2025 Toyota Camry India Launch: ಭಾರತದ ಮಾರುಕಟ್ಟೆಗೆ ಮತ್ತೊಂದು ಐಷಾರಾಮಿ ಕಾರು ಲಗ್ಗೆಯಿಟ್ಟಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಪ್ರೀಮಿಯಂ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರು ಒಂದು ವರ್ಷದ ಹಿಂದೆ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಉತ್ತಮ ಜನಪ್ರಿಯತೆಯನ್ನು ಗಳಿಸಿದೆ. ಇದರೊಂದಿಗೆ ಕಂಪನಿಯು ಈ ಕಾರನ್ನು ಭಾರತೀಯ ಮಾರುಕಟ್ಟೆಗೂ ತರಲು ಸಿದ್ಧತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯು ತನ್ನ ಅಧಿಕೃತ ಟೀಸರ್ ಬಿಡುಗಡೆ ಮಾಡಿತ್ತು. ಈಗ ಈ ಕಾರು ಮಾರುಕಟ್ಟೆಗೆ ಪ್ರವೇಶಿಸಿದೆ.
ಔಟ್ಲುಕ್: ಈ ಟೊಯೊಟಾ ಕ್ಯಾಮ್ರಿ ಕಾರು ಹೊಸ ವಿನ್ಯಾಸದೊಂದಿಗೆ ಬರಲಿದೆ. ಈ ಕಾರಿನ ಶೈಲಿ ಮತ್ತು ವಿನ್ಯಾಸವು ಅದರ ಹಿಂದಿನ ಮಾದರಿಗಿಂತ ಬಹಳ ಭಿನ್ನವಾಗಿದೆ. ಅಲ್ಲದೇ, ಇದರಲ್ಲಿ ಹೈಟೆಕ್ ವೈಶಿಷ್ಟ್ಯಗಳು ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದು ರಿವೈಜ್ಡ್ ಫ್ರಂಟ್ ಫಾಸಿಯಾ, ಹಾರಿಜಂಟಲ್ ಸ್ಲ್ಯಾಟ್‌ಗಳೊಂದಿಗೆ ವೈಡ್ ಅಂಡ್ ಅಗ್ರೆಸಿವ್ ಗ್ರಿಲ್, ಸಿ - ಶೇಪ್ಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಮಲ್ಟಿ- ಸ್ಪೋಕ್ ಅಲಾಯ್ ವೀಲ್‌ಗಳ ಹೊಸ ಸೆಟ್, ಡೋರ್ ಪ್ಯಾನೆಲ್‌ಗಳಲ್ಲಿ ಶಾರ್ಪ್ ಕ್ರೀಸೆಸ್, ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ಹೆಡ್ ಲ್ಯಾಂಪ್‌ಗಳು, ಲಾರ್ಜ್ ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ. ಅವುಗಳನ್ನು ಅಪ್ಡೇಟ್ ಮಾಡಲಾಗಿದೆ. ಈ ಕಾರಿನ ಫ್ರಂಟ್ ಗ್ರಿಲ್ ಜೇನುಗೂಡು ಮಾದರಿಯನ್ನು ಹೊಂದಿದೆ.
ಇಂಟೀರಿಯರ್: ಇದರ ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ - ಟೋನ್ ಥೀಮ್, ಮೂರು-ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, 10-ಇಂಚಿನ ಹೆಡ್-ಅಪ್ ಡಿಸ್ಪ್ಲೇ, 12.3-ಇಂಚಿನ ಪರದೆಯೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್ ಬರುತ್ತದೆ ಮುಂತಾದ ವೈಶಿಷ್ಟ್ಯಗಳೊಂದಿಗೆ ಸುಧಾರಿತ ADAS ಸೂಟ್‌ನೊಂದಿಗೆ ಪರಿಚಯಿಸಲಾಗಿದೆ.
ಪವರ್‌ಟ್ರೇನ್: ಈ ಹೊಸ ಟೊಯೋಟಾ ಕ್ಯಾಮ್ರಿ 2.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ಮೋಟಾರ್ ಸೆಟಪ್‌ನೊಂದಿಗೆ ಅನಾವರಣಗೊಂಡಿದೆ. ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಎಂಜಿನ್ ಸೆಟಪ್ ಎರಡು ಪವರ್ - ಟ್ಯೂನ್‌ಗಳೊಂದಿಗೆ ಬರುತ್ತದೆ. ಇವುಗಳಲ್ಲಿ ಮೊದಲನೆಯದು FWD (ಫ್ರಂಟ್-ವೀಲ್ ಡ್ರೈವ್). ಇದು 222bhp ಪವರ್ ಅನ್ನು ಉತ್ಪಾದಿಸುತ್ತದೆ. ಎರಡನೆಯದು AWD (ಆಲ್-ವೀಲ್ ಡ್ರೈವ್). ಇದು 229bhp ಪವರ್ ನೀಡುತ್ತದೆ. ಎರಡೂ ಎಂಜಿನ್‌ಗಳು ಇ-ಸಿವಿಟಿ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿವೆ.
ಓದಿ: ಮುಂದಿನ ವರ್ಷದಿಂದ ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಲಿರುವ ಟಾಟಾ ಮೋಟಾರ್ಸ್ - Kia Cars