ETV Bharat / state

ಮತ್ತೆ ಮುನ್ನೆಲೆಗೆ ಬಂದ ಜಾತಿಗಣತಿ ವರದಿ: ಒಕ್ಕಲಿಗ ಸಮುದಾಯದ ನಿಲುವೇನು?

ಜಾತಿಗಣತಿ ವರದಿಯನ್ನು ಈಗಾಗಲೇ ಹಲವು ಸಂಘಟನೆಗಳು ವಿರೋಧಿಸಿವೆ. ಇದನ್ನು ಗಮನದಲ್ಲಿರಿಸಿಕೊಂಡು ಮರುಸಮೀಕ್ಷೆ ನಡೆಸುವುದು ಸೂಕ್ತ ಎಂದು ರಾಜ್ಯ ಒಕ್ಕಲಿಗರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

author img

By ETV Bharat Karnataka Team

Published : 2 hours ago

vidhanasouda
ವಿಧಾನಸೌಧ (ETV Bharat)

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಜಾತಿಗಣತಿ ವರದಿ ಸದ್ದು ಮಾಡುತ್ತಿದೆ. ರಾಜ್ಯ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಹಾಗೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಕುರಿತು ಎರಡು ಮೂರು ತಿಂಗಳಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರವೇ ನಡೆಯುತ್ತಿದೆ. ಇದರ ಮಧ್ಯೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹೆಸರಲ್ಲಿ ನಡೆಸಿರುವ ಜಾತಿಗಣತಿ ವರದಿಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಈಗ ಭಾರಿ ಚರ್ಚೆಯ ವಿಷಯವಾಗಿದೆ.

ಕೆಲವು ಸಮುದಾಯಗಳ ಜನಸಂಖ್ಯೆ ಏರಿಳಿತಗಳಾಗಿರುವ ಬಗ್ಗೆ ವದಂತಿಗಳಿರುವುದರಿಂದ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ವರದಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಜಾತಿ ಜನಗಣತಿಯ ವರದಿ ಹಳೆಯದಾಗಿದ್ದು, ಪ್ರಸ್ತುತ ದತ್ತಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. 9 ವರ್ಷಗಳ ಹಿಂದೆ ಸಂಗ್ರಹಿಸಲಾದ ಅಂಕಿ-ಅಂಶಗಳನ್ನು ಪ್ರಸ್ತುತ ಕಾಲಮಾನದಲ್ಲಿ ಅಂಗೀಕರಿಸುವುದು ಸರಿಯಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಮಾಜಿ ಸಂಸದ ಡಿ.ಕೆ.ಸುರೇಶ್‌, ಸಚಿವ ಕೃಷ್ಣಬೈರೇಗೌಡ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಜನಾಂಗಕ್ಕೆ ಅನಾನುಕೂಲವಾಗಬಾರದು ಎಂಬುದು ಉದ್ದೇಶ. ಕಾಂತರಾಜು ಅವರು ಆಯೋಗದ ಅಧ್ಯಕ್ಷರಾಗಿದ್ದಾಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯೂ ಅವೈಜ್ಞಾನಿಕವಾಗಿದೆ. ಹತ್ತು ವರ್ಷಗಳಷ್ಟು ಹಳೆಯ ಮಾಹಿತಿಯನ್ನು ಇದು ಒಳಗೊಂಡಿದೆ. ಆ ನಂತರ ಆಗಿರುವ ಗಮನಾರ್ಹ ಬದಲಾವಣೆಗಳ ಮಾಹಿತಿ ಇಲ್ಲ. ಹೀಗಾಗಿ ವರದಿ ಅಪ್ರಸ್ತುತ ಮತ್ತು ಅವೈಜ್ಞಾನಿಕ. ಈ ವರದಿಯನ್ನು ಹಲವು ಸಮುದಾಯ ಹಾಗೂ ಸಂಘಟನೆಗಳು ಈಗಾಗಲೇ ವಿರೋಧಿಸಿವೆ. ಇದನ್ನು ಗಮನದಲ್ಲಿರಿಸಿಕೊಂಡು ಮರು ಸಮೀಕ್ಷೆ ಮಾಡಿಸುವುದು ಸೂಕ್ತ. ಸರ್ಕಾರಕ್ಕೆ ಸರ್ವ ಜನರ ಹಿತ ಮುಖ್ಯವಾಗಬೇಕೆಂಬುದೇ ಒಕ್ಕಲಿಗ ಸಮುದಾಯದ ಆಶಯ ಎಂದು ರಾಜ್ಯ ಒಕ್ಕಲಿಗರ ಸಂಘ ಹೇಳಿದೆ.

