ETV Bharat / technology

ಚಾಟ್​ ಜಿಪಿಟಿಗೆ ಬರಲಿದೆ ಸ್ಮರಣಶಕ್ತಿ: ನಿಮ್ಮ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಲಿದೆ ಚಾಟ್ ಬಾಟ್ - ಚಾಟ್​ ಜಿಪಿಟಿ

ಚಾಟ್​ ಜಿಪಿಟಿಗೆ ಸ್ಮರಣ ಶಕ್ತಿಯನ್ನು ನೀಡಲು ಓಪನ್ ಎಐ ಮುಂದಾಗಿದೆ.

ChatGPT to get memory to remember who you are, what you like

author img

By ETV Bharat Karnataka Team

Published : Feb 14, 2024, 12:45 PM IST

ನವದೆಹಲಿ: ಚಾಟ್​ ಜಿಪಿಟಿಗೆ ಸ್ಮರಣಶಕ್ತಿಯನ್ನು (ಮೆಮೊರಿ) ನೀಡುವ ತಂತ್ರಜ್ಞಾನವನ್ನು ಓಪನ್ ಎಐ ಪರೀಕ್ಷೆ ಮಾಡುತ್ತಿದೆ. ಇದು ಕಾಲಾನಂತರದಲ್ಲಿ ನಿಮ್ಮ ಬಗ್ಗೆ ಮತ್ತು ನೀವು ನಡೆಸಿದ ಸಂಭಾಷಣೆಗಳ ಬಗೆಗಿನ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಚಾಟ್​ ಬಾಟ್​ಗೆ ಸಹಾಯ ಮಾಡಲಿದೆ. ನೀವು ಬಯಸಿದ ಯಾವುದೇ ವಿಷಯವನ್ನು ನೆನಪಿಟ್ಟುಕೊಳ್ಳುವಂತೆ ನೀವು ನೇರವಾಗಿ ಚಾಟ್ ಜಿಪಿಟಿಗೆ ಹೇಳಬಹುದು. ನಂತರ ಅದು ಏನೆಲ್ಲ ಮಾಹಿತಿಯನ್ನು ನೆನಪಿಟ್ಟುಕೊಂಡಿದೆ ಎಂದು ಕೇಳಬಹುದು. ಅಲ್ಲದೇ ನಿಮಗೆ ಇಷ್ಟವಿರದಿದ್ದಲ್ಲಿ ನೆನಪಿಟ್ಟುಕೊಂಡಿದ್ದೆಲ್ಲವನ್ನೂ ಅಳಿಸಿ ಹಾಕುವಂತೆ ಅದಕ್ಕೆ ಸೂಚಿಸಬಹುದು.

"ಚಾಟ್ ಜಿಪಿಟಿಯ ಮೆಮೊರಿ ಸಂಗ್ರಹಣೆಯನ್ನು ನೀವು ಸಂಪೂರ್ಣವಾಗಿ ಆಫ್ ಮಾಡಬಹುದು. ಇದು ಎಷ್ಟು ಉಪಯುಕ್ತವಾಗಬಹುದು ಎಂಬುದನ್ನು ತಿಳಿಯಲು ನಾವು ಈ ವೈಶಿಷ್ಟ್ಯವನ್ನು ಚಾಟ್ ಜಿಪಿಟಿಯ ಉಚಿತ ಮತ್ತು ಪ್ಲಸ್ ಬಳಕೆದಾರರ ಸಣ್ಣ ಗುಂಪಿಗೆ ಪರಿಚಯಿಸುತ್ತಿದ್ದೇವೆ. ವಿಸ್ತೃತ ಬಿಡುಗಡೆಯ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದ್ದೇವೆ" ಎಂದು ಓಪನ್ಎಐ ಹೇಳಿಕೆಯಲ್ಲಿ ತಿಳಿಸಿದೆ.

"ಚಾಟ್ ಜಿಪಿಟಿಯ ಮೆಮೊರಿಯನ್ನು ನೀವು ಹೆಚ್ಚು ಬಳಸಿದಷ್ಟೂ ಅದು ಉತ್ತಮವಾಗತೊಡಗುತ್ತದೆ. ಕಾಲಾನಂತರದಲ್ಲಿ ಈ ಸುಧಾರಣೆಗಳು ನಿಮ್ಮ ಗಮನಕ್ಕೆ ಬರುತ್ತವೆ." ಎಂದು ಕಂಪನಿ ಹೇಳಿದೆ.

