ETV Bharat / technology

ಮಹೀಂದ್ರಾ-ಇಂಡಿಗೋ ಮಧ್ಯೆ ತಿಕ್ಕಾಟ; M&M ವಿರುದ್ಧ ಪ್ರಕರಣ ದಾಖಲಿಸಿದ ಏರ್​ಲೈನ್ಸ್​ - BE 6E BRAND NAME ISSUE

BE 6e Brand Name Issue: ಇಂಡಿಗೋ ಏರ್​ಲೈನ್ಸ್​ ಮತ್ತು ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಮಧ್ಯೆ ಬ್ರ್ಯಾಂಡ್​ ಹೆಸರಿನ ಕುರಿತು ವಿವಾದ ನಡೆಯುತ್ತಿದೆ. ಸದ್ಯ ಈ ಪ್ರಕರಣ ಕೋರ್ಟ್​ ಮೆಟ್ಟಿಲೇರಿದೆ.

INDIGO AIRLINES  CASE AGAINST MAHINDRA  MAHINDRA BE 6E EV SUV CAR
ಮಹೀಂದ್ರಾ-ಇಂಡಿಗೋ ಮಧ್ಯೆ ತಿಕ್ಕಾಟ (Mahindra)
author img

By ETV Bharat Tech Team

Published : Dec 9, 2024, 7:50 AM IST

BE 6e Brand Name Issue: ಬಿಇ 6ಇ ಬ್ರ್ಯಾಂಡ್​ ಹೆಸರಿನ ಕುರಿತು ಎರಡು ಕಂಪನಿಗಳ ಮಧ್ಯೆ ವಿವಾದ ನಡೆಯುತ್ತಿದ್ದು, ಸದ್ಯ ಈ ಪ್ರಕರಣ ಕೋರ್ಟ್​ ಮೆಟ್ಟಿಲೇರಿದೆ. ಬಿಇ 6ಇ ಹೆಸರನ್ನು ಬಳಸಿದ್ದಕ್ಕೆ ಇಂಡಿಗೋ ಏರ್​ಲೈನ್ಸ್​ ಸಂಸ್ಥೆ ಸದ್ಯ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಹೆಸರು ಬಳಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೇನೆಂಬುದರ ಮಾಹಿತಿ ವಿವರ ಇಲ್ಲಿದೆ..

ಮಹೀಂದ್ರಾ ಇತ್ತೀಚೆಗೆ ಭಾರತದಲ್ಲಿ ಹೊಸ ಬಿಇ 6ಇ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್​ಯುವಿಯನ್ನು ಬಿಡುಗಡೆ ಮಾಡಿರುವುದು ಗೊತ್ತಿರುವ ಸಂಗತಿ. ಈ ಕಾರಿನ ಹೆಸರಿಗೆ ಸಂಬಂಧಿಸಿದಂತೆ ಇಂಡಿಗೋ ಏರ್‌ಲೈನ್ಸ್ ಮಹೀಂದ್ರಾ ವಿರುದ್ಧ ಪ್ರಕರಣ ದಾಖಲಿಸಿದೆ. ಇಂಡಿಗೋ ಏರ್‌ಲೈನ್ಸ್ ಮಾಲೀಕ ಇಂಟರ್ ಗ್ಲೋಬ್ ಏವಿಯೇಷನ್ ​​ತನ್ನ ಹೊಸ ಇವಿ ಬ್ರ್ಯಾಂಡ್‌ನಲ್ಲಿ 6ಇ ಬಳಕೆಗೆ ಸಂಬಂಧಿಸಿದಂತೆ ವಾಹನ ತಯಾರಕರನ್ನು ನ್ಯಾಯಾಲಯಕ್ಕೆ ಕೊಂಡೊಯ್ದಿದೆ. ಅಷ್ಟೇ ಅಲ್ಲ, ಮಹೀಂದ್ರಾ ಕಂಪನಿ ಬಿಇ 6ಇ ಹೆಸರನ್ನು ಬಳಸುವಂತಿಲ್ಲ ಎಂದು ಹೇಳಿದೆ.

