ETV Bharat / state

ಗೌರಿಗೆ ಒಲಿದ ಗಂಗೆ: ಮಹಿಳೆಯ ಭಗೀರಥ ಸಾಹಸಕ್ಕೆ 50 ಅಡಿಯ ಬಾವಿಯಲ್ಲಿ ಚಿಮ್ಮಿದ ನೀರು - woman dug well

ಅಂಗನವಾಡಿ ಮಕ್ಕಳಿಗಾಗಿ ಏಕಾಂಗಿಯಾಗಿ ಬಾವಿ ತೋಡಿದ ಗೌರಿ ನಾಯ್ಕ ಅವರ ಶ್ರಮಕ್ಕೆ ಬಾವಿಯಲ್ಲಿ ನೀರು ಚಿಮ್ಮಿದೆ.

ಗೌರಿಗೆ ಒಲಿದ ಗಂಗೆ: ಭಗೀರಥ ಸಾಹಸಕ್ಕೆ 50 ಅಡಿಯ ಬಾವಿಯಲ್ಲಿ ಚಿಮ್ಮಿದ ನೀರು

author img

By ETV Bharat Karnataka Team

Published : Mar 6, 2024, 6:04 PM IST

Updated : Mar 6, 2024, 9:43 PM IST

ಗೌರಿಗೆ ಒಲಿದ ಗಂಗೆ

ಶಿರಸಿ: ಕಳೆದ 36 ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಂಗನವಾಡಿ ಮಕ್ಕಳಿಗಾಗಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಗಣೇಶನಗರದ ಮಹಿಳೆ ಗೌರಿ ನಾಯ್ಕ ಅವರ ಶ್ರಮಕ್ಕೆ ಫಲ ಸಿಕ್ಕಿದ್ದು, ಬಾವಿಯಲ್ಲಿ ನೀರು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿ ನೀರು ತರಿಸುವಲ್ಲಿ ಗೌರಿ ಸಫಲರಾಗಿದ್ದು, ಮಹಿಳೆ ಏನನ್ನಾದರೂ ಸಾಧಿಸುತ್ತಾಳೆ ಎಂಬುದಕ್ಕೆ ಮಾದರಿಯಾಗಿದ್ದಾರೆ.

ಕಳೆದ ಜನವರಿ 30ರಂದು ಶಿರಸಿ ಗಣೇಶನಗರದ ಅಂಗನವಾಡಿ ನಂಬರ್ 6ರಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಮತ್ತು ಶಿಕ್ಷಕರು ಬೇರೆಡೆಯಿಂದ ನೀರು ಹೊತ್ತುಕೊಂಡು ಬರುವ ಪರಿಸ್ಥಿತಿ ಕಂಡು ಇಲ್ಲಿ ಬರುವ ಮಕ್ಕಳಿಗೆ ಶಾಶ್ವತ ನೀರಿನ ವ್ಯವಸ್ಥೆ ಆಗಬೇಕು ಎಂದು ದೃಢ ಸಂಕಲ್ಪ ತೆಗೆದುಕೊಂಡು 58 ವರ್ಷ ವಯಸಸ್ಸಿನ ಹರೆಯದ ಗೌರಿ ನಾಯ್ಕ ಬಾವಿ ತೋಡಲು ಆರಂಭಿಸಿದರು.

ಸುಮಾರು 30 ಅಡಿ ಆಳ ತೋಡಿದ ಗೌರಿಯ ಸಾಹಸ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಗೌರಿಯ ಕಾರ್ಯವನ್ನು ಪ್ರಶಂಸಿಸಿದ್ದರು. ಇದಾದ ಮರುದಿನವೇ ಮಕ್ಕಳ ಸುರಕ್ಷತೆ ಮತ್ತು ಅನುಮತಿ ಕಾರಣದಿಂದ ಬಾವಿ ಅಗೆಯುವ ಕೆಲಸಕ್ಕೆ ತಾತ್ಕಾಲಿಕವಾಗಿ ತಡೆವೊಡ್ಡಿದ್ದರು. ಅಂಗನವಾಡಿ ಕೆಂದ್ರದ ಪಕ್ಕದಲ್ಲಿದ್ದ ಕಾರಣ ಅದಕ್ಕೆ ಮರದ ಹಲಗೆಗಳನ್ನು ಹಾಕಿ ಮುಚ್ಚಲಾಗಿತ್ತು.

ಜಿಲ್ಲಾಡಳಿತದ ಈ ಕ್ರಮಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್​ ಕಚೇರಿ ಮುಂದೆ ಪ್ರತಿಭಟಿಸಿ ಮಹಿಳೆಯ ನಿಸ್ವಾರ್ಥ ಸೇವೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಇದನ್ನು ಗಮನಿಸಿದ ಸಂಸದ ಅನಂತಕುಮಾರ ಹೆಗಡೆ ನೇರವಾಗಿ ಗೌರಿ ತೋಡುತ್ತಿರುವ ಬಾವಿಯಿರುವ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ, ಜಿಲ್ಲಾಧಿಕಾರಿ ಜತೆ ಮಾತನಾಡಿ, ತಕ್ಷಣವೇ ಬಾವಿ ತೋಡಲು ಅವಕಾಶ ನೀಡಬೇಕು. ಅವರ ಕೆಲಸಕ್ಕೆ ತಡೆವೊಡ್ಡದಂತೆ ಮನವಿ ಮಾಡಿದ್ದರು.

ಇದರಿಂದ ಮತ್ತೆ ಬಾವಿ ತೋಡಲು ಪ್ರಾರಂಭಿಸಿದ ಗೌರಿ ನಾಯ್ಕ ಕೊನೆಗೂ ಹಿಡಿದ ಕೆಲಸವನ್ನು ಛಲ ಬಿಡದೇ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 50 ಅಡಿ ಬಾವಿ ತೋಡಿ, ಗಂಗೆಯನ್ನು ಹೊರತರುವಲ್ಲಿ ಸಫಲರಾಗಿದ್ದಾರೆ. ಗೌರಿಯ ಈ ಸಾಧನೆಗೆ ಸ್ಥಳೀಯರು ಸಂತೋಷ ವ್ಯಕ್ತಪಡಿಸಿ, ಗ್ರಾಮದ ಸುತ್ತಲೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಲ್ಲದೇ ಗೌರಿ ನಾಯ್ಕ ಬಾವಿಗೆ ಪೂಜೆ ಸಲ್ಲಿಸಿ, ಖುಷಿ ಹಂಚಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಗೌರಿ ನಾಯ್ಕ, ನನ್ನ ಅವಿರತ ಶ್ರಮಕ್ಕೆ ಫಲ ಸಿಕ್ಕಿದೆ. ಬಾವಿಯಲ್ಲಿ ನೀರು ಬಂದಿದ್ದನ್ನು ಕಂಡು ಖುಷಿಯಾಗಿದೆ. ಇದನ್ನು ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದ ಬಳಿಕ ಮಕ್ಕಳಿಗೆ ಅರ್ಪಿಸಿದೆ ಎಂದರು.

ಇದನ್ನೂ ಓದಿ: ಸುಖಾಂತ್ಯ ಕಂಡ ಶಿರಸಿಯ ಒಂದು ಬಾವಿಯ ಕಥೆ; ಬಾವಿ ತೋಡಲು ಆರಂಭಿಸಿದ ಗೌರಿ ನಾಯ್ಕ

Last Updated : Mar 6, 2024, 9:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.