ETV Bharat / technology

ನ್ಯೂ ಜನರೇಷನ್​ ಮಾರುತಿ ಸುಜುಕಿ ಡಿಜೈರ್​ ಬಿಡುಗಡೆ ದಿನಾಂಕ ಘೋಷಣೆ: ಇದರ ವೈಶಿಷ್ಟ್ಯ, ವಿನ್ಯಾಸ ಹೇಗಿದೆ ಗೊತ್ತಾ? - 2025 MARUTI DZIRE LAUNCH DATE

2025 MARUTI DZIRE LAUNCH DATE: ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದರ ವೈಶಿಷ್ಟ್ಯಗಳು ಮತ್ತು ವಿನ್ಯಾಸದ ಬಗ್ಗೆ ತಿಳಿಯೋಣ ಬನ್ನಿ.

2025 MARUTI SUZUKI DZIRE  2025 MARUTI DZIRE FEATURES  2025 MARUTI DZIRE DESIGN  2025 MARUTI DZIRE
ನ್ಯೂ ಜನರೇಷನ್​ ಮಾರುತಿ ಸುಜುಕಿ ಡಿಜೈರ್​ ಬಿಡುಗಡೆ ದಿನಾಂಕ ಘೋಷಣೆ (Maruti Suzuki India)
author img

By ETV Bharat Tech Team

Published : Oct 28, 2024, 7:14 AM IST

2025 MARUTI DZIRE LAUNCH DATE: ಈ ಹಿಂದೆ ಮಾರುತಿ ಸುಜುಕಿ ತನ್ನ ಹ್ಯಾಚ್‌ಬ್ಯಾಕ್ ಮಾರುತಿ ಸ್ವಿಫ್ಟ್‌ನ ಹೊಸ ಜನರೇಷನ್​ ಈ ವರ್ಷವೇ ಬಿಡುಗಡೆ ಮಾಡಿತ್ತು. ಈಗ ಕಂಪನಿಯು ತನ್ನ ಕಾಂಪ್ಯಾಕ್ಟ್ ಸೆಡಾನ್ ಮಾರುತಿ ಡಿಜೈರ್‌ನ ಹೊಸ ಪೀಳಿಗೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ದೃಢಪಡಿಸಿದೆ.

ಇದೀಗ ಈ ಕಾರಿನ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬರುತ್ತಿದ್ದು, ಕಂಪನಿಯು ನವೆಂಬರ್ 11 ರಂದು ಹೊಸ 2025 ಮಾರುತಿ ಸುಜುಕಿ ಡಿಜೈರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದಾಗಿದೆ. ಹೊಸ ತಲೆಮಾರಿನ ಮಾರುತಿ ಡಿಜೈರ್ ದೀಪಾವಳಿಯ ನಂತರ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹಲವು ವರದಿಗಳಲ್ಲಿ ಹೇಳಲಾಗಿತ್ತು.

ಹೊಸ ತಲೆಮಾರಿನ ಮಾರುತಿ ಡಿಜೈರ್ ವಿನ್ಯಾಸ: ಮಾಹಿತಿಯ ಪ್ರಕಾರ, ಕಂಪನಿಯು ಹೊಸ ಮಾರುತಿ ಡಿಜೈರ್‌ನೊಂದಿಗೆ ಪ್ರೀಮಿಯಂ ಮಾರ್ಗವನ್ನು ಅಳವಡಿಸಿಕೊಳ್ಳುವ ಗುರಿ ಹೊಂದಿದೆ. ವಿಶೇಷವಾಗಿ ವಿನ್ಯಾಸದ ವಿಷಯದಲ್ಲಿ. ಕಂಪನಿಯು ಈ ಕಾಂಪ್ಯಾಕ್ಟ್ ಸೆಡಾನ್‌ಗೆ ವಿಶಿಷ್ಟವಾದ ಗುರುತನ್ನು ನೀಡಲಿದೆ. ಇದು ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ಗಿಂತ ಭಿನ್ನವಾಗಿ ಕಾಣಿಸುತ್ತದೆ. ಎರಡೂ ಮಾದರಿಗಳಲ್ಲಿ ಅನೇಕ ವಿಷಯಗಳನ್ನು ಒಂದೇ ರೀತಿ ಕಾಣಬಹುದು.

ಹೊಸ ಮಾರುತಿ ಡಿಜೈರ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಪರೀಕ್ಷೆಯ ವೇಳೆ ಬಹಿರಂಗಪಡಿಸಿರುವ ಚಿತ್ರಗಳು ಒದಗಿಸುತ್ತವೆ. ಇದು ಆಡಿ ತರಹದ ಲುಕ್​, ಕೆಲವು ಕ್ರೋಮ್ ಅಂಶಗಳೊಂದಿಗೆ ಬ್ಲ್ಯಾಕ್ ​ - ಔಟ್​ ಸಮತಲವಾದ ಸ್ಲ್ಯಾಟೆಡ್ ಗ್ರಿಲ್, ಬ್ಲ್ಯಾಕ್​ ಬೆಜೆಲ್‌ಗಳೊಂದಿಗೆ ಸ್ಲಿಮ್ ಹೆಡ್‌ಲೈಟ್‌ಗಳು ಮತ್ತು ಸ್ಪೋರ್ಟಿಯಾಗಿ ಕಾಣುವ ಮುಂಭಾಗದ ಬಂಪರ್ ಅನ್ನು ಹೊಂದಿರುತ್ತದೆ.

