ಬೆಂಗಳೂರು: ಈ ಬಾರಿ ನಿರೀಕ್ಷೆಯಂತೆ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣ ರೌದ್ರಾವತಾರ ತಾಳಿದ್ದರೆ ರಾಜ್ಯದ ಉತ್ತರ ಒಳನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳ ಗೋಡೆ ಕುಸಿತದಂತಹ ದುರ್ಘಟನೆಗಳು ವರದಿಯಾಗುತ್ತಿವೆ. ಮತ್ತೊಂದೆಡೆ ಕಳೆದ ವರ್ಷ ಬರಗಾಲದಿಂದ ಬರಿದಾಗಿದ್ದ ಜಲಾಶಯಗಳಿಗೆ ಈ ಬಾರಿ ಮಳೆಯಿಂದ ಜೀವಕಳೆ ಬಂದಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟ ಎಷ್ಟಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ..
ಕಬಿನಿ ಅಣೆಕಟ್ಟು;
- ಗರಿಷ್ಠ ಮಟ್ಟ - 2284 ಅಡಿ (ft)
- ಇಂದಿನ ಮಟ್ಟ - 2281.75 ಅಡಿ (ft)
- ಒಳಹರಿವು - 42829 ಕ್ಯೂಸೆಕ್
- ಹೊರ ಹರಿವು - 46667 ಕ್ಯೂಸೆಕ್
ಕೆಆರ್ಎಸ್ ಅಣೆಕಟ್ಟು;
- ಗರಿಷ್ಠ ಮಟ್ಟ - 124 ಅಡಿ (ft)
- ಇಂದಿನ ಮಟ್ಟ -113.40 ಅಡಿ (ft)
- ಒಳಹರಿವು - 36772 ಕ್ಯೂಸೆಕ್
- ಹೊರ ಹರಿವು - 2448 ಕ್ಯೂಸೆಕ್
ಹೇಮಾವತಿ ಜಲಾಶಯ;
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ - 37.103 ಟಿಎಂಸಿ
- ಇಂದಿನ ನೀರಿನ ಮಟ್ಟ - 28.660 ಟಿಎಂಸಿ
- ಒಟ್ಟು ಸಂಗ್ರಹ ಸಾಮರ್ಥ್ಯ - 2922.000 ಅಡಿ
- ಸದ್ಯದ ನೀರಿನ ಸಂಗ್ರಹ - 2912.550 ಅಡಿ
- ಹೊರಹರಿವು - 250 ಕ್ಯೂಸೆಕ್
- ಒಳಹರಿವು - 30547 ಕ್ಯೂಸೆಕ್
ಹಾರಂಗಿ ಜಲಾಶಯ
- ಒಟ್ಟು ಸಾಮರ್ಥ್ಯ - 2859.000 ಅಡಿ (8.500 ಟಿಎಂಸಿ)
- ಇಂದಿನ ನೀರಿನ ಮಟ್ಟ - 2852.820 ಅಡಿ (6.545ಟಿಎಂಸಿ)
- ಒಳಹರಿವು - 10700 ಕ್ಯೂಸೆಕ್
- ಹೊರಹರಿವು - 10000 ಕ್ಯೂಸೆಕ್
ಶಿವಮೊಗ್ಗ ಜಿಲ್ಲೆಯ ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟದ ವಿವರ:
ತುಂಗಾ ಅಣೆಕಟ್ಟೆ;
- ಒಟ್ಟು ಎತ್ತರ - 588.24 ಮೀಟರ್
- ಇಂದಿನ ನೀರಿನ ಮಟ್ಟ - 3.24 ಟಿಎಂಸಿ
- ಒಳ ಹರಿವು - 71,864 ಸಾವಿರ ಕ್ಯೂಸೆಕ್
- ಹೊರ ಹರಿವು -71,855 ಸಾವಿರ ಕ್ಯೂಸೆಕ್
