ನವದೆಹಲಿ: ಸ್ಯಾಮ್ ಸಂಗ್ ತನ್ನ ಮುಂದಿನ ಶ್ರೇಣಿಯ ಮಡಚಬಹುದಾದ ಸ್ಮಾರ್ಟ್ಫೋನ್ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್ 6 ಗಳ ಮುಂಗಡ ಬುಕ್ಕಿಂಗ್ ಅನ್ನು (pre-reservations) ಪ್ರಾರಂಭಿಸಿದೆ. ಈ ಅತ್ಯಾಧುನಿಕ ಸ್ಮಾರ್ಟ್ಪೋನ್ಗಳು ಜುಲೈ 10 ರಂದು ಪ್ಯಾರಿಸ್ ನಲ್ಲಿ ನಡೆಯಲಿರುವ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಈವೆಂಟ್ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿವೆ. ಈ ಫೋನ್ಗಳನ್ನು ಎಲ್ಲರಿಗಿಂತ ಮೊದಲು ಕೊಳ್ಳಲು ಬಯಸುವವರು Samsung ಡಾಟ್ com, ಸ್ಯಾಮ್ ಸಂಗ್ ಎಕ್ಸ್ ಕ್ಲೂಸಿವ್ ಸ್ಟೋರ್ಗಳು, Amazon ಡಾಟ್ in, Flipkart ಡಾಟ್ com ಮತ್ತು ಭಾರತದಾದ್ಯಂತದ ಪ್ರಮುಖ ಚಿಲ್ಲರೆ ಮಳಿಗೆಗಳಲ್ಲಿ ಇವನ್ನು ಪ್ರಿ-ರಿಸರ್ವ್ ಮಾಡಬಹುದು.
ಪ್ರಿ-ರಿಸರ್ವ್ ಮಾಡುವುದು ಹೇಗೆ? : ಗ್ರಾಹಕರು 1,999 ರೂ.ಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಹೊಸ ಫೊಲ್ಡಬಲ್ ಫೋನ್ ಅನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ಈ ಮುಂಗಡ ಬುಕಿಂಗ್ ಸಮಯಾವಧಿ ಜೂನ್ 26, 2024 ರಂದು ಬೆಳಗ್ಗೆ 10:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಜುಲೈ 10, 2024 ರಂದು ರಾತ್ರಿ 11:59 ಕ್ಕೆ ಕೊನೆಗೊಳ್ಳುತ್ತದೆ.
ಆರಂಭಿಕ ಕೊಳ್ಳುಗರಿಗೆ ವಿಶೇಷ ಆಫರ್: ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು ತಮ್ಮ ಮೆಚ್ಚಿನ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಅನ್ನು ಎಲ್ಲರಿಗಿಂತ ಮೊದಲಿಗೆ ಪಡೆಯುವುದು ಮಾತ್ರವಲ್ಲದೇ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ. ಪ್ರಿ-ರಿಸರ್ವ್ ಮಾಡಿ ಹೆಚ್ಚುವರಿಯಾಗಿ 8,999 ರೂ.ಗಳವರೆಗೆ ಆಫರ್ಗಳನ್ನು ಪಡೆಯಬಹುದು ಎಂದು ಸ್ಯಾಮ್ಸಂಗ್ ಹೇಳಿದೆ.
ಆಫರ್ನಲ್ಲಿ ಇರುವುದೇನು? : ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ samsung ಡಾಟ್ com ಅಥವಾ ಸ್ಯಾಮ್ ಸಂಗ್ ಶಾಪ್ ಅಪ್ಲಿಕೇಶನ್ನಲ್ಲಿ ಖರ್ಚು ಮಾಡಬಹುದಾದ 7,000 ರೂ.ಗಳವರೆಗೆ ಇ-ವೋಚರ್ ಸಿಗುತ್ತದೆ. ಮುಖ್ಯ ಉತ್ಪನ್ನವನ್ನು ಕಾರ್ಟ್ಗೆ ಸೇರಿಸಿದ ನಂತರ ಮತ್ತು ಚೆಕ್ ಔಟ್ ನಲ್ಲಿ ಇ-ವೋಚರ್ ಅನ್ನು ಅನ್ವಯಿಸಿದ ನಂತರ ಈ ಪ್ರಯೋಜನವು ಸಿಗುತ್ತದೆ. ಅಲ್ಲದೇ ಪ್ರಿ-ರಿಸರ್ವ್ಗಾಗಿ ಪಾವತಿಸಿದ 1,999 ರೂ.ಗಳನ್ನು ಹೊಸ ಗ್ಯಾಲಕ್ಸಿ ಸಾಧನದ ಖರೀದಿ ಮೌಲ್ಯಕ್ಕೆ ಸರಿಹೊಂದಿಸಲಾಗುತ್ತದೆ.
ಭಾರತ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಏಕಕಾಲದಲ್ಲಿ ತನ್ನ ಪ್ರಮುಖ ಸಾಧನಗಳನ್ನು ಬಿಡುಗಡೆ ಮಾಡುವ ಸ್ಯಾಮ್ ಸಂಗ್ನ ಕಾರ್ಯತಂತ್ರವು ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿರುವ ಭಾರತದ ಮೇಲೆ ಅದರ ಬದ್ಧತೆಯನ್ನು ಒತ್ತಿಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಸ್ಯಾಮ್ ಸಂಗ್ ಫೋಲ್ಡ್ ಮತ್ತು ಫ್ಲಿಪ್ ಸರಣಿ ಸೇರಿದಂತೆ ತನ್ನ ಮಾರ್ಕ್ಯೂ ಸಾಧನಗಳನ್ನು ಜಾಗತಿಕ ಬಿಡುಗಡೆಯೊಂದಿಗೆ ಭಾರತದಲ್ಲಿಯೂ ಏಕಕಾಲದಲ್ಲಿ ಕಂಪನಿ ಬಿಡುಗಡೆ ಮಾಡಿರುವುದು ವಿಶೇಷ.
ಇದನ್ನೂ ಓದಿ : ಉಪಗ್ರಹ ತಪಾಸಣೆ: ಆಸ್ಟ್ರೇಲಿಯಾದ ಸ್ಪೇಸ್ ಮೆಷಿನ್ಸ್, ಇಸ್ರೊ ಮಧ್ಯೆ ಒಡಂಬಡಿಕೆ - Australia India Space Research