ETV Bharat / technology

ಗ್ರಾಹಕರಿಗೆ ಸಿಹಿ ಸುದ್ದಿ; ಉಚಿತ ಆಧಾರ್​ ಅಪ್​ಡೇಟ್​ ಅವಧಿ ಮತ್ತೆ ವಿಸ್ತಿರಿಸಿದ UIDAI - Aadhaar free Update - AADHAAR FREE UPDATE

Aadhaar free Update: ಆಧಾರ್‌ನ ಉಚಿತ ಅಪ್‌ಡೇಟ್ ಅವಧಿಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲಾಗುತ್ತಿದೆ ಎಂದು UIDAI 'ಎಕ್ಸ್' ಮೂಲಕ ಬಹಿರಂಗಪಡಿಸಿದೆ.

FREE UPDATE DEADLINE EXTENDED  AADHAAR CARD FREE UPDATE LAST DATE  MYAADHAAR PORTAL  UIDAI X POST
ಮತ್ತೆ ಉಚಿತ ಆಧಾರ್​ ಅಪ್​ಡೇಟ್​ ಅವಧಿ ವಿಸ್ತಿರಿಸಿದ UIDAI (UIDAI X POST)
author img

By ETV Bharat Karnataka Team

Published : Sep 14, 2024, 1:33 PM IST

Aadhaar free Update: ಆಧಾರ್ ವಿವರಗಳನ್ನು ಉಚಿತವಾಗಿ ಅಪ್​ಡೇಟ್ ಮಾಡಲು ಕೇಂದ್ರ ನೀಡಿದ್ದ ಗಡುವು ಇಂದಿಗೆ ಅಂತ್ಯಗೊಳ್ಳಲಿರುವ ಹಿನ್ನೆಲೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಗಡುವನ್ನು ಮತ್ತೊಮ್ಮೆ ವಿಸ್ತರಿಸುವುದಾಗಿ ಘೋಷಿಸಲಾಗಿದೆ.

UIDAI ತಮ್ಮ X ನಲ್ಲಿ ಈ ಕುರಿತು ಪೋಸ್ಟ್ ಮಾಡಲಾಗಿದೆ. ಇದನ್ನು ಡಿಸೆಂಬರ್ 14, 2024ರ ವರೆಗೆ ಹೆಚ್ಚಿಸಲಾಗುವುದು ಎಂದು ತಿಳಿದುಬಂದಿದೆ. ಇದರೊಂದಿಗೆ, ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಬಯಸುವವರು ತಕ್ಷಣ ಅದನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದಾಗಿದೆ.

ಯುಐಡಿಎಐ ನಿಯಮಗಳ ಪ್ರಕಾರ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್‌ಗೆ ಸಂಬಂಧಿಸಿದ ವಿವರಗಳನ್ನು ಅಪ್​ಡೇಟ್​ ಮಾಡಬೇಕಾಗುತ್ತದೆ. ಇದಕ್ಕಾಗಿ, ಆಯಾ ಪುರಾವೆ ದಾಖಲೆಗಳನ್ನು ಸಲ್ಲಿಸಬೇಕು. 'ಮೈ ಆಧಾರ್' ಪೋರ್ಟಲ್ ಮೂಲಕ ಮಾತ್ರ ಉಚಿತ ಸೇವೆಗಳು ಲಭ್ಯವಿವೆ. ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮುಂತಾದ ಬದಲಾವಣೆಗಳನ್ನು ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ. ಉಚಿತ ಆಧಾರ್ ಅವಧಿ ಮುಗಿದ ನಂತರ ಕೇಂದ್ರಗಳಲ್ಲಿ ರೂ.50 ಪಾವತಿಸಿ ಮೊದಲಿನಂತೆ ಅಪ್​ಡೇಟ್​ ಮಾಡಿಕೊಳ್ಳಬೇಕಾಗುತ್ತದೆ.

ನಾವಿಲ್ಲಿ ನಿಮಗೆ ಹಂತ ಹಂತವಾಗಿ ಆಧಾರ್ ಕಾರ್ಡ್ ನವೀಕರಿಸುವ ಸುಲಭ ಮಾರ್ಗವನ್ನು ಹೇಳುತ್ತೇವೆ. ಅದನ್ನು ಅನುಸರಿಸುವ ಮೂಲಕ ಆಧಾರ್​ ಕಾರ್ಡ್​ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು.

ಹಂತ 1: myAadhaar ಪೋರ್ಟಲ್‌ಗೆ ಹೋಗಿ.

ಹಂತ 2: Enter ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚ ಕೋಡ್ ನಮೂದಿಸಿ. 'ಸೆಂಡ್ OTP' ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಆಯ್ಕೆಯನ್ನು ಕ್ಲಿಕ್ಕಿಸಿ.

ಹಂತ 3: ಡಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.

ಹಂತ 4: ಸೂಚನೆಗಳನ್ನು ಓದಿದ ನಂತರ ಮುಂದಿನ ಆಯ್ಕೆ ಕ್ಲಿಕ್ಕಿಸಿ.

ಹಂತ 5: ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಪುಟದಲ್ಲಿ ನೀಡಲಾದ 'ಮೇಲಿನ ವಿವರಗಳು ಸರಿಯಾಗಿವೆಯೇ ಎಂದು ನಾನು ಪರಿಶೀಲಿಸುತ್ತೇನೆ' ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಆಯ್ಕೆಗೆ ತೆರಳಿ.

ಹಂತ 6: ID ಪುರಾವೆ ಮತ್ತು ವಿಳಾಸ ಪುರಾವೆಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಇದರ ನಂತರ, ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್ 7 ದಿನಗಳಲ್ಲಿ ಅಪ್​ಡೇಟ್​ ಆಗುತ್ತದೆ.

ನಿಮ್ಮ ಬಳಿ ಈ ಎರಡು ದಾಖಲೆಗಳಿರಲಿ: ಆಧಾರ್ ಅಪ್​ಡೇಟ್​ಗಾಗಿ ನಿಮಗೆ ಎರಡು ಪ್ರಮುಖ ದಾಖಲೆಗಳು ಬೇಕು. ಮೊದಲನೇಯದು ಗುರುತಿನ ಚೀಟಿ ಮತ್ತು ಎರಡನೇಯದು ವಿಳಾಸದ ಪುರಾವೆ. ಸಾಮಾನ್ಯವಾಗಿ, ಆಧಾರ್ ನವೀಕರಣಕ್ಕಾಗಿ ಆಧಾರ್ ಕೇಂದ್ರದಲ್ಲಿ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ UIDAI ಪ್ರಕಾರ, ಈ ಸೇವೆ ಜೂನ್ 14ರ ವರೆಗೆ ಉಚಿತ. ನೀವು ಗುರುತಿನ ಪುರಾವೆಯಾಗಿ ಪ್ಯಾನ್ ಕಾರ್ಡ್ ಮತ್ತು ವಿಳಾಸಕ್ಕಾಗಿ ಮತದಾರರ ಕಾರ್ಡ್ ನೀಡಬಹುದು.

ಓದಿ: ಇನ್ನೆರಡೇ ದಿನ ಬಾಕಿ! ಆಧಾರ್ ಕಾರ್ಡ್ ಉಚಿತವಾಗಿ ಅಪ್​ಡೇಟ್​ ಮಾಡುವುದು ಹೇಗೆ? - Aadhaar Card Update

ETV Bharat Logo

Copyright © 2024 Ushodaya Enterprises Pvt. Ltd., All Rights Reserved.