ETV Bharat / state

ಕೆಇಎ ಪರೀಕ್ಷೆಗೆ ಶೇ.34ರಷ್ಟು ಅಭ್ಯರ್ಥಿಗಳು ಹಾಜರು: ಅಕ್ರಮ ತಡೆಗೆ ವೆಬ್ ಕಾಸ್ಟಿಂಗ್ ಕಣ್ಗಾವಲು - Karnataka Examinations Authority - KARNATAKA EXAMINATIONS AUTHORITY

ಬಿಎಂಟಿಸಿ, ಕೆಕೆಆರ್​ಟಿಸಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಶನಿವಾರ ಪರೀಕ್ಷೆ ನಡೆದಿದೆ.

ವೆಬ್ ಕಾಸ್ಟಿಂಗ್ ಕಣ್ಗಾವಲು
ವೆಬ್ ಕಾಸ್ಟಿಂಗ್ ಕಣ್ಗಾವಲು (ETV Bharat)
author img

By ETV Bharat Karnataka Team

Published : Jul 14, 2024, 10:15 AM IST

ಕೆಇಎ ಪರೀಕ್ಷೆಗೆ ಶೇ.34ರಷ್ಟು ಅಭ್ಯರ್ಥಿಗಳು ಹಾಜರು (ETV Bharat)

ಬೆಂಗಳೂರು: ಬಿಎಂಟಿಸಿ, ಕೆಕೆಆರ್​ಟಿಸಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಶನಿವಾರ ನಡೆದ ಪರೀಕ್ಷೆಗೆ ಶೇ 34.5ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.

ಬೆಂಗಳೂರು, ಕಲಬುರಗಿ, ಧಾರವಾಡ ಮತ್ತು ಬಳ್ಳಾರಿಯ ಒಟ್ಟು 22 ಕೇಂದ್ರಗಳ 377 ಕೊಠಡಿಗಳಲ್ಲಿ ನಡೆದ ಪರೀಕ್ಷೆಗೆ ಈ ಬಾರಿ ವೆಬ್‌ ಕಾಸ್ಟಿಂಗ್ ಮಾಡುವುದರ‌ ಮೂಲಕ ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆಗೆ ಒಟ್ಟು 8,526 ಮಂದಿ ಅರ್ಜಿ‌ ಸಲ್ಲಿಸಿದ್ದು‌, 2,905 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಸಚಿವರಿಂದ ತರಾಟೆ: ಪರೀಕ್ಷಾ ವ್ಯವಸ್ಥೆಯ ವೆಬ್​ ಕಾಸ್ಟಿಂಗ್​​ನ್ನು‌ ಇಲ್ಲಿನ‌ ಕಾಮಂಡ್ ಸೆಂಟರ್​ನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್​ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಧಾರವಾಡ ಕೇಂದ್ರದ ಪರೀಕ್ಷಾ ಮೇಲ್ವಿಚಾರಕರೊಬ್ಬರು ಅಭ್ಯರ್ಥಿಯ ಸಹಿಯನ್ನು ಅವರ ಪಕ್ಕದಲ್ಲಿ ಕುಳಿತು ಹಾಕಿಸಿಕೊಂಡಿದ್ದನ್ನು ನೋಡಿ ಸಚಿವರು ಗರಂ ಆದರು.

ನಂತರ ಹಾಟ್​ಲೈನ್​ನಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರಕ್ಕೆ ಕರೆ ಮಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆ ರೀತಿ ಪಕ್ಕದಲ್ಲಿ ಕುಳಿತು ಸಹಿ ಮಾಡಿಸಿಕೊಳ್ಳುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು. ಪರೀಕ್ಷಾ ಅಕ್ರಮ ತಡೆಯಲು ಈ ವೆಬ್ ಕಾಸ್ಟಿಂಗ್ ವ್ಯವಸ್ಥೆ ಸೂಕ್ತವಾಗಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: 20 ಸಾವಿರ ಅಂಗನವಾಡಿಗಳು 'ಗವರ್ನಮೆಂಟ್ ಮಾಂಟೆಸ್ಸರಿ' ಆಗಿ ಪರಿವರ್ತನೆ: ಲಕ್ಷ್ಮೀ ಹೆಬ್ಬಾಳ್ಕರ್ - Government Montessori

ETV Bharat Logo

Copyright © 2024 Ushodaya Enterprises Pvt. Ltd., All Rights Reserved.