Bitter melon Curry Recipe in Kannada: ಹಲವು ಜನರು ಹಾಗಲಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಈ ತರಕಾರಿಯು ‘ಕಹಿ’ ಎಂಬ ಕಾರಣಕ್ಕೆ ಅದನ್ನು ತಿನ್ನಲು ಆಸಕ್ತಿ ತೋರುವುದಿಲ್ಲ. ಮಕ್ಕಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಆರೋಗ್ಯಕ್ಕೆ ಉತ್ತಮವಾದ ಹಾಗಲಕಾಯಿಯಿಂದ ಈ ರೀತಿಯ ಕರಿ ತಯಾರಿಸಿ. ಕಹಿಯೇ ಇರುವುದಿಲ್ಲ. ಆದರೆ, ಅದರ ಬದಲಿಗೆ ತುಂಬಾ ಟೇಸ್ಟಿಯಾಗಿರುತ್ತದೆ. ಹಾಗಲಕಾಯಿಯನ್ನು ಇಷ್ಟಪಡದವರೂ ಇದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಹಾಗಲಕಾಯಿ ಕರಿಗೆ ಬೇಕಾಗುವ ಅಗತ್ಯ ಪದಾರ್ಥಗಳೇನು? ಸಿದ್ಧಪಡಿಸುವ ಪ್ರಕ್ರಿಯೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಹಾಗಲಕಾಯಿ ಕರಿಗೆ ಬೇಕಾಗುವ ಪದಾರ್ಥಗಳು:
- ಹಾಗಲಕಾಯಿ - ಅರ್ಧದಷ್ಟು
- ಉಪ್ಪು - ಸ್ವಲ್ಪ
- ಅರಿಶಿನ - ಅರ್ಧ ಟೀಸ್ಪೂನ್
- ಎಣ್ಣೆ - 3 ಟೀಸ್ಪೂನ್
- ಗರಂ ಮಸಾಲ - 1 ಚಮಚ
- ಈರುಳ್ಳಿ - 1
- ಟೊಮೆಟೊ - 1
- ಹಸಿ ಮೆಣಸಿನಕಾಯಿ - 3
- ಕರಿಬೇವಿನ ಎಲೆಗಳು - 1
- ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಖಾರದ ಪುಡಿ - ಸಾಕಷ್ಟು
- ಧನಿಯಾ ಪುಡಿ - 1 ಟೀಸ್ಪೂನ್
- ಜೀರಿಗೆ ಪುಡಿ - 1 ಟೀಸ್ಪೂನ್
- ಹುಣಸೆಹಣ್ಣು - ನಿಂಬೆಯಷ್ಟು
- ಹುರಿದ ಮೆಂತ್ಯ ಪುಡಿ - ಚಿಟಿಕೆ
- ಕೊತ್ತಂಬರಿ ಸೊಪ್ಪು - ಸ್ವಲ್ಪ (ಐಚ್ಛಿಕ)
ಹಾಗಲಕಾಯಿ ಕರಿ ತಯಾರಿಸುವ ವಿಧಾನ:
- ಮೊದಲು ಹಾಗಲಕಾಯಿ ಸ್ವಚ್ಛವಾಗಿ ತೊಳೆದು ರೌಂಡ್ ಶೇಫ್ನಲ್ಲಿ ಚಾಕುವಿನ ಸಹಾಯದಿಂದ ಕಟ್ ಮಾಡಿಕೊಳ್ಳಬೇಕು. ನೀವು ಬೀಜಗಳು ಇಷ್ಟವಾಗದಿದ್ದರೆ ಅವುಗಳನ್ನು ತೆಗೆದುಹಾಕಬಹುದು.
- ಈಗ ಕತ್ತರಿಸಿದ ಎಲ್ಲ ಹಾಗಲಕಾಯಿ ತುಂಡುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಒಂದು ಚಮಚ ಉಪ್ಪು ಮತ್ತು ಕಾಲು ಚಮಚ ಅರಿಶಿನವನ್ನು ಸೇರಿಸಿ ಮತ್ತು ತುಂಡುಗಳಿಗೆ ಅಂಟಿಕೊಳ್ಳುವಂತೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮುಚ್ಚಿ ಮತ್ತು ಹತ್ತು ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಈ ಮಧ್ಯೆ ಹುಣಸೆ ಹಣ್ಣನ್ನು ಸ್ವಚ್ಛವಾಗಿ ತೊಳೆದು ನೆನೆಸಿಡಿ.
