Apple iPhone Exports: ಆಪಲ್ನ ಐಫೋನ್ ರಫ್ತು ವಿಷಯದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಸುಮಾರು 60 ಸಾವಿರ ಕೋಟಿ ಮೌಲ್ಯದ ಐಫೋನ್‌ಗಳು ಭಾರತದಿಂದ ರಫ್ತು ಆಗಿರುವುದು ಬೆಳಕಿಗೆ ಬಂದಿದೆ.
ಆಪಲ್ ಪ್ರಸ್ತಕ ಹಣಕಾಸು ವಿಷಯದಲ್ಲಿ ದಾಖಲೆಯೊಂದು ಬರೆದಿದೆ. ಐಫೋನ್ ರಫ್ತು ವಿಷಯದಲ್ಲಿ ಆಪಲ್ ಭಾರತದಿಂದ ಸುಮಾರು 60 ಸಾವಿರ ಕೋಟಿ ಮೌಲ್ಯದ ಸಾಧನಗಳನ್ನು ರಫ್ತು ಮಾಡಿದೆ. ಆಪಲ್ ಈ ದಾಖಲೆಯನ್ನು ಬರೀ ಏಳು ತಿಂಗಳಲ್ಲಿ ಮಾಡಿರುವುದು ಗಮನಿಸಬೇಕಾದ ಅಂಶವಾಗಿದೆ.
ಏಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ಉದ್ಯಮದ ಅಂಕಿಅಂಶಗಳ ಪ್ರಕಾರ, ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಸುಮಾರು 60 ಸಾವಿರ ಕೋಟಿ (7 ಬಿಲಿಯನ್ ಡಾಲರ್ಗಿಂತ ಹೆಚ್ಚು) ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಅಂದ್ರೆ ಪ್ರತಿ ತಿಂಗಳು ಸುಮಾರು 8,450 ಕೋಟಿ ಮೌಲ್ಯದ ಐಫೋನ್‌ಗಳು ರಫ್ತು ಆಗಿವೆ.
ಈ ಬಾರಿ ಕಂಪನಿಯು ತನ್ನ ಐಫೋನ್ 15 ಮತ್ತು ಐಫೋನ್ 14 ಸೀರಿಸ್ ಇತರ ಜನಪ್ರಿಯ ಮಾದರಿಗಳನ್ನು ಹೊರತುಪಡಿಸಿ ಹೊಸದಾಗಿ ಬಿಡುಗಡೆಯಾದ ಐಫೋನ್ 16 ಮಾದರಿಗಳನ್ನು ಭಾರತದಿಂದ ರಫ್ತು ಮಾಡುತ್ತಿದೆ.
ಕಳೆದ ಹಣಕಾಸು ವರ್ಷದಲ್ಲಿ (FY24) ಆಪಲ್ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಈ ಹಣಕಾಸು ವರ್ಷದಲ್ಲಿ ತಂತ್ರಜ್ಞಾನದ ದೈತ್ಯ ಆಪಲ್ ಈಗಾಗಲೇ ಐದು ತಿಂಗಳುಗಳ ಅಂತರದಲ್ಲಿ ಆ ಅಂಕಿ ಅಂಶದ ಶೇಕಡ 70ರಷ್ಟು ಸಾಧಿಸಿದೆ. ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಗಳ ಮೇಲೆ ಈ ಹೊಸ ರಫ್ತು ದಾಖಲೆ ಸ್ಥಾಪಿಸಿದೆ.
ಆಪಲ್ ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ 14 ಬಿಲಿಯನ್ ಡಾಲರ್ ಮೌಲ್ಯದಷ್ಟು ಐಫೋನ್‌ಗಳು ಮತ್ತು ಅದರ ಬಿಡಿಭಾಗಗಳನ್ನು ಉತ್ಪಾದಿಸಿದೆ. 10 ಬಿಲಿಯನ್ ಡಾಲರ್ ಮೌಲ್ಯದ ಸಾಧನಗಳನ್ನು ರಫ್ತು ಮಾಡಿದೆ. ಭಾರತದಿಂದ ಐಫೋನ್ ರಫ್ತು 2022-23 ರಲ್ಲಿ 6.27 ಬಿಲಿಯನ್ ಡಾಲರ್ದಿಂದ 2023-24 ರಲ್ಲಿ 10 ಬಿಲಿಯನ್ ಡಾಲರ್ ಮೌಲ್ಯದವರೆಗೆ ದಾಟಿದೆ. ಒಟ್ಟಾರೆಯಾಗಿ ಕಳೆದ ಹಣಕಾಸು ವರ್ಷದಲ್ಲಿ (FY24) ಐಫೋನ್ ತಯಾರಕರ ಭಾರತದ ಕಾರ್ಯಾಚರಣೆಗಳು 23.5 ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪಿದೆ.
ಜುಲೈದಿಂದ ಸೆಪ್ಟೆಂಬರ್ ಅವಧಿಯಲ್ಲಿ ಟಿಮ್ ಕುಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆಯನ್ನು ಬರೆದಿದೆ. ಇದರ ಬಗ್ಗೆ ಕುಕ್ ಸಂತಸ ವ್ಯಕ್ತಪಡಿಸಿದ್ದರು.