- ಕಳೆದ ವರ್ಷ - 588.24. ಮೀಟರ್
ಭದ್ರಾ ಅಣೆಕಟ್ಟೆ;
- ಒಟ್ಟು ಎತ್ತರ - 186 ಅಡಿ
- ಇಂದಿನ ನೀರಿನ ಮಟ್ಟ - 153 ಅಡಿ
- ಒಳ ಹರಿವು - 42,165 ಕ್ಯೂಸೆಕ್
- ಹೊರ ಹರಿವು - 174 ಕ್ಯೂಸೆಕ್
- ಕಳೆದ ವರ್ಷ - 141.5 ಅಡಿ
ಲಿಂಗನಮಕ್ಕಿ ಅಣೆಕಟ್ಟೆ:
- ಒಟ್ಟು ಎತ್ತರ - 1819 ಅಡಿ
- ಇಂದಿನ ನೀರಿನ ಮಟ್ಟ - 1787.80 ಅಡಿ
- ಒಳ ಹರಿವು - 69.226 ಕ್ಯೂಸೆಕ್
- ಹೊರ ಹರಿವು - ಇಲ್ಲ
- ಕಳೆದ ವರ್ಷ - 1757.30 ಅಡಿ
ಆಲಮಟ್ಟಿ ಜಲಾಶಯ;
- ಜಲಾಶಯದ ಗರಿಷ್ಠ ನೀರಿನ ಮಟ್ಟ - 123.081 ಟಿಎಂಸಿ
- ಇಂದಿನ ಜಲಾಶಯದಲ್ಲಿನ ನೀರಿನ ಮಟ್ಟ - 99.317 ಟಿಎಂಸಿ
- ಜಲಾಶಯದ ಒಟ್ಟು ಎತ್ತರ - 519.60 ಮೀ
- ಇಂದಿನ ಜಲಾಶಯದಲ್ಲಿನ ನೀರಿನ ಪ್ರಮಾಣ - 518.11 ಮೀ
- ಇಂದಿನ ನೀರಿನ ಒಳ ಹರಿವು - 72,286 ಕ್ಯೂಸೆಕ್
- ಇಂದಿನ ನೀರಿನ ಹೊರ ಹರಿವು - 65,480 ಕ್ಯೂಸೆಕ್
ನಾರಾಯಣಪುರ ಜಲಾಶಯ;
- ಒಟ್ಟು ಎತ್ತರ - 1615.000 ಅಡಿ
- ಒಟ್ಟು ನೀರಿನ ಸಂಗ್ರಹ ಮಟ್ಟ - 33.313 ಟಿಎಂಸಿ
- ಇಂದಿನ ನೀರಿನ ಮಟ್ಟ - 1613.330 ಅಡಿ
- ನೀರಿನ ಮಟ್ಟ - 17.970 ಟಿಎಂಸಿ
- ಹೊರ ಹರಿವು - 147 ಕ್ಯೂಸೆಕ್
- ಒಳಹರಿವು - ಇಲ್ಲ
ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ:
- ಗರಿಷ್ಠ ಮಟ್ಟ - 2079.50 ಅಡಿ
- ಒಟ್ಟು ಸಾಮರ್ಥ್ಯ - 37.731 ಟಿಎಂಸಿ
- ಇಂದಿನ ನೀರಿನ ಮಟ್ಟ - 15.005 ಟಿಎಂಸಿ
- ಒಳಹರಿವು - 6247 ಕ್ಯೂಸೆಕ್
- ಹೊರ ಹರಿವು - 194 ಕ್ಯೂಸೆಕ್
ಘಟಪ್ರಭಾ ನದಿ, ಹಿಡಕಲ್ ಜಲಾಶಯ:
- ಗರಿಷ್ಠ ಮಟ್ಟ - 2175 ಅಡಿ
- ಒಟ್ಟು ಸಾಮರ್ಥ್ಯ - 51 ಟಿಎಂಸಿ
- ಇಂದಿನ ನೀರಿನ ಮಟ್ಟ - 29.853 ಟಿಎಂಸಿ
- ಒಳಹರಿವು - 13,829 ಕ್ಯೂಸೆಕ್
- ಹೊರ ಹರಿವು - 476 ಕ್ಯೂಸೆಕ್
ಇದನ್ನೂ ಓದಿ: ಹೆಚ್ಚಿದ ಮಳೆಯಿಂದ ಜಲಾಶಯಗಳಿಗೆ ಜೀವಕಳೆ: ಕಬಿನಿ ಡ್ಯಾಂ ಬಹುತೇಕ ಭರ್ತಿ, ನದಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ - Karnataka Rain