ಬೆಂಗಳೂರು: "ದೇಶಾದ್ಯಂತ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನದ ಭಾಗವಾಗಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸರಿಸುಮಾರು 1,45,312 ಸದಸ್ಯರನ್ನು ನೋಂದಾಯಿಸಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ದಾಖಲೆ ಸೃಷ್ಠಿಸಿರುವ ನಮ್ಮ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪ್ರಯತ್ನ ಮಾದರಿಯಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
"ಕಾರ್ಯಕರ್ತರೊಂದಿಗೆ ಶಾಸಕರು, ಪದಾಧಿಕಾರಿಗಳು, ಮುಖಂಡರು ಮುಂದೆ ಇದ್ದು ಪ್ರತಿ ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಸಾಗಿದ್ದೇ ಆದಲ್ಲಿ ಗುರಿ ತಲುಪುವ ನಿಟ್ಟಿನಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸಬಹುದು. ವಿಕಸಿತ ಭಾರತದ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ಬಲ ತುಂಬುವಲ್ಲಿ ಕರ್ನಾಟಕ ಬಹುದೊಡ್ಡ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಪರಿಯ ಪ್ರಯತ್ನಗಳು ಕಾರ್ಯಕರ್ತರಲ್ಲಿ ಪ್ರೇರಣೆ ತುಂಬಲಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
" ಸದಸ್ಯತ್ವ ನೋಂದಣಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದ ಗರಿ ಮುಡಿಗೇರಿಸಿಕೊಂಡಿದೆ ಯಲಹಂಕ"
— Vijayendra Yediyurappa (@BYVijayendra) September 26, 2024
ದೇಶಾದ್ಯಂತ ನಡೆಯುತ್ತಿರುವ ಐತಿಹಾಸಿಕ ಬಿಜೆಪಿ ಸದಸ್ಯತಾ ಅಭಿಯಾನದ ಭಾಗವಾಗಿ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸರಿಸುಮಾರು 1,45,312 ಸದಸ್ಯರನ್ನು ನೋಂದಾಯಿಸಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು ದಾಖಲೆ ಸೃಷ್ಠಿಸಿರುವ ನಮ್ಮ ಯಲಹಂಕ ವಿಧಾನಸಭಾ ಕ್ಷೇತ್ರದ… pic.twitter.com/I0DswV5zDC
ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಸದಸ್ಯತ್ವ ನೋಂದಣಿಯಲ್ಲಿ ನಿರೀಕ್ಷಿತ ಗುರಿ ಸಾಧಿಸುವಲ್ಲಿ ಕರ್ನಾಟಕ ಹಿಂದುಳಿದಿರುವುದಕ್ಕೆ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ, ಎಲ್ಲ ನಾಯಕರಿಗೂ ಗುರಿ ನೀಡಿದ್ದರು.