ETV Bharat / technology

ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್'ಇ-6 ನೌಕೆ - Chang e 6 lands on Moon - CHANG E 6 LANDS ON MOON

ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಚಂದ್ರನ ದೂರದ ಬದಿಯಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ.

ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್'ಇ-6 ನೌಕೆ
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚೀನಾದ ಚಾಂಗ್'ಇ-6 ನೌಕೆ (IANS image)
author img

By ETV Bharat Karnataka Team

Published : Jun 2, 2024, 12:34 PM IST

ಬೀಜಿಂಗ್ : ಚೀನಾದ ಚಾಂಗ್'ಇ-6 ಬಾಹ್ಯಾಕಾಶ ನೌಕೆಯು ಭಾನುವಾರ ಬೆಳಗ್ಗೆ ಚಂದ್ರನ ದೂರದ ಭಾಗದ ಮೇಲೆ ಇಳಿದಿದೆ ಮತ್ತು ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಭೂಪ್ರದೇಶದಲ್ಲಿನ ಮಣ್ಣು ಹಾಗೂ ಕಲ್ಲುಗಳ ಮಾದರಿಗಳನ್ನು ಸಂಗ್ರಹಿಸಲಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸಿಎನ್ಎಸ್ಎ) ಪ್ರಕಟಿಸಿದೆ.

ಕ್ವೆಕಿಯಾವೊ -2 ರಿಲೇ ಉಪಗ್ರಹದ ಬೆಂಬಲದೊಂದಿಗೆ, ಚಾಂಗ್'ಇ -6 ನೌಕೆಯ ಲ್ಯಾಂಡರ್-ಅಸೆಂಡರ್ ಸಂಯೋಜನೆಯು ದಕ್ಷಿಣ ಧ್ರುವ-ಐಟ್ಕೆನ್ (ಎಸ್ಪಿಎ) ಬೇಸಿನ್ ಪ್ರದೇಶದಲ್ಲಿ ಬೆಳಗ್ಗೆ 6:23 ಕ್ಕೆ (ಬೀಜಿಂಗ್ ಸಮಯ) ಗೊತ್ತುಪಡಿಸಿದ ಲ್ಯಾಂಡಿಂಗ್ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಚಾಂಗ್'ಇ-6 ಆರ್ಬಿಟರ್, ರಿಟರ್ನರ್, ಲ್ಯಾಂಡರ್ ಮತ್ತು ಅಸೆಂಡರ್​ಗಳನ್ನು ಒಳಗೊಂಡಿದೆ.

ಈ ವರ್ಷದ ಮೇ 3 ರಂದು ಉಡಾವಣೆಯಾದಾಗಿನಿಂದ ಇದು ಭೂಮಿಯಿಂದ ಚಂದ್ರನತ್ತ ಪಯಣ, ಚಂದ್ರನ ಸಮೀಪ ಬ್ರೇಕಿಂಗ್, ಚಂದ್ರನ ಕಕ್ಷೆ ಪ್ರವೇಶಿಸುವಿಕೆ ಮತ್ತು ಇಳಿಯುವಿಕೆಯಂತಹ ವಿವಿಧ ಹಂತಗಳನ್ನು ದಾಟಿದೆ. ಲ್ಯಾಂಡರ್-ಅಸೆಂಡರ್ ಸಂಯೋಜನೆಯು ಮೇ 30 ರಂದು ಆರ್ಬಿಟರ್-ರಿಟರ್ನರ್ ಸಂಯೋಜನೆಯಿಂದ ಬೇರ್ಪಟ್ಟಿದೆ ಎಂದು ಸಿಎನ್ಎಸ್ಎ ತಿಳಿಸಿದೆ.

