ETV Bharat / state

ಬೆಂಗಳೂರು: ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಯುವಕನ ಕೊಲೆ - Bengaluru Murder

author img

By ETV Bharat Karnataka Team

Published : Aug 1, 2024, 9:18 PM IST

Updated : Aug 1, 2024, 10:09 PM IST

ಯುವಕನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

murder
ಕೊಲೆ ನಡೆದ ಸ್ಥಳ (ETV Bharat)
ಕೇಂದ್ರ ವಿಭಾಗದ ಡಿಸಿಪಿ ಟಿ.ಹೆಚ್‌.ಶೇಖರ್ (ETV Bharat)

ಬೆಂಗಳೂರು: ಹಳೆದ್ವೇಷ ಶಂಕೆ ಹಿನ್ನೆಲೆಯಲ್ಲಿ ಹಾಡಹಗಲೇ ಯುವಕನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಹಂತಕರು ಪರಾರಿಯಾಗಿರುವ ಘಟನೆ ಶೇಷಾದ್ರಿಪುರ‌‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

27 ವರ್ಷದ ಅಜಿತ್ ಕೊಲೆಯಾದವ. ಬ್ಲಡ್ ಬ್ಯಾಂಕ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಜಿತ್​ನನ್ನು ಗುರಿಯಾಗಿಸಿಕೊಂಡ ಆರೋಪಿಗಳು, ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಮಾಹಿತಿ‌ ಮೇರೆಗೆ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಟಿ.ಹೆಚ್‌.ಶೇಖರ್ ಮಾತನಾಡಿ, ''ಅಜಿತ್ ಕುಮಾರ್ ಎಂಬ 27 ವಯಸ್ಸಿನ ವ್ಯಕ್ತಿಯ ಕೊಲೆಯಾಗಿದೆ. ಈತ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ, ಜೈಲಿಗೆ ಹೋಗಿ ಬಂದಿದ್ದ. ಹಳೆ ದ್ವೇಷ ವಿಚಾರಕ್ಕಾಗಿ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ವ್ಹೀಲಿಂಗ್​ ಪುಂಡರಿಗೆ ಪೊಲೀಸರ ಶಾಕ್​: ವರ್ಷದಲ್ಲಿ ದಾಖಲಾಗಬೇಕಿದ್ದ ಪ್ರಕರಣ ಆರೇ ತಿಂಗಳಲ್ಲಿ ದಾಖಲು - CASE AGAINST WHEELING

Last Updated : Aug 1, 2024, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.