ETV Bharat / state

ಮೈಸೂರು: ಮಾನಸಿಕ ಖಿನ್ನತೆಯಿಂದ ದಕ್ಷಿಣ ಕನ್ನಡ ಮೂಲದ ಯೋಗ ಶಿಕ್ಷಕಿ ಆತ್ಮಹತ್ಯೆ - Yoga teacher suicide

ಮೈಸೂರಲ್ಲಿ ಯೋಗ ಶಿಕ್ಷಕಿಯೊರ್ವರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jun 23, 2024, 10:41 PM IST

ಮೈಸೂರು: ಒಂಟಿಯಾಗಿದ್ದ ಯೋಗ ಶಿಕ್ಷಕಿಯೊರ್ವರು ಖಿನ್ನತೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗೋಕುಲಂನಲ್ಲಿ ಶನಿವಾರ ನಡೆದಿದೆ.

ಗೋಕುಲಂ ಮೂರನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿದ್ದ ಯೋಗ ಶಿಕ್ಷಕಿ ಮಲ್ಲಿಕಾ (47) ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನವರಾದ ಮಲ್ಲಿಕಾ ಅವರಿಗೆ ಆರೇಳು ವರ್ಷಗಳ ಹಿಂದೆ ವಿಚ್ಛೇದನವಾಗಿದ್ದು, ಮೂರು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದರು. ಯೋಗ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದರಾದರೂ ಕುಟುಂಬ ಹಾಗೂ ಸಂಬಂಧಿಕರಿಂದ ದೂರವಿದ್ದ ಕಾರಣ ನೋವಿನಲ್ಲಿದ್ದರು.

ಶನಿವಾರ ಬೆಳಗ್ಗೆ 9:30ರ ಸಮಯದಲ್ಲಿ ಕಸದ ಡಬ್ಬಿಯನ್ನು ಮನೆಯ ಹೊರಗೆ ಇಟ್ಟಿದ್ದನ್ನು ನೆರೆ ಹೊರೆಯವರು ಗಮನಿಸಿದ್ದಾರೆ. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ನಿತ್ಯ ಯೋಗಾಭ್ಯಾಸಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳು ಬಂದು ಎಷ್ಟು ಬಾಗಿಲು ತಟ್ಟಿದರೂ ಬಾಗಿಲು ತೆರೆದಿಲ್ಲ. ಇದರಿಂದ ಅನುಮಾನಗೊಂಡು 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮನೆ ಹಿಂಭಾಗದಿಂದ ಹೋಗಿ ಕಿಟಿಕಿಯಲ್ಲಿ ನೋಡಿದಾಗ ಮಲ್ಲಿಕಾ ಅವರು ಬೆಡ್​ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಕಣ್ಣಿಗೆ ಬಿದ್ದಿದೆ. ಪೊಲೀಸರ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಮಲ್ಲಿಕಾ ಅವರ ಅಕ್ಕ ಮತ್ತು ಭಾವ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿರುವ ಮೃತದೇಹವನ್ನು ಭಾನುವಾರ ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಳಿಕ ವಾರಸುದಾರಿಗೆ ಒಪ್ಪಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ: ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಬಂಧನ - BJP Secretary Arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.