿಸಲಾಗದ 20 ರೋಗಿಗಳ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಲಾಯಿತು.

ಎಐ ತನ್ನ ವೈದ್ಯಕೀಯ ಸಲಹೆ ಮತ್ತು ಮೌಲ್ಯಮಾಪನಗಳ ನಿಖರತೆ ಮತ್ತು ಪರಿಪೂರ್ಣತೆ ಎರಡರಲ್ಲೂ ಮಾನವ ತಜ್ಞರಿಗೆ ಸರಿಹೊಂದುತ್ತದೆ ಅಥವಾ ಉತ್ತಮವಾಗಿದೆ ಎಂದು ಫಲಿತಾಂಶಗಳು ತೋರಿಸಿವೆ.

ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಗ್ಲಾಕೋಮಾ ಸಮಸ್ಯೆ ಮತ್ತು ಪ್ರಕರಣ-ನಿರ್ವಹಣಾ ಸಲಹೆಗೆ ಪ್ರತಿಕ್ರಿಯೆಯಾಗಿ ಎಐ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಅದರಲ್ಲೂ ರೆಟಿನಾ ಸಂಬಂಧಿತ ಪ್ರಶ್ನೆಗಳಲ್ಲಿ ಹೆಚ್ಚು ಸಮತೋಲಿತ ಫಲಿತಾಂಶ ನೀಡಿದೆ. ಈ ವಿಷಯದಲ್ಲಿ ಎಐ ನಿಖರತೆಯಲ್ಲಿ ಮಾನವರಿಗೆ ಸರಿಸಾಟಿಯಾಗಿ ಕೆಲಸ ಮಾಡಿದೆ. ಅಲ್ಲದೆ ಪರಿಪೂರ್ಣತೆಯಲ್ಲಿ ತಜ್ಞರನ್ನು ಮೀರಿಸಿದೆ.

ಇದನ್ನೂ ಓದಿ: ಜಿಮೇಲ್​ ಮುಚ್ಚಲ್ಲ, ಎಂದಿನಂತೆ ಕೆಲಸ ಮಾಡುತ್ತೆ: ಗೂಗಲ್ ಸ್ಪಷ್ಟೀಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.