ಮರು ಸಮೀಕ್ಷೆ ನಡೆಸಲಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ನಡೆಸಿರುವ ಜಾತಿಗಣತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬಾರದು. ಹೊಸದಾಗಿ ವೈಜ್ಞಾನಿಕವಾಗಿ ರಾಜ್ಯದ ಎಲ್ಲ ಸಮುದಾಯಗಳಿಗೆ ಅನುಕೂಲವಾಗುವಂತೆ ಎಲ್ಲ ಜನವಸತಿಗಳಿಗೆ ಭೇಟಿ ನೀಡಿ, ಮರು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯ ಮಾಡಿದೆ.

ಪ್ರತೀ ಮನೆ ಮನೆಗೆ ಭೇಟಿ ನೀಡಿ ಅಗತ್ಯವಿರುವ ಮಾಹಿತಿ ಸಂಗ್ರಹಿಸಿ, ವರದಿಯನ್ನು ಕಾಲಮಿತಿಯಲ್ಲಿ ಪಡೆಯಬೇಕು ಹಾಗೂ ಸಾರ್ವಜನಿಕವಾಗಿ ಮುಕ್ತ ಚರ್ಚೆಗೆ ಅವಕಾಶ ನೀಡಿದ ಬಳಿಕ ಅನುಷ್ಠಾನಕ್ಕೆ ತರಬೇಕೆಂಬುದು ಸಂಘದ ಆಗ್ರಹ.

ನೈಜ ವರದಿ ಪಡೆದು ಜಾರಿಗೆ ತರಲಿ: ರಾಜ್ಯದಲ್ಲಿ ಜಾತಿಗಣತಿ ವರದಿ ಅನುಷ್ಠಾನ ಮಾಡಲು ನಮ್ಮ ಯಾವುದೇ ಆಕ್ಷೇಪವಿಲ್ಲ. ನಾವು ಮುಕ್ತವಾಗಿ ಸ್ವಾಗತ ಮಾಡುತ್ತೇವೆ. ಆದರೆ, ಎಲ್ಲ ಜನಾಂಗಕ್ಕೂ ಅನುಕೂಲವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮರು ಸಮೀಕ್ಷೆ ನಡೆಸಬೇಕು. ನೈಜವಾದ ವರದಿಯನ್ನು ಪಡೆದು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒಕ್ಕಲಿಗರ ಸಂಘ ಒತ್ತಾಯಿಸಿದೆ.

ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಬಹಳಷ್ಟು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ ಎಂದು ಸಹಸ್ರಾರು ಪತ್ರಗಳು ಹಾಗೂ ದೂರವಾಣಿ ಕರೆಗಳು ರಾಜ್ಯ ಒಕ್ಕಲಿಗರ ಸಂಘಕ್ಕೆ ಬಂದಿವೆ. ಹೀಗಾಗಿ, ಈಗಾಗಲೇ ಎರಡು ಮೂರು ಬಾರಿ ಸರ್ಕಾರಕ್ಕೆ ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಮರು ಸಮೀಕ್ಷೆ ನಡೆಸುವಂತೆ ಸಂಘದ ವತಿಯಿಂದ ಮನವಿ ಮಾಡಿದ್ದೇವೆ. ಇದೇ ರೀತಿಯ ಒತ್ತಾಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಮಾಡಿದೆ.