ಸದ್ಯ ಈ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಈ ಹೆಸರಿನ ಬಗ್ಗೆ ಮಹೀಂದ್ರಾ ಪ್ರಮುಖ ನಿರ್ಣಯ ತೆಗೆದುಕೊಂಡಿದೆ. ನಾವು ನಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಕೊಂಡೊಯ್ಯುವಾಗ ನಮ್ಮ ಗ್ರಾಹಕರಿಗೆ ಉತ್ತಮ ಅನುಭವ ನೀಡುವುದು ನಮ್ಮ ಮೊದಲ ಆದ್ಯತೆ. ಹೀಗಾಗಿ ನಮ್ಮ ದೃಷ್ಟಿಯಿಂದ ವಿಮುಖರಾಗಲು ನಾವು ಬಯಸುವುದಿಲ್ಲ ಎಂದು ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪನಿ ತಿಳಿಸಿದೆ.

ಎರಡು ಬೃಹತ್​ ಮತ್ತು ಭಾರತೀಯ ಬಹುರಾಷ್ಟ್ರೀಯ ಕಂಪನಿಗಳು ಅನಗತ್ಯ ಸಂಘರ್ಷದಲ್ಲಿ ತೊಡಗಿಸಿಕೊಳ್ಳುವುದು ಸೂಕ್ತವಲ್ಲ. ನಾವು ಪರಸ್ಪರರ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಬೆಂಬಲಿಸಬೇಕು. ಆದ್ದರಿಂದ ಕಂಪನಿಯು ತನ್ನ ಉತ್ಪನ್ನವನ್ನು "ಬಿಇ6" ಎಂದು ಹೆಸರಿಸಲು ನಿರ್ಧರಿಸುತ್ತಿದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.

ಆದ್ರೂ ಇಂಡಿಗೋದ ಹಕ್ಕು ಆಧಾರರಹಿತವಾಗಿದೆ ಎಂದು ನಾವು ನಂಬುತ್ತೇವೆ. ನಮ್ಮ ಗುರುತು ವಿಭಿನ್ನವಾಗಿದೆ. ಆದ್ದರಿಂದ ನಾವು ಇದನ್ನು ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸುತ್ತೇವೆ ಮತ್ತು ಬಿಇ 6ಇ ಬ್ರ್ಯಾಂಡ್ ಹೆಸರಿಗೆ ನಮ್ಮ ಹಕ್ಕುಗಳನ್ನು ಕಾಯ್ದಿರಿಸುತ್ತೇವೆ ಎಂದು ಕಂಪನಿ ಹೇಳಿದೆ.

ಇಂಟರ್‌ಗ್ಲೋಬ್ ಬೇರೆ ಬೇರೆ ಉದ್ಯಮ ಮತ್ತು ವ್ಯವಹಾರದಲ್ಲಿ ಇಂಡಿಗೋ ಮಾರ್ಕ್ ಅನ್ನು ಬಳಸುವುದನ್ನು ಮುಂದುವರೆಸಿದೆ. ಆದ್ದರಿಂದ ಬಿಇ 6ಇಗೆ ಅವರ ಆಕ್ಷೇಪಣೆಯು ಅವರ ಸ್ವಂತ ಹಿಂದಿನ ನಡವಳಿಕೆಯೊಂದಿಗೆ ಅಸಮಂಜಸವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಮಹೀಂದ್ರಾ ಹೇಳಿದೆ.

ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಹೆಸರು ಬಿಇ 6 ಎಂದು ಬದಲಾಯಿಸಲಾಗಿದೆ ಎಂದು ಮಹೀಂದ್ರಾ ಮಾಹಿತಿ ನೀಡಿದೆ. ಆದರೂ ಸಹ ಮಹೀಂದ್ರಾ ಬಿಇ 6ಇ ಹೆಸರಿಗಾಗಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಲಿದೆ. ಹೊಸ ಮಹೀಂದ್ರಾ ಬಿಇ 6ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 18.90 ಲಕ್ಷ ರೂಪಾಯಿ. ಗ್ರಾಹಕರಿಗೆ ಈ ಕಾರಿನ ಡಿಲಿವೆರಿ ಮಾರ್ಚ್ 2025 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಹೇಳಿದೆ.

ಸ್ಟೈಲಿಶ್​ ಲುಕ್​: ಮಹೀಂದ್ರಾ BE6 ನ ಡಿಸೈನ್​ ಆಕರ್ಷಕವಾಗಿದೆ. ಇದರ ಸ್ಪೋರ್ಟಿ ಲುಕ್ ಜನರನ್ನು ಅದರಲ್ಲೂ ವಿಶೇಷವಾಗಿ ಯುವಕರನ್ನು ಸೆಳೆಯುತ್ತದೆ. ಇದಕ್ಕೆ J ಆಕಾರದ LED DRL, ಸಣ್ಣ ಗಾತ್ರದ ಗ್ರಿಲ್, ಆಕರ್ಷಕ ಮುನ್ನೋಟ ಮತ್ತು C ಆಕಾರದ LED ಟೈಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ.

