ETV Bharat / state

ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ; ಸ್ಥಳಕ್ಕೆ ಧಾವಿಸಿ ಮೂವರ ಪ್ರಾಣ ರಕ್ಷಿಸಿದ ಪೊಲೀಸರು - Police Foil Suicide Bid - POLICE FOIL SUICIDE BID

ಕೌಟುಂಬಿಕ ಕಲಹದಿಂದ ನೊಂದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನ
ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ಪೊಲೀಸರು (ETV Bharat)
author img

By ETV Bharat Karnataka Team

Published : Jul 23, 2024, 8:38 AM IST

ಶಿವಮೊಗ್ಗ: ಹೊಳೆಗಿಳಿದು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಿಸಿದ ಘಟನೆ ಸಾಗರ ತಾಲೂಕಿನ ಕುಗ್ವೆ ಗ್ರಾಮದಲ್ಲಿ ಸೋಮವಾರ ನಡೆಯಿತು. ಸಾಗರ ಪಟ್ಟಣದ ಅಣಲೇಕೊಪ್ಪದ ನಿವಾಸಿ 26 ವರ್ಷದ ಗೃಹಿಣಿ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ತನ್ನ 13 ವರ್ಷದ ಮಗಳು ಹಾಗೂ 4 ವರ್ಷದ ಮಗನೊಂದಿಗೆ ಕುಗ್ವೆ ಗ್ರಾಮದ ಸಮೀಪದ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸ್ಥಳೀಯರೊಬ್ಬರು ಮಾಹಿತಿ ನೀಡಿರುವಂತೆ, ಸಾಗರದಿಂದ ಕುಗ್ವೆಗೆ ಸ್ಕೂಟಿಯಲ್ಲಿ ಮಕ್ಕಳೊಂದಿಗೆ ಬಂದ ಮಹಿಳೆ ರಸ್ತೆ ಬದಿ‌ ವಾಹನ ನಿಲ್ಲಿಸಿ, ಮೊಬೈಲ್ ಹಾಗೂ ಚಪ್ಪಲಿಯನ್ನು ಬಿಟ್ಟು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ತಡೆದು ಸಮಾಧಾನಪಡಿಸಿ ವಾಪಸ್ ಕಳುಹಿಸಿದರು. ಅಲ್ಲಿಂದ ಹೋದ ಆಕೆ ಪುನಃ ಹೊಳೆ ಬದಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನು ಕಂಡ ಅದೇ ವ್ಯಕ್ತಿ ತಕ್ಷಣ ಹೊಳೆ ಸಮೀಪದ ಪೊಲೀಸ್​ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಹೆಡ್ ಕಾನ್ಸ್‌ಟೇಬಲ್ ಶಿವರುದ್ರಯ್ಯ ಹಾಗೂ ಚಾಲಕ ಶಿವಾನಂದ ಸ್ಥಳಕ್ಕೆ ದೌಡಾಯಿಸಿದರು. ನೀರಿನಲ್ಲಿ ಮುಳುಗಲು ಯತ್ನಿಸುತ್ತಿದ್ದ ಗೃಹಿಣಿ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್​ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯಿಂದ ಮೂರು ಜೀವಗಳು ಉಳಿದಿವೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಹೆದ್ದಾರಿ ಮೇಲೆ ಹುಡುಕಾಟ ಪೂರ್ಣ - ಸಿಗದ ಲಾರಿ, ಡ್ರೈವರ್​​​​ಗಾಗಿ ನಿರಂತರ ಶೋಧ​​ - SHIRURU HILL COLLAPSE TRAGEDY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.