ಲ್ಯಾಂಡರ್-ಅಸೆಂಡರ್ ಸಂಯೋಜನೆಯು ಬೆಳಗ್ಗೆ 6:09 ಕ್ಕೆ ನಿಯಂತ್ರಿತವಾಗಿ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ವೇರಿಯೆಬಲ್ ಥ್ರಸ್ಟ್ ಹೊಂದಿರುವ ಮುಖ್ಯ ಎಂಜಿನ್ ಅನ್ನು ಸ್ಟಾರ್ಟ್​ ಮಾಡಲಾಯಿತು ಮತ್ತು ಸಂಯೋಜನೆಯು ತ್ವರಿತವಾಗಿ ತನ್ನ ಎತ್ತರವನ್ನು ಸರಿಹೊಂದಿಸಿಕೊಂಡು ಕ್ರಮೇಣ ಚಂದ್ರನ ಮೇಲ್ಮೈಯನ್ನು ಸಮೀಪಿಸಿತು.

ಇಳಿಯುವ ಸಮಯದಲ್ಲಿ, ಅಡೆತಡೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ಸ್ವಯಂಚಾಲಿತ ದೃಶ್ಯ ಅಡೆತಡೆ ತಪ್ಪಿಸುವ ವ್ಯವಸ್ಥೆಯನ್ನು ಬಳಸಲಾಯಿತು. ನಂತರ ಬೆಳಕನ್ನು ಗುರುತಿಸುವ ಕ್ಯಾಮೆರಾ ಚಂದ್ರನ ಮೇಲ್ಮೈಯ ಪ್ರಕಾಶ ಮತ್ತು ಕತ್ತಲೆಯ ಆಧಾರದ ಮೇಲೆ ತುಲನಾತ್ಮಕವಾಗಿ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಆಯ್ಕೆ ಮಾಡಿತು.

ನಂತರ ಈ ಸಂಯೋಜನೆಯು ಚಂದ್ರನ ಮೇಲ್ಮೈಯಲ್ಲಿ ಅಡೆತಡೆಗಳನ್ನು ಪತ್ತೆಹಚ್ಚಲು ಲೇಸರ್ 3 ಡಿ ಸ್ಕ್ಯಾನರ್ ಬಳಸಿ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶದಿಂದ ಸುಮಾರು 100 ಮೀಟರ್ ಎತ್ತರದಲ್ಲಿ ಹಾರಾಡುತ್ತ ನಿಧಾನವಾಗಿ ಲಂಬವಾಗಿ ಇಳಿಯುವ ಮೊದಲು ಅಂತಿಮ ಲ್ಯಾಂಡಿಂಗ್ ಸೈಟ್ ಅನ್ನು ಆಯ್ಕೆ ಮಾಡಲು ಪ್ರಯತ್ನಿಸಿತು.

ಸಂಯೋಜನೆಯು ಚಂದ್ರನ ಮೇಲ್ಮೈಯನ್ನು ಸಮೀಪಿಸುತ್ತಿದ್ದಂತೆ ಎಂಜಿನ್ ಅನ್ನು ಸ್ಥಗಿತಗೊಳಿಸಿತು ಮತ್ತು ಕುಶನ್ ವ್ಯವಸ್ಥೆಯಿಂದ ರಕ್ಷಿಸಲ್ಪಟ್ಟ ಮುಕ್ತ ಪತನದ (ಫ್ರೀ ಫಾಲ್) ಮೂಲಕ ಚಂದ್ರನ ನೆಲವನ್ನು ಸ್ಪರ್ಶಿಸಿತು. ಚಾಂಗ್'ಇ -6 ಮಿಷನ್ ಚಂದ್ರನ ದೂರದ ಭಾಗದಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ಮತ್ತು ಅವನ್ನು ಭೂಮಿಗೆ ಮರಳಿ ತರುವ ಉದ್ದೇಶವನ್ನು ಹೊಂದಿದೆ. ಇದು ಮಾನವ ಚಂದ್ರ ಪರಿಶೋಧನೆಯ ಇತಿಹಾಸದಲ್ಲಿ ಈ ರೀತಿಯ ಮೊದಲ ಪ್ರಯತ್ನವಾಗಿದೆ.

ಇದನ್ನೂ ಓದಿ : ಜೆನ್​ ಎಐ ಸ್ಮಾರ್ಟ್​ಫೋನ್​ಗಳಿಗೆ ಹೆಚ್ಚಿದ ಬೇಡಿಕೆ: ಮಾರಾಟ ಶೇ 6ರಷ್ಟು ಹೆಚ್ಚಳ - AI Smartphone sales

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.