"ತಾತ್ಕಾಲಿಕವಾಗಿ ಯಾವುದೋ ಒಂದು ಸಂಭಾಷಣೆಯನ್ನು ಚಾಟ್​ ಜಿಪಿಟಿ ನೆನಪಿಟ್ಟುಕೊಳ್ಳಬಾರದು ಎಂದು ನೀವು ಬಯಸಿದರೆ ಆಗ ತಾತ್ಕಾಲಿಕ ಚಾಟ್ (temporary chat) ಬಳಸಬಹುದು. ತಾತ್ಕಾಲಿಕ ಚಾಟ್​ಗಳು ಹಿಸ್ಟರಿಯಲ್ಲಿ ಸೇವ್ ಆಗುವುದಿಲ್ಲ, ಮೆಮೊರಿಯನ್ನು ಬಳಸುವುದಿಲ್ಲ ಮತ್ತು ಇವನ್ನು ಎಐ ಮಾದರಿಗಳಿಗೆ ತರಬೇತಿ ನೀಡಲು ಬಳಸಲಾಗುವುದಿಲ್ಲ" ಎಂದು ಕಂಪನಿ ಹೇಳಿದೆ. ಜಿಪಿಟಿಗಳು ತಮ್ಮದೇ ಆದ ವಿಶಿಷ್ಟ ಮೆಮೊರಿಯನ್ನು ಹೊಂದಿರುತ್ತವೆ. ಬಿಲ್ಡರ್​ಗಳು ತಮ್ಮ ಜಿಪಿಟಿಗಳಿಗೆ ಮೆಮೊರಿಯನ್ನು ಸಕ್ರಿಯಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಡೀಫಾಲ್ಟ್ ಆಗಿ ಮೆಮೊರಿಯು ಆನ್ ಆಗಿರಲಿದೆ. ಓಪನ್ಎಐ ತನ್ನ ಮಾದರಿಗಳನ್ನು ಪರಿಷ್ಕರಿಸಲು ಇದರಲ್ಲಿ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಳ್ಳಲಿದೆ. ಆದಾಗ್ಯೂ, ಚಾಟ್​ ಜಿಪಿಟಿಯ ಎಂಟರ್​ಪ್ರೈಸ್ ಮತ್ತು ಟೀಂ ಬಳಕೆದಾರರು ತಮ್ಮ ಡೇಟಾದ ಮೇಲೆ ನಿಯಂತ್ರಣ ಉಳಿಸಿಕೊಳ್ಳಲಿದ್ದಾರೆ ಮತ್ತು ಮೆಮೊರಿಯಲ್ಲಿನ ಯಾವುದೇ ಮಾಹಿತಿಯನ್ನು ಕೇಂದ್ರ ಎಐ ಮಾದರಿಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

ಚಾಟ್ ಜಿಪಿಟಿ ಎಂಬುದು ಎಐ ತಂತ್ರಜ್ಞಾನದಿಂದ ಚಾಲಿತವಾದ ನೈಸರ್ಗಿಕ ಭಾಷಾ ಸಂಸ್ಕರಣಾ ಸಾಧನವಾಗಿದ್ದು, ಇದು ಚಾಟ್ ಬಾಟ್ ನೊಂದಿಗೆ ಮಾನವನ ರೀತಿಯಲ್ಲಿ ಮಾತುಕತೆ ನಡೆಸಲು ಮತ್ತು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಚಾಟ್ ಜಿಪಿಟಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬಲ್ಲದು, ನಿಮಗಾಗಿ ಇಮೇಲ್ ಬರೆಯಬಲ್ಲದು, ಪ್ರಬಂಧ ರಚಿಸಬಲ್ಲದು ಮತ್ತು ಕೋಡ್ ಬರೆಯಲು ನಿಮಗೆ ಸಹಾಯ ಮಾಡಬಹುದು.

ಇದನ್ನೂ ಓದಿ : ಕಾರಣವಿಲ್ಲದಿದ್ದರೂ ಸ್ಮಾರ್ಟ್​ಫೋನ್ ಕೈಗೆತ್ತಿಕೊಳ್ಳುವ ಅಭ್ಯಾಸ ನಿಮಗಿದೆಯಾ; ಇದಕ್ಕೆ ತಜ್ಞರು ಹೇಳುವುದೇನು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.