ರೋಮ್, ಇಟಲಿ: ಗಂಡು ಶಾರ್ಕ್ನ ನೆರವಿಲ್ಲದೇ ಹೆಣ್ಣು ಶಾರ್ಕ್ ಕನ್ಯಾ ಜನನದ ಮೂಲಕ ಸಂತಾನ್ಪೋತ್ತಿ ನಡೆಸಿರುವ ಶಾರ್ಕ್ ತಳಿಯೊಂದನ್ನು ಇಟಲಿಯ ಸಂಶೋಧಕರು ಮೊದಲ ಬಾರಿಗೆ ಪತ್ತೆ ಹಚ್ಚಿದ್ದಾರೆ. ಈ ಕುರಿತು ಸೈಂಟಿಫಿಕ್ ಜರ್ನಲ್ನಲ್ಲಿ ಕೂಡ ವರದಿಯಾಗಿದೆ. ಮೆಡಿಟೇರಿಯನ್ ಮತ್ತು ಇತರ ಬೆಚ್ಚಗಿನ ನೀರಿನಲ್ಲಿ ಅಕ್ರಮ ಮೀನುಗಾರಿಕೆ ಭೀತಿಯಲ್ಲಿರುವ ಮಸ್ಟೆಲಸ್ ಮಸ್ಟೆಲಸ್ ಎಂಬ ಜಾತಿಯ ಶಾರ್ಕ್ನಲ್ಲಿ ಈ ವಿದ್ಯಮಾನ ಕಂಡು ಬಂದಿದೆ. ಇದೀಗ ಅಚ್ಚರಿಗೂ ಕಾರಣವಾಗಿದೆ.
ಶಾರ್ಕ್ ಪ್ರಯೋಗ: ಈ ಸಂಬಂಧ ಪಿಡ್‌ಮಾಂಟ್, ಲಿಗುರಿಯಾ ಮತ್ತು ಆಸ್ಟಾ ವ್ಯಾಲಿಯ ಪ್ರಾಯೋಗಿಕ ಝೂಪ್ರೊಫಿಲ್ಯಾಕ್ಟಿಕ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಈ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ್ದಾರೆ. ಈ ವೇಳೆ, ಅವರ ಸುಪರ್ಧಿಯಲ್ಲಿರುವ ಎರಡು ಹೆಣ್ಣು ಮೀನಿನ ಪ್ರಕ್ರಿಯೆ ಗಮನಿಸಲಾಗಿದೆ. ಮಸ್ಟೆಲಸ್ ಶಾರ್ಕ್‌ಗಳು ಪಾರ್ಥೆನೋಜೆನೆಸಿಸ್ ಶಾರ್ಕ್‌ಗಳು ಅಂಡಾಣುಗಳಿಗೆ ಯಾವುದೇ ವೀರ್ಯದ ಅಗತ್ಯವನ್ನು ಹೊಂದದೇ ಅಲೈಂಗಿಕವಾಗಿ ಸಂತಾನೋತ್ಪತ್ತಿ ನಡೆಸಿವೆ. ಈ ಪ್ರಕ್ರಿಯೆ 2020 ರಿಂದ ಸಾಗಿದೆ.
18 ವರ್ಷದ ಈ ಎರಡು ಶಾರ್ಕ್ಗಳನ್ನು 2010 ರಿಂದ ಸಾರ್ಡಿನಿಯಾದಲ್ಲಿನ ಕಾಲಾ ಗೊನೊನ್ ಅಕ್ವೇರಿಯಂನಲ್ಲಿ ಇಡಲಾಗಿದೆ. ಈ ರೀತಿ ಪಾರ್ಥೆನೊಜೆನೆಸಿಸ್ ಪ್ರಕ್ರಿಯೆ ಪ್ರತಿ ವಾರ್ಷಿಕವಾಗಿ ಕಂಡು ಬಂದಿದೆ. ಶಾರ್ಕ್‌ಗಳಲ್ಲಿ ವಾರ್ಷಿಕವಾಗಿ ಎರಡು ಹೆಣ್ಣುಗಳ ನಡುವೆ ಪರ್ಯಾಯವಾಗಿ ಪಾರ್ಥೆನೋಜೆನೆಸಿಸ್ ಸಂಭವಿಸಬಹುದು ಎಂದು ಲೇಖಕರು ತಿಳಿಸಿದ್ದಾರೆ
ಪಾರ್ಥೆನೊಜೆನೆಸಿಸ್ ಶಾರ್ಕ್: ಪಾರ್ಥೆನೊಜೆನೆಸಿಸ್ ಚಕ್ರದಲ್ಲಿ ಫಲವತ್ತತೆ ಅಂಂಡಾಣು ಅಥವಾ ಫಲವತ್ತತೆಯಲ್ಲದ ಅಂಡಾಣುಗಳ ಜೊತೆ ಅಲೈಂಗಿಕವಾಗಿ ಸಂತತಿ ನಡೆಸುವ ಪ್ರಕ್ರಿಯೆಯಾಗಿದೆ. ಇದು 15ಸಾವಿರ ತಳಿಗಳಲ್ಲಿ ಈ ರೀತಿ ಪ್ರಕ್ರಿಯೆ ಕಾಣಬಹುದಾಗಿದ್ದು, ಇದನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಂಶೋಧಕ ಲೇಖಕರು ತಿಳಿಸಿದ್ದಾರೆ.
