ETV Bharat / state

ಬೆಳ್ಳಿಯಲ್ಲಿ 6 ಇಂಚು ಉದ್ದ, 4 ಇಂಚು ಅಗಲದ ಶ್ರೀರಾಮ ಮಂದಿರ ನಿರ್ಮಿಸಿದ ಭದ್ರಾವತಿಯ ಯುವಕ - ಶ್ರೀರಾಮ ಮಂದಿರ

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಯುವಕನೊಬ್ಬ ಶ್ರೀರಾಮ ಮಂದಿರವನ್ನು ಅತ್ಯಂತ ಸಣ್ಣದಾಗಿ ರಚಿಸಿ ತನ್ನ ಭಕ್ತಿ ಮೆರೆದಿದ್ದಾರೆ.

ಶ್ರೀರಾಮ ಮಂದಿರ
ಶ್ರೀರಾಮ ಮಂದಿರ
author img

By ETV Bharat Karnataka Team

Published : Jan 22, 2024, 9:42 PM IST

ಸಚಿನ್ ವರ್ಣೇಕರ್ ಅವರು ಮಾತನಾಡಿದರು

ಶಿವಮೊಗ್ಗ: ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದರು. ಈ ಮೂಲಕ ತಮ್ಮ ಚುನಾವಣೆಯ ಭರವಸೆ ಈಡೇರಿಸಿದ್ದಾರೆ. ಅದೇ ರೀತಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಯುವಕನೊಬ್ಬ ಶ್ರೀರಾಮ ಮಂದಿರವನ್ನು ಅತ್ಯಂತ ಸಣ್ಣದಾಗಿ ರಚಿಸಿ, ತನ್ನ ಭಕ್ತಿಯನ್ನು ಮೆರೆದಿದ್ದಾರೆ. ಭದ್ರಾವತಿ ಪಟ್ಟಣದ ಭೂತನಗುಡಿ ನಿವಾಸಿಯಾದ ಸಚಿನ್ ವರ್ಣೆಕರ್ ಎಂಬ ಯುವಕ ಶ್ರೀರಾಮ ಮಂದಿರವನ್ನು ಬೆಳ್ಳಿಯಲ್ಲಿ 140 ಗ್ರಾಂ ತೂಕದಲ್ಲಿ ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ.

ಇದು 5.5 ಇಂಚು ಎತ್ತರ ಹಾಗೂ 6 ಇಂಚು ಉದ್ದ ಹಾಗೂ 4 ಇಂಚು ಅಗಲ ಹೊಂದಿದೆ. ಈ ರೀತಿಯಲ್ಲಿ ಸಚಿನ್ ಅತ್ಯಂತ ಸೂಕ್ಷ್ಮ ಕಲೆಯಲ್ಲಿ ಶ್ರೀರಾಮ ಮಂದಿರವನ್ನು ರಚಿಸಿದ್ದಾರೆ. ಸಚಿನ್ ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ಇರುವ ಮೂಲ ದೇವಾಲಯದಂತೆ ತಮ್ಮ ಕೈಯಲ್ಲಿ ಅರಳಿಸಿದ್ದಾರೆ. ಈ ಕಲಾಕೃತಿಯನ್ನು ಮಾಡಲು ಇವರಿಗೆ 1 ತಿಂಗಳುಗಳ ಕಾಲ ಸಮಯ ಬೇಕಾಗಿತ್ತು. ಸಚಿನ್ ಅವರು ಬೆಳ್ಳಿ ಬಂಗಾರದಲ್ಲಿ ಆಭರಣ ತಯಾರು ಮಾಡುವ ಕೆಲಸವನ್ನು ಮಾಡುತ್ತಾರೆ. ತಮ್ಮ ಕೆಲಸದ ಬಿಡುವಿನ ಅವಧಿಯಲ್ಲಿ ಶ್ರೀರಾಮ ಮಂದಿರ ರಚಿಸಿದ್ದಾರೆ. ಇವರು ಹಿಂದೆ ಇದೇ ರೀತಿ ಅನೇಕ ಸಣ್ಣ ಸಣ್ಣ ಗಾತ್ರದ ಮಿಲಿ ಗ್ರಾಂ ತೂಕದ ವಿಗ್ರಹಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳಿಗೆ ಜನರ ಮೆಚ್ಚುಗೆ ಸಹ ವ್ಯಕ್ತವಾಗಿದೆ.