ಬೇರೆ ಬೇರೆ ಸಮುದಾಯದವರೂ ಮನವಿ ಮಾಡಿದ್ದಾರೆ. ಈ ಸಂಬಂಧದ ಮನವಿಗಳನ್ನು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಗಂಭೀರವಾಗಿ ಪರಿಗಣಿಸಿ ಗಮನಹರಿಸಬೇಕು. ಎಲ್ಲ ಸಮುದಾಯಗಳ ಏಳಿಗೆಗೆ ಅನುಕೂಲವಾಗುವಂತಹ ಜಾತಿಗಣತಿಯ ವರದಿ ಪಡೆದು ಅನುಷ್ಠಾನಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಅವೈಜ್ಞಾನಿಕ ವರದಿಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವ ಅಗತ್ಯವಿಲ್ಲ. ಕೆಲವರ ಹಾಗೂ ಕೆಲವು ಸಂಘಟನೆಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ರಾಜಕೀಯ ದುರುದ್ದೇಶದಿಂದ ಜಾತಿಗಣತಿ ಅನುಷ್ಠಾನವಾಗಬಾರದು. ಸರ್ವಸಮ್ಮತವಾದ ವರದಿ ಅನುಷ್ಠಾನಗೊಳ್ಳಬೇಕು. ಒಂದು ವೇಳೆ ವೈಜ್ಞಾನಿಕ ವರದಿ ಪಡೆಯದೇ ಹಠಕ್ಕೆ ಬಿದ್ದು ಅವೈಜ್ಞಾನಿಕ ಹಾಗೂ ವಾಸ್ತವಕ್ಕೆ ದೂರವಿರುವ ವರದಿ ಅನುಷ್ಠಾನಕ್ಕೆ ಸರ್ಕಾರ ಮುಂದಾದರೆ ನಮ್ಮ ಸಂಘದ ನೇತೃತ್ವದಲ್ಲಿ ಸಮಾಜದ ಇತರ ಸಂಘ-ಸಂಸ್ಥೆಗಳ ಜೊತೆಗೂಡಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯ. ಇಷ್ಟೇ ಅಲ್ಲ, ತಾಲೂಕು ಮಟ್ಟದಲ್ಲೂ ತೀವ್ರವಾದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟು ದಿನ ಸುಮ್ಮನಿದ್ದು, ಮುಡಾ ಹಗರಣ ವಿವಾದ ತೀವ್ರಗೊಂಡ ಸಮಯದಲ್ಲಿ ಜಾತಿ ಜನಗಣತಿ ವರದಿ ಅಂಗೀಕಾರಕ್ಕೆ ಮುಂದಾಗಿರುವುದ್ದೇಕೆ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಸಹ ವರದಿಗೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಈ ವರದಿ ಜಾರಿಯಾದರೆ ವೀರಶೈವರು 4ನೇ ಸ್ಥಾನಕ್ಕೆ ಮತ್ತು ಒಕ್ಕಲಿಗರು 5ನೇ ಸ್ಥಾನಕ್ಕೆ ಕುಸಿಯುವ ಅಪಾಯವಿದೆ ಎಂಬ ಆತಂಕವಿದೆ ಎಂದು ಹೇಳಲಾಗುತ್ತಿದೆ. ಭವಿಷ್ಯದಲ್ಲಿ ಬರುವ ಲೋಕಸಭೆ, ವಿಧಾನಸಭೆ, ಮತ್ತು ಪಂಚಾಯಿತಿ ಚುನಾವಣೆಗಳಲ್ಲಿ ಸದಸ್ಯ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬ ಭಯವೂ ಇದೆ.

ಈ ಕ್ಷಣದವರೆಗೂ ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವರು ಮೊದಲ ಮತ್ತು ಒಕ್ಕಲಿಗರು ಎರಡನೇ ಸ್ಥಾನದಲ್ಲಿದ್ದಾರೆ ಎಂಬ ನಂಬಿಕೆ ಇದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಈ ಎರಡೂ ಸಮುದಾಯಗಳು ಪ್ರಬಲ ಹಿಡಿತ ಹೊಂದಿವೆ. ಒಟ್ಟಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೇನುಗೂಡಿಗೆ ಕೈ ಹಾಕಿದ್ದಾರೆ. ವರದಿಯನ್ನು ಜಾರಿ ಮಾಡಿದರೆ ಪ್ರಬಲ ಸಮುದಾಯಗಳ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ.

ಸಿದ್ದರಾಮಯ್ಯಗೆ ಅಗ್ನಿಪರೀಕ್ಷೆ: ಇನ್ನೊಂದೆಡೆ, ವರದಿ ಜಾರಿಗೊಳಿಸದಿದ್ದರೆ ಅಹಿಂದ ವರ್ಗಗಳ ಆಕ್ರೋಶ ಹೆಚ್ಚಾಗುತ್ತದೆ. ತಮ್ಮ ಪರಮೋಚ್ಚ ನಾಯಕ ಎಂದು ಈ ವರ್ಗಗಳು ಸಿದ್ಧರಾಮಯ್ಯ ಅವರನ್ನು ಒಪ್ಪಿಕೊಂಡಿವೆ. ವರದಿ ಜಾರಿಯಾಗದಿದ್ದರೆ ಅವರ ನಾಯಕತ್ವ ಹುಸಿ ಎಂದು ಬಿಂಬಿತವಾಗುತ್ತದೆ. ಇಲ್ಲಿ ಸಿದ್ದರಾಮಯ್ಯ ಅವರಿಗಿಂತ ಪಕ್ಷವೇ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ಮುಡಾ, ಜಾತಿ ಗಣತಿ ವರದಿ, ಒಳ ಮೀಸಲಾತಿ ಜಾರಿ ಸಿದ್ದರಾಮಯ್ಯ ಅವರಿಗೆ ಅಗ್ನಿಪರೀಕ್ಷೆಯನ್ನು ತಂದೊಡ್ಡಿದೆ.

ಇದನ್ನೂ ಓದಿ: ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ, ಆದರೆ ವರದಿ ಜಾರಿಗೆ ತನ್ನಿ : ಬಿ ಕೆ ಹರಿಪ್ರಸಾದ್ - B K Hariprasad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.