ETV Bharat / state

ನೆಲ-ಜಲ-ಭಾಷೆಯ ವಿಚಾರದಲ್ಲಿ ನಮಗೆ ಪಕ್ಷಗಳಿಲ್ಲ, ರಾಜ್ಯದ ಹಿತಾಸಕ್ತಿಗೆ ಆದ್ಯತೆ: ಸಿಎಂ - CM Siddaramaiah

ಕರ್ನಾಟಕದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು, ಕೇಂದ್ರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳಿಗೆ ಒಪ್ಪಿಗೆ ದೊರಕಿಸಿಕೊಡುವುದು ಹಾಗೂ ಕೆಲವು ನೀತಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Jun 28, 2024, 3:37 PM IST

ದೆಹಲಿ/ಬೆಂಗಳೂರು: ನೆಲ, ಜಲ, ಸಂಪನ್ಮೂಲ, ಭಾಷೆ, ಸಂಸ್ಕೃತಿ ಇತ್ಯಾದಿ ವಿಚಾರಗಳಿಗೆ ಬಂದಾಗ ನಮಗೆ ಪಕ್ಷಗಳಿಲ್ಲ. ಕರ್ನಾಟಕ ಹಿತಾಸಕ್ತಿಯ ರಕ್ಷಣೆಯೇ ನಮ್ಮ ಆದ್ಯತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಉದ್ದೇಶವಿಲ್ಲದ, ಅದಕ್ಕೂ ಮೀರಿ ನಮ್ಮ ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರು ಸದನದೊಳಗೆ ಹಾಗೂ ಹೊರಗೆ ಒಕ್ಕೊರಲಲ್ಲಿ ಸೌಹಾರ್ದಯುತವಾಗಿ ದನಿ ಎತ್ತುವ ಅಗತ್ಯವನ್ನು ಹೇಳಿದ್ದೇವೆ ಎಂದರು.

ನಾವು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರಬಹುದು. ಆದರೆ ಕರ್ನಾಟಕದ ಹಿತಾಸಕ್ತಿಯ ವಿಷಯ ಬಂದಾಗ ನಾವೆಲ್ಲರೂ ಒಂದೇ ವೇದಿಕೆಯವರು. ಈ ವಿಷಯದಲ್ಲಿ ನಮ್ಮ ಹಿಂದಿನವರೂ ಸಹ ನಮಗೆ ಮಾದರಿ. ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು, ಕೇಂದ್ರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡುವುದು ಹಾಗೂ ಕೆಲವು ಪಾಲಿಸಿ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.

ಸಂಸದರು, ರಾಜ್ಯದ ಕೇಂದ್ರ ಸಚಿವರುಗಳ ಜೊತೆ ನಡೆದ ಸಭೆಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲ ಜನವಸತಿ ಪ್ರದೇಶಗಳಿಗೆ ನಿರಾತಂಕವಾಗಿ ಕುಡಿಯುವ ನೀರನ್ನು ಪೂರೈಸಲು ಹಾಗೂ ಅಣೆಕಟ್ಟೆಯಿಂದ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರವು 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆ ರೂಪಿಸಿದೆ. ಈ ಪ್ರಸ್ತಾವನೆಯು 2018ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಈ ಯೋಜನೆಗೆ ಹಲವು ಹಂತಗಳ ಅನುಮತಿ ಅಗತ್ಯವಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯ ಎನ್ವಿರಾನ್ಮೆಂಟಲ್ ಕ್ಲಿಯರೆನ್ಸ್ ಅನ್ನು ಶೀಘ್ರವಾಗಿ ಮಾಡಿಕೊಡುವಂತೆ ಒತ್ತಾಯಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಭದ್ರಾ ಯೋಜನೆ ಮೂಲಕ 2.25 ಲಕ್ಷ ಹೆಕ್ಟೇರ್ ಎತ್ತುವರಿ ನೀರಾವರಿ ಮೂಲಕ ವ್ಯವಸಾಯಕ್ಕಾಗಿ, ಕುಡಿಯುವ ನೀರಿಗಾಗಿ ನೀರನ್ನು ಒದಗಿಸುವ ಪ್ರಸ್ತಾವನೆಯು 2020ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಇದಕ್ಕಾಗಿ 2023-24ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ 5,300 ಕೋಟಿ ರೂ ಅನುದಾನವನ್ನು ಘೋಷಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಅನುದಾನವನ್ನು ಬಿಡುಗಡೆ ಮಾಡಿಸಲು ನೆರವಾಗಬೇಕು. ಈ ಯೋಜನೆಯನ್ನು ಕೂಡಲೇ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ಕಳಸಾ ಬಂಡೂರಿ ನಾಲಾ ಯೋಜನೆಗೆ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ಅವಾರ್ಡ್ 2018ರಲ್ಲಿ ಘೋಷಿಸಲಾಗಿತ್ತು. ರಾಜ್ಯ ಸರ್ಕಾರದ ವತಿಯಿಂದ ವಿಸ್ತೃತ ಯೋಜನಾ ವರದಿಯನ್ನು (DPR) ಈಗಾಗಲೆ ಒದಗಿಸಲಾಗಿದೆ. ಅದನ್ನು ಅನುಮೋದಿಸಲು ದಿನಾಂಕ 30.01.2024 ರಂದು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ಸಮಿತಿ ಸಭೆ ಸೇರಿ ದಿನಾಂಕ 08.01.2024ರಂದು ವರದಿಯನ್ನು ಸಲ್ಲಿಸಿದೆ. ಈ ವಿಷಯವನ್ನು 77ನೇ ಸಭೆಯ ಮುಂದೆ ಮಂಡಿಸಲಾಗಿತ್ತು. ಆದರೆ ಸಮಿತಿಯು ಈ ಕುರಿತು ತೀರ್ಮಾನ ಮಾಡಲು ಸಹ ಈ ವಿಷಯವನ್ನು ವಿನಾ ಕಾರಣ ಮುಂದೂಡಲಾಗಿದೆ. ಕಿತ್ತೂರು ಕರ್ನಾಟಕದ ಒಣ ಪ್ರದೇಶಗಳ ಜನರಿಗೆ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಆದ್ದರಿಂದ ಅತಿ ಶೀಘ್ರವಾಗಿ ತೊಡಕುಗಳು ನಿವಾರಣೆಯಾಗಲು ಯತ್ನಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ನಮ್ಮ ಮೆಟ್ರೋ ರೈಲು ಯೋಜನೆಯಡಿಯಲ್ಲಿ ಹಂತ-3 ರ ಕಾಮಗಾರಿಗೆ 15611 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೇಂದ್ರದ ವಸತಿ ಮತ್ತು ನಗರಾಭಿವೃಧ್ಧಿ ಮಂತ್ರಾಲಯಕ್ಕೆ ದಿನಾಂಕ 03.08.2023 ರಂದು ಸಲ್ಲಿಸಲಾಗಿದೆ. ಡಿಪಿಆರ್ ಅನ್ನೂ ಸಹ ಸಲ್ಲಿಸಲಾಗಿದೆ. ಈ ಯೋಜನೆಯ ಕುರಿತು ಸಾರ್ವಜನಿಕ ಹೂಡಿಕೆಗಳ ಮಂಡಳಿಯು ದಿನಾಂಕ 6.5.2024 ರಂದು ಸಭೆ ನಡೆಸಿದೆ. 17.5.2024 ರಂದು ಶಿಫಾರಸ್ಸನ್ನು ಸಹ ಮಾಡಲಾಗಿದೆ. ಪಿಐಬಿಯು ಕೇಳಿದ್ದ ಎಲ್ಲ ಮಾಹಿತಿಯನ್ನು ಒದಗಿಸಲಾಗಿದೆ. ಈ ಪ್ರಸ್ತಾವನೆಯು ಸದ್ಯ ಕೇಂದ್ರ ಸರ್ಕಾರದ ಮುಂದೆ ಇದೆ. ಈ ಪ್ರಸ್ತಾವನೆಯನ್ನು ಶೀಘ್ರವಾಗಿ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.

