ETV Bharat / state

ಹೊಳೆನರಸೀಪುರದಲ್ಲಿ ಬರುವ ಲೀಡ್​​ಕ್ಕಿಂತ ಹಾಸನದಲ್ಲಿ ಒಂದು ಮತ ಹೆಚ್ಚು: ಪ್ರೀತಮ್ ಗೌಡ - Preetham Gowda - PREETHAM GOWDA

ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯ ಗೆಲುವಿನ ಕುರಿತು ಪ್ರೀತಮ್ ಗೌಡ ಮಾತನಾಡಿದರು.

former-mla-preetham-gowda
ಮಾಜಿ ಶಾಸಕ ಪ್ರೀತಮ್ ಗೌಡ
author img

By ETV Bharat Karnataka Team

Published : Apr 8, 2024, 4:27 PM IST

Updated : Apr 8, 2024, 4:41 PM IST

ಮಾಜಿ ಶಾಸಕ ಪ್ರೀತಮ್ ಗೌಡ

ಮೈಸೂರು: ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಹೊಳೆನರಸೀಪುರಕ್ಕಿಂತ ಒಂದು ಮತ ಹೆಚ್ಚು ಲೀಡ್ ಬರುತ್ತದೆ ಎಂದು ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಮ್ ಗೌಡ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಯುಗಾದಿ ಹಬ್ಬದ ನಂತರ ಪ್ರಚಾರ ಕಾರ್ಯ ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ನಮ್ಮ ಯಾವ ಬೆಂಬಲಿಗರೂ ಕಾಂಗ್ರೆಸ್​ಗೆ ಹೋಗಿಲ್ಲ, ಹೋಗುವುದೂ ಇಲ್ಲ. ಈಗ ಹೋಗುವವರು ಯಾವ ಬೂತ್ ಅಧ್ಯಕ್ಷರೂ ಅಲ್ಲ. ಯಾರೋ ಟೀ ಕೊಡಿಸಿದ ಕೂಡಲೇ, ಪ್ರಚಾರ ಪತ್ರ ಕೊಟ್ಟ ಕೂಡಲೇ, ಅವರು ಕಾಂಗ್ರೆಸ್ ಆಗುವುದಿಲ್ಲ ಎಂದರು.

ನಮ್ಮ ಕಾರ್ಯಕರ್ತರ ಪ್ರತ್ಯಕ್ಷ ಸಭೆ ಮಾಡುವ ಅಗತ್ಯವಿಲ್ಲ. 2ನೇ ತಾರೀಖಿನಂದು ಸಭೆ ಮಾಡಿ ಕೆಲಸ ಮಾಡಲು ಹೇಳಿದ್ದೇನೆ. ಎಲ್ಲರೂ ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಸುಖಾಸುಮ್ಮನೆ, ಪದೇ ಪದೇ ಊಹಾಪೋಹಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಗೆಲ್ಲಿಸುತ್ತೇವೆ ಎಂದು ಪ್ರೀತಮ್ ಗೌಡ ತಿಳಿಸಿದರು.

ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನು ಏನೂ ಹೇಳುವುದಿಲ್ಲ: ಪ್ರಹ್ಲಾದ್ ಜೋಶಿ - Prahlad Joshi

Last Updated : Apr 8, 2024, 4:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.