ಇದಲ್ಲದೇ, ಹೊಸ ಮಾರುತಿ ಡಿಜೈರ್‌ನಲ್ಲಿರುವ ಡೈಮಂಡ್ - ಕಟ್ ಅಲಾಯ್ ವ್ಹೀಲ್​ಗಳು ಅಸ್ತಿತ್ವದಲ್ಲಿರುವ ಮಾರುತಿ ಸ್ವಿಫ್ಟ್‌ಗಿಂತ ಭಿನ್ನವಾಗಿರುತ್ತವೆ. ರೈಪ್​ಅರೌಂಡ್​ ಎಲ್ಇಡಿ ಟೈಲ್ - ಲೈಟ್​ಗಳಲ್ಲಿ ಸ್ಟೈಲೀಶ್​ ಎಲ್ಇಡಿ ಔಟ್​ಲೈನ್​ ಹೊಂದಿರುತ್ತದೆ ಮತ್ತು ಹೆಚ್ಚು ಕೋನೀಯ ಕ್ರೀಸ್​ಗಳೊಂದಿಗೆ ಕೆಲವು ದೇಹದ ಭಾಗಗಳು ಅದರ ಹ್ಯಾಚ್​ಬ್ಯಾಕ್ ಆವೃತ್ತಿಯಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ.

2025 ಮಾರುತಿ ಡಿಜೈರ್‌ ವೈಶಿಷ್ಟ್ಯಗಳು: ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ, ಹೊಸ ಮಾರುತಿ ಡಿಜೈರ್ ಸ್ವಿಫ್ಟ್‌ಗೆ ಹೋಲಿಸಿದರೆ ಸನ್‌ರೂಫ್ ಮತ್ತು ಇತರ ವಸ್ತುಗಳಂತಹ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದರ ಒಳಭಾಗವು ಹ್ಯಾಚ್‌ಬ್ಯಾಕ್‌ಗೆ ಹೋಲುತ್ತದೆಯಾದರೂ, ಪ್ರೀಮಿಯಂ ಭಾವನೆಗಾಗಿ, ಡ್ಯಾಶ್‌ಬೋರ್ಡ್ ಮತ್ತು ಅಪ್ಹೋಲ್ಸ್ಟರಿಯಲ್ಲಿ ಲೈಟ್​ ಶೇಡ್ಸ್​ಗಳನ್ನು ನೀಡಲಾಗುವುದು.

ಇದು 9-ಇಂಚಿನ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು 4.2-ಇಂಚಿನ ಡಿಜಿಟಲ್ MID ಜೊತೆಗೆ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳೊಂದಿಗೆ ಒದಗಿಸಲ್ಪಡುತ್ತದೆ. ಕೆಲವು ವರದಿಗಳ ಪ್ರಕಾರ, ಕಂಪನಿಯು ಹೊಸ-ಪೀಳಿಗೆಯ ಮಾರುತಿ ಡಿಜೈರ್‌ನಲ್ಲಿ ADAS ಅನ್ನು ಸಹ ಒಳಗೊಂಡಿರಬಹುದು ಮತ್ತು ಇದು ಅದರ ಉನ್ನತ-ಸ್ಪೆಕ್ ರೂಪಾಂತರಗಳಲ್ಲಿರುತ್ತದೆ ಎನ್ನಲಾಗುತ್ತಿದೆ.

ಹೊಸ ಮಾರುತಿ ಡಿಜೈರ್‌ನ ಪವರ್‌ಟ್ರೇನ್: ಹೊಸ ಮಾರುತಿ ಡಿಜೈರ್ ಅಸ್ತಿತ್ವದಲ್ಲಿರುವ ಮಾರುತಿ ಸ್ವಿಫ್ಟ್‌ನ ಅದೇ 1.2-ಲೀಟರ್, 3-ಸಿಲಿಂಡರ್ Z- ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ನಂತರ ಈ ಕಾರು ಪೆಟ್ರೋಲ್-ಸಿಎನ್‌ಜಿ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಎಂಜಿನ್‌ನ ಪೆಟ್ರೋಲ್ ರೂಪಾಂತರವು ಸ್ವಯಂಚಾಲಿತ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಹೊಂದಿರುತ್ತದೆ. ಆದರೆ ಸಿಎನ್‌ಜಿ-ಚಾಲಿತ ರೂಪಾಂತರವು ಫೈವ್​-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ನೀಡಲಾಗಿದ್ದು. ಮುಂದಿನ ದಿನಗಳಲ್ಲಿ ಇದರ ಬುಕಿಂಗ್ ಆರಂಭಿಸಬಹುದು. ಸದ್ಯ ಕಂಪನಿ ಇದರ ಬೆಲೆಗೆ ಸಂಬಂಧಿತ ವಿವರಗಳನ್ನು ಬಹಿರಂಗಪಡಿಸಿಲ್ಲ.

ಓದಿ:ಎಲೆಕ್ಟ್ರಿಕ್​​ ಕಾರುಗಳ ವಿಭಾಗದಲ್ಲಿ ಟಾಟಾ ಹೊಸ ಮೈಲಿಗಲ್ಲು: 50 ಸಾವಿರ ಯೂನಿಟ್​ ಮಾರಾಟವಾದ Tata Tiago EV

ETV Bharat Logo

Copyright © 2024 Ushodaya Enterprises Pvt. Ltd., All Rights Reserved.