ETV Bharat / state

ಸ್ಕೂಟಿಗೆ ತಾಗಿದ ಬಿಎಂಟಿಸಿ ಬಸ್:​ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ- ಸಿಸಿಟಿವಿ ವೀಡಿಯೊ - WOMAN BEATS BUS DRIVER

ತಮ್ಮ ದ್ವಿಚಕ್ರ ವಾಹನಕ್ಕೆ ಬಸ್​ ತಾಗಿತೆಂದು ಕೋಪಗೊಂಡ ಮಹಿಳೆ ಬಿಎಂಟಿಸಿ ಬಸ್​​​ ಚಾಲಕನಿಗೆ ಮನಬಂದಂತೆ ಥಳಿಸಿದ್ದಾರೆ.

BENGALURU  BMTC BUS DRIVER BEATEN  BUS DRIVER BEATEN VIDEO  ಚಾಲಕನಿಗೆ ಮಹಿಳೆ ಥಳಿತ
ಬಿಎಂಟಿಸಿ ಬಸ್ ಚಾಲಕನಿಗೆ ಥಳಿಸಿದ ಮಹಿಳೆ (ETV Bharat)
author img

By ETV Bharat Karnataka Team

Published : Dec 15, 2024, 7:15 AM IST

ಬೆಂಗಳೂರು: ಸ್ಕೂಟಿಗೆ ಬಸ್​​​​​​ ತಾಗಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಚಾಲಕನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ಘಟನೆ ನಗರದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಸ್​​ ಚಾಲಕ ಅಮರೇಶ್ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಮಹಿಳೆಯ ವಿರುದ್ಧ ದೂರು ನೀಡಿದ್ದಾರೆ. ಇದಕ್ಕೆೆ ಪ್ರತಿಯಾಗಿ ಮಹಿಳೆಯೂ ಕೂಡ ಚಾಲಕನ ವಿರುದ್ಧ ದೂರು ನೀಡಿದ್ದಾರೆ.

ಸಿಸಿಟಿವಿ ದೃಶ್ಯ (ETV Bharat)

ಏನಾಯ್ತು?: ಜಾಲಹಳ್ಳಿ ಕ್ರಾಸ್‌ನಿಂದ ಕೆ.ಆರ್​.ಮಾರುಕಟ್ಟೆ ಕಡೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಸುಮ್ಮನಹಳ್ಳಿ ಸೇತುವೆ ಬಳಿ ಬಲಭಾಗದಲ್ಲಿದ್ದ ಸ್ಕೂಟಿಗೆ ತಾಗಿದೆ. ಮಹಿಳೆ ಸ್ಕೂಟಿಸಮೇತ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಅವರು ಎದ್ದು ಬಂದು ಬಸ್‌ನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆೆ ನಡೆಸಿದರು. ಮತ್ತೊಬ್ಬ ವ್ಯಕ್ತಿಯೂ ಕೂಡ ಹಲ್ಲೆ ನಡೆಸಲು ಸಾಥ್ ನೀಡಿದ್ದಾರೆ. ಬಳಿಕ ಸ್ಥಳೀಯರು ಮಹಿಳೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ಬಗ್ಗೆ ದೂರು, ಪ್ರತಿ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟ: ಮೂಲ ಪತ್ತೆ ಹಚ್ಚಲು DNA ಟೆಸ್ಟ್​​ಗೆ ಗ್ರಾಮಸ್ಥರ ಪಟ್ಟು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.