ಪವರ್​ಫುಲ್​ ಫೀಚರ್​ ಜೊತೆ ಕ್ಯಾಬಿನ್: ಹೊಸ ಬಿಇ 6ನ ಕ್ಯಾಬಿನ್ ಅನ್ನು ವಿಮಾನ ಮಾದರಿಯಂತೆ ಇದೆ. ಇದನ್ನು ಕಾಕ್‌ಪಿಟ್‌ನಂತೆ ವಿನ್ಯಾಸಗೊಳಿಸಲಾಗಿದೆ ಎಂದು ಮಹೀಂದ್ರಾ ಹೇಳುತ್ತದೆ. ಇಲ್ಲಿ ಪನೋರಮಿಕ್ ಡಿಸ್​ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟ್ರಲ್ ಟಚ್‌ಸ್ಕ್ರೀನ್ ಅನ್ನು ಡ್ಯಾಶ್‌ಬೋರ್ಡ್‌ನಲ್ಲಿ ಕಾಣಬಹುದು. ಹೊಸ ಟ್ವಿನ್ ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ಸ್ಟ್ರಾಂಗ್ ಲುಕಿಂಗ್ ಗೇರ್/ಮೋಡ್ ಸೆಲೆಕ್ಟರ್ ಸಹ EV ಯೊಂದಿಗೆ ಲಭ್ಯವಿದೆ.

ಹೆಡ್ಸ್-ಅಪ್ ಡಿಸ್​ಪ್ಲೇ, ಪನೋರಮಿಕ್ ಗ್ಲಾಸ್ ರೂಫ್, ಆಂಬಿಯೆಂಟ್ ಲೈಟಿಂಗ್, ಕನೆಕ್ಟೆಡ್ ವಾಯ್ಸ್ ಟೆಕ್, ಡಾಲ್ಬಿ ಅಟ್ಮಾಸ್‌ನೊಂದಿಗೆ 16 ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೋ ಸಿಸ್ಟಮ್, ಲೆವೆಲ್ 2 ಎಡಿಎಎಸ್ ಮತ್ತು ಒನ್ ಟಚ್ ಪಾರ್ಕಿಂಗ್ ಕಾರ್ಯದಂತಹ ಫೀಚರ್​ಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಸಿಂಗಲ್​ ಚಾರ್ಜ್​ನಲ್ಲಿ ಪ್ರಯಾಣವೆಷ್ಟು? ಮಹೀಂದ್ರಾ ಬಿಇ6 ನೊಂದಿಗೆ 455 ಲೀಟರ್ ಬೂಟ್ ಸ್ಪೇಸ್ ನೀಡಿದ್ದು, ಅದರ ಇಂಧನ ಟ್ಯಾಂಕ್ 45 ಲೀಟರ್ ಆಗಿದೆ. ಕಂಪನಿಯು ಇಲ್ಲಿ 2 ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡಿದೆ. ಅದರಲ್ಲಿ ಮೊದಲನೆಯದು 59 kWh ಮತ್ತು ಎರಡನೆಯದು 79 kWh. ಎಲೆಕ್ಟ್ರಿಕ್ ಮೋಟಾರ್ 59 kW R ಬ್ಯಾಟರಿಯೊಂದಿಗೆ 170 kW ಪವರ್​ ಅನ್ನು ಉತ್ಪಾದಿಸುತ್ತದೆ. ಆದರೆ ಪವರ್​ಫುಲ್​ ಬ್ಯಾಟರಿ ಪ್ಯಾಕ್‌ನಲ್ಲಿ ಈ ಮೋಟಾರ್ 210 kW ಪವರ್ ಮತ್ತು 380 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ BE 6 ಅನ್ನು ಪೂರ್ಣ ಚಾರ್ಜ್‌ನಲ್ಲಿ 682 ಕಿ.ಮೀ ವರೆಗೆ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಓದಿ: ಅದ್ಭುತ!! ಪ್ರಪಂಚದ ಅತ್ಯಂತ ಚಿಕ್ಕದಾದ ವಾಕಿಂಗ್ ರೋಬೋಟ್ ಅಭಿವೃದ್ಧಿಪಡಿಸಿದ ತಜ್ಞರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.