ಪಾರ್ಥೆನೊಜೆನೆಸಿಸ್ ಕಶೇರುಗಳಿಗಿಂತ ಅಕಶೇರುಕಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಆದರೆ, ಸಸ್ತನಿಗಳಲ್ಲಿ ಕಂಡು ಬಂದಿಲ್ಲ. ಶಾರ್ಕ್, ರೇಸ್ ಮತ್ತು ಸ್ಕೇಟ್ಸ್ಗಳು ಸುತ್ತಲಿನ ಪರಿಸ್ಥಿಗಳ ಪ್ರಕಾರ ಅಳವಡಿಕೆ ತಂತ್ರದ ಮಾರ್ಪಡಿಸಿಕೊಳ್ಳುತ್ತವೆ ಎಂದಿದ್ದಾರೆ ಲೇಖಕರು.
ಪುರುಷ ಶಾರ್ಕ್ಗಳ ಸಂಖ್ಯೆಯಲ್ಲಿ ಇಳಿಕೆ: ಪಾರ್ಥೆನೊಜೆನೆಸಿಸ್ ಕಾರ್ಯವಿಧಾನದವೂ ಅಸ್ಪಷ್ಟವಾಗಿದೆ. ಪುರುಷ ಸಂಖ್ಯೆಯಲ್ಲಿನ ಇಳಿಕೆ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದಿದ್ದಾರೆ. ಈ ವಿದ್ಯಾಮಾನದ ಅರ್ಥೈಸಿಕೊಳ್ಳುವಲ್ಲಿ ಶಾರ್ಕ್‌ಗಳು ಅತ್ಯಂತ ಸವಾಲನ್ನು ಒಡ್ಡುತ್ತವೆ. ಆದರೆ ಸೆರೆಯಲ್ಲಿರುವ ಪರಿಸ್ಥಿತಿಗಳು ದೀರ್ಘಾವಧಿಯ ಮೇಲ್ವಿಚಾರಣೆಗೆ ಸೂಕ್ತವಾಗಿದೆ. ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾದಲ್ಲಿನ ಅಕ್ವೇರಿಯಂಗಳಲ್ಲಿ ಕಳೆದೆರಡು ದಶಕಗಳಿಂದ ಇತರ ಶಾರ್ಕ್ ತಳಿಗಳಲ್ಲಿನ ವಿದ್ಯಮಾನಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ಶಾರ್ಕ್: ಎಂ ಮಸ್ಟಲಸ್ ಮಧ್ಯಮ ಗಾತ್ರದ ಶಾರ್ಕ್ ಆಗಿದ್ದು, ನೀರಿನ ಮೇಲೆ ತೇಲುವ ಈ ಜೀವಿ 25 ವರ್ಷ ಬದುಕಬಲ್ಲದು. ಅಳವಿನಂಚಿನಲ್ಲಿರುವ ಪ್ರಭೇದ ಇದಾಗಿದ್ದು, ಮುಂದಿನ ಕೆಲವು ದಶಕದಲ್ಲಿ ಇದರ ಸಂಖ್ಯೆಯಲ್ಲಿ ಅರ್ಧದಷ್ಟು ಕುಸಿತ ಕಾಣುತ್ತದೆ. ಕಳೆದ 13 ವರ್ಷಗಳಿಂದ 18 ವರ್ಷದ ಶಾರ್ಕ್ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಪುರುಷ ಶಾರ್ಕ್ ಬೆಂಬಲವಿಲ್ಲದೇ ಇದು ವಾರ್ಷಿಕವಾಗಿ ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿದೆ ಎಂದು ಲೇಖಕರು ತಿಳಿಸಿದ್ದಾರೆ.
ಡಿಎನ್ಎ ಅಧ್ಯಯನ: ಗಂಡಿನ ನೆರವಿಲ್ಲದೇ ಶಾರ್ಕ್ಗಳ ಸಂತಾನೋತ್ಪತ್ತಿ ಸಾಧ್ಯತೆಯಲ್ಲಿ ಡಿಎನ್ಎ ಅಧ್ಯಯನ ಮಾಡಲಾಗಿದೆ. ಇದರಲ್ಲಿ ತಾಯಿ ಶಾರ್ಕ್‌ಗಳಲ್ಲಿ ದೀರ್ಘಕಾಲದವರೆಗೆ ಸಂಗ್ರಹವಿರುವ ವೀರ್ಯಗಳಿಂದ ಅವು ಗರ್ಭಧರಿಸುತ್ತವೆ ಎಂದು ಹೇಳಲಾಗಿದೆ. ಈ ಪಾರ್ಥೆನೊಜೆನಿಸಿಸ್ನಿಂದ ಜನಿಸಿದ ಶಾರ್ಕ್‌ಗಳು ಇಂದಿಗೂ ಅಕ್ವೇರಿಯಂನಲ್ಲಿ ಬದುಕಿದೆ. ಈ ಎರಡು ಮರಿಗಳು ಆರೋಗ್ಯವಾಗಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದ ಅರಣ್ಯದಲ್ಲಿ ಶ್ರೀಲಂಕಾದ ಅಪರೂಪದ ಕಪ್ಪೆ ಪತ್ತೆ: ದೇಶದಲ್ಲಿ ಇದೇ ಮೊದಲ ಬಾರಿಗೆ ಗೋಚರ