- ಹತ್ತು ನಿಮಿಷಗಳ ನಂತರ, ಮುಚ್ಚಳವನ್ನು ತೆಗೆದುಹಾಕಿ ಮತ್ತು ಹಾಗಲಕಾಯಿಯನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಇನ್ನೊಂದು ಪಾತ್ರೆಯಲ್ಲಿ ಕೈಯಿಂದ ರಸವನ್ನು ಹಿಂಡಿ. ಹೀಗೆ ಮಾಡುವುದರಿಂದ ಹಾಗಲ ಕಾಯಿಯಲ್ಲಿನ ಕಹೀ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
- ಇದಾದ ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ, ಎಲ್ಲಾ ರಸ ಹಿಂಡಿದ ಹಾಗಲಕಾಯಿ ತುಂಡುಗಳನ್ನು ಸೇರಿಸಿ ಮತ್ತು ಸ್ವಲ್ಪ ಬಣ್ಣ ಬದಲಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ. ಹೀಗೆ ಹುರಿದ ನಂತರ ಒಂದು ಪಾತ್ರೆಗೆ ತೆಗೆದುಕೊಂಡು ಪಕ್ಕಕ್ಕೆ ಇಡಿ.
- ಈಗ ಅದೇ ಬಾಣಲೆಯಲ್ಲಿ ಸಾಸಿವೆ ಗರಿಗರಿಯಾಗುವವರೆಗೆ ಹುರಿಯಿರಿ. ಅದರ ನಂತರ, ಹಸಿ ಮೆಣಸಿನಕಾಯಿ ಚೂರುಗಳು, ತೆಳುವಾಗಿ ಕತ್ತರಿಸಿದ ಈರುಳ್ಳಿ, ಸ್ವಲ್ಪ ಉಪ್ಪು ಸೇರಿಸಿ ಮತ್ತು ಈರುಳ್ಳಿ ಮೃದುವಾಗುವವರೆಗೆ ಹುರಿದುಕೊಳ್ಳಿ.
- ಆ ನಂತರ ಕರಿಬೇವು ಮತ್ತು ಶುಂಠಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಟೊಮೆಟೊ ಚೂರುಗಳನ್ನು ಹಾಕಿ ಮೃದುವಾಗುವವರೆಗೆ ಹುರಿಯಿರಿ.
- ಬಳಿಕ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಮತ್ತು ಎಲ್ಲವನ್ನೂ ಒಮ್ಮೆ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ, ನೆನೆಸಿದ ಹುಣಸೆಹಣ್ಣಿನಿಂದ ತೆಗೆದ ರಸವನ್ನು ಮತ್ತು ಒಂದು ಕಪ್ ನೀರು ಸೇರಿಸಿ ಮತ್ತು ಹುಳಿ ಕಡಿಮೆ ಮಾಡಲು ಉಪ್ಪು ಮತ್ತು ಖಾರದ ಪುಡಿ ಸಾಕಾಗುತ್ತದೆಯೇ ಎಂದು ಪರೀಕ್ಷಿಸಿ. ಸಾಕಾಗದಿದ್ದರೆ, ಮತ್ತಷ್ಟು ಸೇರಿಸಿಕೊಳ್ಳಿ.
- ಅದರ ನಂತರ ಹುರಿದ ಹಾಗಲಕಾಯಿ ತುಂಡುಗಳನ್ನು ಹಾಕಿ ಮತ್ತೊಮ್ಮೆ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಿ.
- ನಂತರ ಕಡಿಮೆ ಉರಿಯಲ್ಲಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ಹೀಗೆ ಬೇಯಿಸುವಾಗ ಹುರಿದ ಮೆಂತ್ಯ ಪುಡಿ ಹಾಕಿ ಒಟ್ಟಿಗೆ ಬೇಯಿಸಿ.
- ಎಣ್ಣೆ ಬೇರ್ಪಡುವವರೆಗೆ ಮಿಶ್ರಣವನ್ನು ಬೇಯಿಸಿದ ನಂತರ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಆಗ ಘುಮಘುಮಿಸುವ ಸಖತ್ ಟೇಸ್ಟಿ ಹಾಗಲಕಾಯಿ ರೆಡಿ!
- ಬಿಸಿ ರೊಟ್ಟಿ, ಅನ್ನದೊಂದಿಗೆ ತಿಂದರೆ ತುಂಬಾ ಇಷ್ಟವಾಗುತ್ತದೆ.