ಮುಂಬೈ: ಭಾರತದ ಶೇ 86ರಷ್ಟು ಅಥವಾ 707 ಮಿಲಿಯನ್ ಇಂಟರ್ನೆಟ್ ಬಳಕೆದಾರರು ಒಟಿಟಿ ಆಡಿಯೋ ಮತ್ತು ವಿಡಿಯೋ ಸೇವೆಯನ್ನು ಎಂಜಾಯ್ ಮಾಡುತ್ತಾರೆ. ಇಂಟರ್ನೆಟ್ ಬಳಕೆಯಲ್ಲಿ ಈ ಸೇವೆಯೇ ಅಗ್ರಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.
ಭಾರತದ ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ (ಐಎಎಂಎಐ) ಮತ್ತು ಕಾಂತಾರ್ ಜಂಟಿಯಾಗಿ 'ಇಂಟರ್ನೆಟ್ ಇನ್ ಇಂಡಿಯಾ ವರದಿ 2023' ಸಿದ್ಧಪಡಿಸಿದೆ. ಇದರಲ್ಲಿ ಇಂಟರ್ನೆಟ್ ಸೇವೆಯನ್ನು ಸಾಂಪ್ರದಾಯಿಕವಲ್ಲದ ಸಾಧನಗಳಲ್ಲಿ ಅಂದರೆ ಸ್ಮಾರ್ಟ್ ಟಿವಿ, ಸ್ಮಾರ್ಟ್ ಸ್ಪೀಕರ್, ಫೈರ್ಟಿಕ್ಸ್, ಕ್ರೊಮೆಕಾಸ್ಟ್, ಬ್ಲೂರೇ ಮುಂತಾದವುಗಳಿಂದ ಹೆಚ್ಚು ಬಳಕೆ ಮಾಡಲಾಗುತ್ತದೆ. 2021-23ರಲ್ಲಿ ಎಲ್ಲಾ ಭಾರತೀಯರ ಮಟ್ಟದಲ್ಲಿ ಇದು ಶೇ 58ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿ ತಿಳಿಸಿದೆ.
ದೇಶದ ಎಲ್ಲಾ ರಾಜ್ಯ ಮತ್ತು ಲಕ್ಷದ್ವೀಪ ಹೊರತಾಗಿ ಎಲ್ಲಾ ಕೇಂದ್ರಾಡಳಿತ ಪ್ರದೇಶದ 90 ಸಾವಿರ ಮನೆಗಳಲ್ಲಿ ಇಂಟರ್ನೆಟ್ ಬಳಕೆಯ ಸಮೀಕ್ಷೆ ನಡೆಸಲಾಗಿದೆ ಎಂದು ಐಎಎಂಎಐ ಅಧ್ಯಕ್ಷ ಹರ್ಷ ಜೈನ್ ತಿಳಿಸಿದ್ದಾರೆ. ಭಾರತದ ಡಿಜಿಟಲ್ ಶೃಂಗಸಭೆ 2024ರ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವರದಿ ಬಿಡುಗಡೆ ಮಾಡಿದರು.
ಇಂಟರ್ನೆಟ್ ಮಾತ್ರ ಬಳಕೆ ಮಾಡುವ ಸಾಧನದಲ್ಲಿ ಸಾಂಪ್ರದಾಯಿಕ ಲೀನಿಯರ್ ಟಿವಿಯನ್ನು 181 ಮಿಲಿಯನ್ ಜನರು ಬಳಕೆ ಮಾಡಿದರೆ, ಕೇವಲ ವಿಡಿಯೋ ಕಂಟೆಂಟ್ ಬಳಕೆ ಮಾಡುವವರು 208 ಮಿಲಿಯನ್ ಎಂದು ವರದಿ ತಿಳಿಸಿದೆ.
ಸಂವಹನಕ್ಕೆ ಸೇರಿದಂತೆ ಇಂಟರ್ನೆಟ್ ಸಾಧನ ಬಳಕೆ ಮಾಡುವವರು 6.21 ಮಿಲಿಯನ್ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು 575 ಮಿಲಿಯನ್ ಇದ್ದಾರೆ. ವರದಿಯಲ್ಲಿ ಗಮನಿಸಿದ ಪ್ರಮುಖ ಅಂಶ ಎಂದರೆ, ಭಾರತದ ಗ್ರಾಮೀಣದಲ್ಲಿ ಎಲ್ಲಾ ರೀತಿಯ ಇಂಟರ್ನೆಟ್ ಬಳಕೆದಾರರ ಪ್ರಮಾಣ ಹೆಚ್ಚಿದೆ.
ಭಾರತದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚುತ್ತಿದ್ದು, ಹೊಸ ಮೈಲಿಗಲ್ಲು ತಲುಪುತ್ತಿದೆ. 2023ರಲ್ಲಿ ಒಟ್ಟಾರೆ ಸಕ್ರಿಯ ಇಂಟರ್ನೆಟ್ ಬಳಕೆದಾರರ ಸಂಖ್ಯೆ 820 ಮಿಲಿಯನ್ ತಲುಪಿದೆ. ಅಂದರೆ ಕಳೆದ ವರ್ಷಕ್ಕಿಂತ ಭಾರತದ ಬಳಕೆದಾರರ ಸಂಖ್ಯೆ ಶೇ 55ರಷ್ಟು ಹೆಚ್ಚಿದೆ.
ವರ್ಷದಿಂದ ವರ್ಷಕ್ಕೆ ದೇಶಾದ್ಯಂತ ಇಂಟರ್ನೆಟ್ ಸೇವೆ ಬಳಕೆ ಪ್ರಮಾಣ ಶೇ 8ರಷ್ಟು ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ 442 ಮಿಲಿಯನ್ ಬಳಕೆ ಮಾಡುತ್ತಿದ್ದು, ಶೇ 53ರಷ್ಟು ಪ್ರಮಾಣ ಹೆಚ್ಚಿದೆ ಎಂದು ಕಾಂತಾರ್ನ ಬ್ಯುಸಿನೆಸ್ ಸ್ಪೆಷಲಿಸ್ಟ್ ನಿರ್ದೇಶಕ ಪುನೀತ್ ಅವಸ್ಥಿ ತಿಳಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಕಡಿಮೆ ಮಟ್ಟದ ಇಂಟರ್ನೆಟ್ ಬಳಕೆ ಹೊಂದಿರುವ ಪ್ರದೇಶದಲ್ಲಿ ಇದರ ಬಳಕೆ ಹೆಚ್ಚಿದೆ. ಜಾರ್ಖಂಡ್ನಲ್ಲಿ ಮತ್ತು ಬಿಹಾರದಲ್ಲಿ ಕ್ರಮವಾಗಿ ಶೇ 12 ಮತ್ತು ಶೇ 17ರಷ್ಟು ಸರಾಸರಿ ಬೆಳವಣಿಗೆ ದರ ಕಂಡಿದೆ ಎಂದು ವರದಿ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಈ ವರ್ಷ ಶೇ 94ರಷ್ಟು ಭಾರತೀಯ ಸಂಸ್ಥೆಗಳಿಂದ ಉದ್ಯೋಗಿಗಳ ಕೌಶಲ್ಯ, ಸಾಮರ್ಥ್ಯ ವೃದ್ಧಿಗೆ ಒತ್ತು; ವರದಿ