ಬೆಳ್ಳಿ ರಾಮಮಂದಿರ ತಯಾರಿಸಿದ ಸಚಿನ್ ವರ್ಣೆಕರ್ ಅವರು ಮಾತನಾಡಿ, 2019ರಲ್ಲಿ ಶ್ರೀರಾಮಮಂದಿರದ ತೀರ್ಪು ಬರುವ ಮುನ್ನವೇ ಒಂದು ಸಂಕಲ್ಪ‌ಮಾಡಿ ಬಂಗಾರದ ಶ್ರೀರಾಮಮಂದಿರವನ್ನು ಮಾಡಿದ್ದೆ. ಅದಕ್ಕೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್​ನ ಪ್ರಶಸ್ತಿ ಬಂದಿತ್ತು. ಕೋಟ್ಯಂತರ ಹಿಂದೂಗಳ ಆಸೆಗಳ ಪ್ರಕಾರ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಆಗುತ್ತಿದೆ. ಆ ಒಂದು ಖುಷಿಯನ್ನು ಹಂಚಿಕೊಳ್ಳಲು ಹಾಗೂ 500 ವರ್ಷಗಳ ಹೋರಾಟ ನಡೆಸಿದ ಕರ ಸೇವಕರಿಗೆ ಕೃತಜ್ಞತೆ ಸಲ್ಲಿಸಲು ಬೆಳ್ಳಿಯಲ್ಲಿ ಅಯೋಧ್ಯೆ ರಾಮಮಂದಿರ ಪ್ರತಿಕೃತಿಯನ್ನು ರಚನೆ ಮಾಡಿದ್ದೇನೆ. ಬೆಳ್ಳಿಯ ರಾಮಮಂದಿರ 140 ಗ್ರಾಂ ತೂಕವನ್ನು ಹೊಂದಿದೆ. 5.5 ಇಂಚು ಎತ್ತರ ಹಾಗೂ 6 ಇಂಚು ಉದ್ದ ಹಾಗೂ 4 ಇಂಚು ಅಗಲವನ್ನು ಹೊಂದಿದೆ. ಅಯೋಧ್ಯೆ ರಾಮಮಂದಿರದಷ್ಟೆ ಚೆನ್ನಾಗಿ‌ ಮೂಡಿಬರಲು ಪ್ರಯತ್ನಿಸಿದ್ದೇನೆ. ಒಂದು ತಿಂಗಳುಗಳ ಕಾಲ ಇದನ್ನು ತಯಾರಿಸಲು ಶ್ರಮವಹಿಸಿದ್ದೇನೆ. ಇದನ್ನು ನೋಡಿದವರು ಎಲ್ಲಾರು ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ ಎಂದರು.

ಸಚಿನ್ ವರ್ಣೆಕರ್ ಅವರ ಈ ಕಲಾಕೃತಿಯನ್ನು ನೋಡಿ ಸ್ಥಳೀಯರಾದ ರಾಮಚಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌ ಇವರು ಹಿಂದೆ ಮಿಲಿ ಗ್ರಾಂ ತೂಕದಲ್ಲಿ ಅತ್ಯಂತ ಚಿಕ್ಕದಾದ ಶಿವಲಿಂಗ, ಧರ್ಮಸ್ಥಳದ ಮಂಜುನಾಥ ಸ್ವಾಮಿ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚನೆ‌ ಮಾಡಿದ್ದರು. ಈಗ ಬೆಳ್ಳಿಯಲ್ಲಿ ಶ್ರೀರಾಮ ಮಂದಿರವನ್ನು ಮಾಡಿದ್ದಾರೆ. ಹಿಂದೆ ಬಂಗಾರದಲ್ಲಿ ತಯಾರು ಮಾಡಿದ್ದರು. ಇವರ ಕಲಾಕೃತಿಯಿಂದ ಭದ್ರಾವತಿಗೆ ಒಂದು ಹೆಮ್ಮೆ ಎನ್ನುತ್ತಾರೆ.

ಇದನ್ನೂ ಓದಿ : ಪೆನ್ಸಿಲ್ ತುದಿಯಲ್ಲಿ 1.3 ಸೆಂ ಮೀಟರ್​ದ ಶ್ರೀರಾಮ ವಿಗ್ರಹ ರಚಿಸಿದ ಶಿಲ್ಪ ಕಲಾವಿದ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.