Infinix Hot 50 5G: ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ Infinix ತನ್ನ ಹೊಸ, ಅಗ್ಗದ 5G ಸ್ಮಾರ್ಟ್‌ಫೋನ್ Infinix Hot 50 5G ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ನಲ್ಲಿ, ಕಂಪನಿಯು 8 GB RAM ಜೊತೆಗೆ ಶಕ್ತಿಯುತ ವೈಶಿಷ್ಟ್ಯಗಳನ್ನು ನೀಡಿದೆ. 9 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ 5G ಸ್ಮಾರ್ಟ್‌ಫೋನ್ ಇದೆಂದು ಪರಿಗಣಿಸಲಾಗಿದೆ. 10 ಸಾವಿರ ರೂಪಾಯಿ ಶ್ರೇಣಿಯಲ್ಲಿ ಬಿಡುಗಡೆ ಮಾಡಲಾಗಿದ್ದರೂ, ಪ್ರಸ್ತುತ ಗ್ರಾಹಕರಿಗೆ ಖರೀದಿಯ ಮೇಲೆ ರೂ.1 ಸಾವಿರ ರಿಯಾಯಿತಿ ನೀಡಲಾಗುತ್ತಿದೆ.
Infinix Hot 50 5G ವೈಶಿಷ್ಟ್ಯಗಳು:
- ಸ್ಟೋರೇಜ್: 4GB/8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್
- ಡಿಸ್ಪ್ಲೇ: 6.7-ಇಂಚಿನ HD+ ಡಿಸ್ಪ್ಲೇ
- ಡಿಸ್ಪ್ಲೇ ವೈಶಿಷ್ಟ್ಯ: 120Hz ರಿಫ್ರೆಶ್ ರೇಟ್
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್
- ರಿಯರ್ ಕ್ಯಾಮೆರಾ: 48MP
- ಫ್ರಂಟ್ ಕ್ಯಾಮೆರಾ: 8MP
- ಬ್ಯಾಟರಿ/ಚಾರ್ಜಿಂಗ್: 5,000mAh ಬ್ಯಾಟರಿ, 18W ಅಡಾಪ್ಟರ್‌ನೊಂದಿಗೆ ಸ್ಪೀಡ್ ಚಾರ್ಜಿಂಗ್
Infinixನ ಈ ಹೊಸ ಫೋನ್ 6.7 ಇಂಚಿನ HD+ ಡಿಸ್ಪ್ಲೇ ಒಳಗೊಂಡಿದೆ. 120Hzನ ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತಿದೆ. ಇದಲ್ಲದೆ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಹೊಂದಿದೆ. ಅಷ್ಟೇ ಅಲ್ಲ, ಕಂಪನಿಯು 4GB/8GB RAM ಆಯ್ಕೆಯೊಂದಿಗೆ Infinix Hot 50 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು 128GB ಸ್ಟೋರೇಜ್ ಹೊಂದಿದೆ.
ಕ್ಯಾಮೆರಾ ಸೆಟಪ್: ಈ ಮೊಬೈಲ್ ಫೋನ್‌ನ ಕ್ಯಾಮೆರಾ ಸೆಟಪ್ ಹೇಗಿದೆ ಗೊತ್ತೇ?. Infinix Hot 50 5G 48MP ಪ್ರಾಥಮಿಕ ಕ್ಯಾಮೆರಾ ಜೊತೆಗೆ ಡೆಪ್ತ್ ಸೆನ್ಸಾರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾ ಇದೆ. 5000mAh ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿಯು 18W ಸ್ಪೀಡ್ ಚಾರ್ಜಿಂಗ್ ಅನ್ನು ಸಹ ಸಪೋರ್ಟ್ ಮಾಡುತ್ತದೆ.
ಬೆಲೆ ಎಷ್ಟು?: ಕಂಪನಿಯು Infinix Hot 50 5Gಯ 4GB + 128GB ರೂಪಾಂತರದ ಬೆಲೆಯನ್ನು ರೂ 9999ಗೆ ಮಾರಾಟ ಮಾಡುತ್ತಿದೆ. ಆದರೆ ಈ ಫೋನ್‌ನ 8GB + 128GB ರೂಪಾಂತರದ ಬೆಲೆಯನ್ನು 10,999 ರೂ.ಗಳಿಗೆ ನಿಗದಿಪಡಿಸಲಾಗಿದೆ. ಈ ಫೋನ್‌ನ ಮೊದಲ ಮಾರಾಟ ಸೆಪ್ಟೆಂಬರ್ 9ರಿಂದ ಪ್ರಾರಂಭವಾಗಲಿದೆ.
ನೀವು ಈ ಫೋನ್ ಅನ್ನು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಈಗ Axis ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮತ್ತು Flipkart Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದಾದರೆ 1,000 ರೂಪಾಯಿಗಳ ರಿಯಾಯಿತಿ ಪಡೆಯುತ್ತೀರಿ. ಆಗ ನೀವು ಈ ಫೋನ್ ಅನ್ನು ಕೇವಲ 8999 ರೂ.ಗಳಿಗೆ ಖರೀದಿಸಿದಂತಾಗುತ್ತದೆ.
ಇದನ್ನೂ ಓದಿ: NSDL ಪೋರ್ಟಲ್ ಮೂಲಕ ಭೌತಿಕವಾಗಿ ಪ್ಯಾನ್ ಕಾರ್ಡ್ ಸಲ್ಲಿಸುವುದು ಹೀಗೆ - Submit PAN Through NSDL Portal