15ನೇ ಹಣಕಾಸು ಆಯೋಗವು ಎರಡು ವರದಿಗಳನ್ನು ನೀಡಿದೆ. ಎರಡೂ ವರದಿಗಳೂ ಸಹ ಅಂತಿಮ ವರದಿಗಳೆ ಮೊದಲನೆಯದು 2020-21 ವರ್ಷಕ್ಕೆ ಸಂಬಂಧಿಸಿದ್ದು ಎರಡನೆಯದು 2021 ರಿಂದ 2026 ವರ್ಷಗಳಿಗೆ ಸಂಬಂಧಿಸಿದ್ದು. ಮೊದಲ ವರದಿಯಲ್ಲಿ 5,495 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ಕೊಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಎರಡನೆಯ ವರದಿಯಲ್ಲಿ ಫೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ರೂ ಮತ್ತು ಕೆರೆ ಹಾಗೂ ಜಲಮೂಲಗಳ ಅಭಿವೃದ್ಧಿಗೆ 3,000 ಕೋಟಿ ಸೇರಿ ಒಟ್ಟಿಗೆ 11,495 ಕೋಟಿ ರೂಪಾಯಿಗಳನ್ನು ನೀಡಲು ಶಿಫಾರಸು ಮಾಡಲಾಗಿದೆ.

ಈ ಎಲ್ಲಾ ಬೇಡಿಕೆ, ಯೋಜನೆ, ಪ್ರಸ್ತಾವನೆಗಳ ಮಂಜೂರಾತಿಗೆ ಮನವಿ ಮಾಡುತ್ತೇನೆ. ಈ ಮನವಿಗಾಗಿ ಈ ಸೌಹಾರ್ದ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎಂದು ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಂಸತ್ತಿನ ಒಳಗೆ ಹಾಗೂ ಹೊರಗೆ ರಾಜ್ಯದ ಸಂಸದರು ಇನ್ನಷ್ಟು ಪರಿಣಾಮಕಾರಿಯಾಗಿ ದನಿ ಎತ್ತಿ ರಾಜ್ಯದ ಹಿತ ಕಾಪಾಡುವರು ಎಂಬ ಆಶಾ ಭಾವನೆಯೊಂದಿಗೆ ಈ ಎಲ್ಲ ವಿಷಯಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಆ ವಿಶ್ವಾಸವೂ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿಗಳು, ಸಿಎಂ ಸ್ಥಾನದ ಚರ್ಚೆ ಅಪ್ರಸ್ತುತ : ದಿನೇಶ್​ ಗುಂಡೂರಾವ್​ - Dinesh Gundu Rao

ETV Bharat Logo

Copyright © 2024 Ushodaya Enterprises Pvt. Ltd., All Rights Reserved.