ETV Bharat / state

ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾನಗರಿ ಜನ; ಕುಣಿದು ಕುಪ್ಪಳಿಸಿದ ಯುವಜನತೆ - holi celebration - HOLI CELEBRATION

ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಹೋಳಿ ಹಬ್ಬವನ್ನು ಆಯೋಜಿಸಿದ್ದರು.

youths-danced-in-colorful-holi-celebration-in-belagavi
ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾನಗರಿ ಜನ
author img

By ETV Bharat Karnataka Team

Published : Mar 25, 2024, 5:23 PM IST

ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾನಗರಿ ಜನ

ಬೆಳಗಾವಿ : ನಗರ ಸೇರಿ ಜಿಲ್ಲೆಯಾದ್ಯಂತ ಬಣ್ಣದೋಕುಳಿಯಲ್ಲಿ‌ ಜನ ಮಿಂದೆದ್ದರು. ಪರಸ್ಪರ ಬಣ್ಣ ಹಚ್ಚಿ, ಡಿಜೆ ಹಾಡುಗಳಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಹೌದು, ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ದಕ್ಷಿಣ ಶಾಸಕ ಅಭಯ ಪಾಟೀಲ ಆಯೋಜಿಸಿದ್ದ ಹೋಳಿ ಮಿಲನಕ್ಕೆ ಯುವಕ-ಯುವತಿಯರ ದಂಡೇ ಹರಿದು ಬಂದಿತ್ತು. ಈ ವೇಳೆ ಡಿಜೆ ಹಾಡುಗಳಿಗೆ ಹುಚ್ಚೆದ್ದು ಕುಣಿದು ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಒಂದೆಡೆ ಕಲರ್ ಸ್ಮೋಕ್ ಮೂಲಕ ಆಯೋಜಕರು ಬಣ್ಣ ಹಾರಿಸಿದರು. ಮತ್ತೊಂದೆಡೆ ಸಂಗೀತ ಕಾರಂಜಿಯ ಬಣ್ಣದ ನೀರು ಕುಣಿಯುತ್ತಿದ್ದವರ ಉತ್ಸಾಹ ಹೆಚ್ಚಿಸಿತು. ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಶಾಸಕ ಅಭಯ್​ ಪಾಟೀಲ ಕೂಡ ಹೆಜ್ಜೆ ಹಾಕಿದರು.

ಬೆಳಗಾವಿಯ ಗಲ್ಲಿ ಗಲ್ಲಿಯಲ್ಲೂ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು. ತಮಟೆ ನಾದಕ್ಕೆ ತಕ್ಕಂತೆ ಮಕ್ಕಳು, ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು. ಅಕ್ಕ ಪಕ್ಕದ ಮನೆಯವರು ಪರಸ್ಪರ ಬಣ್ಣ ಹಚ್ಚಿ‌ ಹಬ್ಬದ ಶುಭಾಶಯ ಕೋರಿದರು. ಅಲ್ಲದೇ ಪಕ್ಕದ ಓಣಿಗಳಿಗೂ ತೆರಳಿ ರಂಗನಾಟ ಆಡಿದರು. ವಿವಿಧ ಬಗೆಯ ಪಿಚಕಾರಿಗಳನ್ನು ಹಿಡಿದು ಓಡಾಡುತ್ತ ಬಣ್ಣ ಹಚ್ಚುತ್ತಿದ್ದ ಮಕ್ಕಳ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಇನ್ನು ಯುವಕರ ಗುಂಪು, ಸ್ನೇಹಿತರು, ಪರಿಚಯಸ್ಥರು ಸಿಕ್ಕ ತಕ್ಷಣವೇ ಅವರ ಮುಂದೆ ಲಬೋ.. ಲಬೋ.. ಲಬೋ.. ಎಂದು ಬಾಯಿ ಬಡಿದುಕೊಂಡು ಸಂತಸ ವ್ಯಕ್ತಪಡಿಸಿದರು.

ಅದೇ ರೀತಿ ವಸತಿ ನಿಲಯಗಳು, ಪಿಜಿಗಳಲ್ಲೂ ಕೂಡ ವಿದ್ಯಾರ್ಥಿಗಳು ಬಣ್ಣಾಟ ಆಡಿ ಎಂಜಾಯ್ ಮಾಡಿದರು. ಬೆಳಗಾವಿ ನಗರದಲ್ಲಿ ಮಧ್ಯಾಹ್ನ 3 ಗಂಟೆವರೆಗೂ ಹೋಳಿ ಆಚರಣೆ ಮುಂದುವರಿಯಿತು. ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. 300ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಿ ತೀವ್ರ ನಿಗಾ ವಹಿಸಲಾಗಿತ್ತು.

ಇದನ್ನೂ ಓದಿ : ಬೆಣ್ಣೆನಗರಿಯಲ್ಲಿ ಕೆಮಿಕಲ್ ಬಣ್ಣಗಳಿಗೆ ಬ್ರೇಕ್; ನೈಸರ್ಗಿಕ ಬಣ್ಣಗಳಲ್ಲಿ ಮಿಂದೆದ್ದ ಯುವಜನತೆ - Holi Celebration 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.