Digital Payment Transactions: ಭಾರತದಲ್ಲಿ ಡಿಜಿಟಲ್ ಪಾವತಿ ವಹಿವಾಟುಗಳ ಸಂಖ್ಯೆಯು 2017-18ರ ಆರ್ಥಿಕ ವರ್ಷದಲ್ಲಿ 2,071 ಕೋಟಿಯಿಂದ 2023-24ರ ಆರ್ಥಿಕ ವರ್ಷದಲ್ಲಿ 18,737 ಕೋಟಿಗೆ ಏರಿಕೆಯಾಗಿದೆ. ಇದು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) 44 ಪ್ರತಿಶತಕ್ಕೂ ಹೆಚ್ಚು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ 2024-25 ರ ಕಳೆದ ಐದು ತಿಂಗಳುಗಳಲ್ಲಿ (ಏಪ್ರಿಲ್-ಆಗಸ್ಟ್) ವಹಿವಾಟಿನ ಪ್ರಮಾಣವು 8,659 ಕೋಟಿ ರೂಪಾಯಿಗಳಿಗೆ ತಲುಪಿದೆ. ವಹಿವಾಟಿನ ಮೌಲ್ಯವು FY24 ರಲ್ಲಿ 1,962 ಲಕ್ಷ ಕೋಟಿ ರೂಪಾಯಿಗಳಿಂದ 3,659 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ಇದು 11 ಶೇಕಡಾ CAGR ಆಗಿದೆ. ಹೆಚ್ಚುವರಿಯಾಗಿ, FY25 ರ ಕಳೆದ 5 ತಿಂಗಳುಗಳಲ್ಲಿ, ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆ (DFS) ಪ್ರಕಾರ ಒಟ್ಟು ವಹಿವಾಟಿನ ಮೌಲ್ಯವು 1,669 ರೂ. ಲಕ್ಷ ಕೋಟಿಗೆ ಏರಿಕೆಯಾಗಿದೆ.
UPI ವಹಿವಾಟಿನ ಪ್ರಮಾಣವು FY 2017-18 ರಲ್ಲಿ 92 ಕೋಟಿ ರೂ.ಗಳಿಂದ 2023-24 FY ನಲ್ಲಿ 13,116 ಕೋಟಿ ರೂ.ಗಳಿಗೆ ಅಂದ್ರೆ 129 ಶೇಕಡಾ CAGR ಆಗಿದೆ. UPI ವಹಿವಾಟುಗಳ ಮೌಲ್ಯವು FY 17-18 ರಲ್ಲಿ ರೂ 1 ಲಕ್ಷ ಕೋಟಿಯಿಂದ FY 23-24 ರಲ್ಲಿ ರೂ. 200 ಲಕ್ಷ ಕೋಟಿಗೆ ಏರಿತು, ಇದು 138 ಶೇಕಡಾ CAGR ಬೆಳವಣಿಗೆಯಾಗಿದೆ. ಕಳೆದ 5 ತಿಂಗಳಲ್ಲಿ ಒಟ್ಟು ವಹಿವಾಟಿನ ಮೌಲ್ಯ 101 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. UPI ಈಗ ಪ್ರಮುಖ ಮಾರುಕಟ್ಟೆಗಳಾದ UAE, ಸಿಂಗಾಪುರ್, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್ ಸೇರಿದಂತೆ ಏಳು ದೇಶಗಳಲ್ಲಿ ತಡೆರಹಿತ ನೇರ ವಹಿವಾಟುಗಳನ್ನು ಸುಗಮಗೊಳಿಸುತ್ತದೆ.
ಹಿಂದಿನ ಹಣಕಾಸಿನ ವರ್ಷಗಳಿಗೆ ಹೋಲಿಸಿದರೆ, ಡಿಜಿಟಲ್ ಪಾವತಿಗಳು ದೇಶದಲ್ಲಿ ಗಮನಾರ್ಹವಾದ ವಿಸ್ತರಣೆಯನ್ನು ಹೊಂದಿದೆ. ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳ ಬೆಳೆಯುತ್ತಿರುವ ನೆಟ್‌ವರ್ಕ್‌ನಿಂದ ಯುಪಿಐ ಬಳಕೆ ಸುಲಭವಾಗಿದೆ. ಹೀಗಾಗಿ ಯುಪಿಐ ಅನ್ನು ದೇಶಾದ್ಯಂತ ಲಕ್ಷಾಂತರ ಬಳಕೆದಾರರಿಗೆ ನೈಜ-ಸಮಯದ ಪಾವತಿಗಳ ಅತ್ಯಂತ ಆದ್ಯತೆಯ ವಿಧಾನವನ್ನಾಗಿ ಮಾಡಿದೆ ಎಂದು ಹಣಕಾಸು ಸಚಿವಾಲಯವು ಗಮನಿಸಿದೆ.
ಡೇಟಾದ ಪ್ರಕಾರ, ಪೀರ್-ಟು-ಮರ್ಚೆಂಟ್ (P2M) ವಹಿವಾಟುಗಳ ಕೊಡುಗೆಯು ಆಗಸ್ಟ್‌ನಲ್ಲಿ 62.40 ಪ್ರತಿಶತವನ್ನು ತಲುಪಿದೆ. ಈ ವಹಿವಾಟುಗಳಲ್ಲಿ 85 ಪ್ರತಿಶತವು 500 ರೂ.ವರೆಗಿನ ಮೌಲ್ಯವನ್ನು ಹೊಂದಿದೆ. ಡಿಜಿಟಲ್ ಪಾವತಿ ಕ್ರಾಂತಿಯು ಅದರ ಗಡಿಯನ್ನು ಮೀರಿ ವಿಸ್ತರಿಸುತ್ತಿದೆ. ಜಾಗತಿಕ ನೈಜ-ಸಮಯದ ಪಾವತಿ ವಹಿವಾಟುಗಳಲ್ಲಿ ಸುಮಾರು 49 ಪ್ರತಿಶತದಷ್ಟು ಭಾರತದಲ್ಲಿ ನಡೆಯುತ್ತಿದೆ ಎಂದು ACI ವರ್ಲ್ಡ್‌ವೈಡ್ ರಿಪೋರ್ಟ್ 2024 ಹೇಳಿದೆ.
ಓದಿ: ಉದ್ಯೋಗ ಜಗತ್ತಿನಲ್ಲಿ ಪ್ರಾಬಲ್ಯ ಮೆರೆಯಲಿರುವ ಎಐ: ಈ ಕೋರ್ಸ್ ಕಲಿಯೋದರಿಂದ ಹಲವು ಲಾಭ! - AI skills