ETV Bharat / state

ವಕ್ಫ್ ಆಸ್ತಿ ಪ್ರಕರಣ: ಉಪ್ಪಿನ ಬೆಟಗೇರಿ ಗ್ರಾಮದ ರೈತರು ನಿರಾಳ - WAQF PROPERTY CASE

ಸದ್ಯದ ವಕ್ಫ್ ಆಸ್ತಿ ವಿಚಾರ ಸಾಕಷ್ಟು ಸದ್ದು ಮಾಡುವುದಕ್ಕೂ ಹಿಂದೆಯೇ ​ಉಪ್ಪಿನ ಬೆಟಗೇರಿಯ ಆರು ರೈತರ ಜಮೀನಿನ ಪಹಣಿಯಲ್ಲಿ 'ವಕ್ಫ್​ ಆಸ್ತಿ' ಎಂದು ನಮೂದಾಗಿದ್ದು ಬೆಳಕಿಗೆ ಬಂದಿತ್ತು.

Farmers of Uppin Betageri village
ಉಪ್ಪಿನ ಬೆಟಗೇರಿ ಗ್ರಾಮದ ರೈತರು (ETV Bharat)
author img

By ETV Bharat Karnataka Team

Published : Nov 6, 2024, 9:28 AM IST

ಧಾರವಾಡ: ಪಹಣಿಯಲ್ಲಿ ವಕ್ಫ್ ನಮೂದು ವಿಚಾರ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಅಷ್ಟೇ ಅಲ್ಲದೇ ರೈತರು ಹೋರಾಟದ ಹಾದಿ ಹಿಡಿದಿದ್ದರು. ಇದೀಗ ರೈತರಿಗೆ ಎದುರಾಗಿದ್ದ ವಕ್ಫ್ ಆಸ್ತಿ ಆತಂಕ ಕೊನೆಗೂ ದೂರವಾಗಿದೆ. ತಹಶೀಲ್ದಾರ್​ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ರೈತರ ಜಮೀನಿನ ಮೇಲೆ ವಕ್ಫ್​ನ ಯಾವುದೇ ಅಧಿಕಾರ ಇಲ್ಲ ಎನ್ನುವುದು ಸಾಬೀತಾಗಿದ್ದು, ಈ ಸಂಬಂಧ ವಕ್ಫ್ ಮಂಡಳಿಯಿಂದ ಎನ್​ಒಸಿ ಸಹ ಪಡೆಯಲಾಗಿದೆ.

ಹೌದು, ಧಾರವಾಡ ತಾಲೂಕಿನ ಉಪ್ಪಿನ ಬೇಟಗೇರಿ ಗ್ರಾಮದ ಕೆಲ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವ ಬಗ್ಗೆ ವರದಿಯಾಗಿತ್ತು. ಉಪ್ಪಿನ ಬೆಟಗೇರಿಯ ಆರು ಮಂದಿ ರೈತರ ಜಮೀನು ಪಹಣಿಯಲ್ಲಿ ಈ ಹಿಂದೆಯೇ ವಕ್ಫ್​ ಆಸ್ತಿ ಎಂದು ನಮೂದಾಗಿದ್ದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ರೈತರು, ವಿವಿಧ ಸಂಘಟನೆಗಳು, ಪ್ರತಿಪಕ್ಷಗಳ ಮುಖಂಡರು ಇತ್ತೀಚಿಗೆ (ನ. 4) ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದರು.

ವಕ್ಫ್ ಆಸ್ತಿ ಪ್ರಕರಣ: ಉಪ್ಪಿನ ಬೆಟಗೇರಿ ಗ್ರಾಮದ ರೈತರು ನಿರಾಳ (ETV Bharat)

ಉಪ್ಪಿನ ಬೆಟಗೇರಿ ರೈತರ ನೋವಿಗೂ ದೊಡ್ಡ ಹೋರಾಟದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ತಹಶೀಲ್ದಾರ್​ ಸಭೆ ನಡೆಸಿದಾಗ ಇದರಲ್ಲಿ ವಕ್ಫ್​ ಅಧಿಕಾರಿಗಳ ತಪ್ಪಿರುವುದು ಸಾಬೀತಾಗಿದೆ. 1965ರಲ್ಲಿ ಜಮೀನು ಸರ್ವೇ ನಂಬರ್​ಗಳ ಅಪ್​ಡೇಟ್ ಆದಾಗ ಕೆಲವೊಂದು ಸರ್ವೇ ನಂಬರ್​ಗಳು ವಿಂಗಡಣೆಯಾಗಿ ಬ್ಲಾಕ್​ಗಳಾಗಿ ಪರಿವರ್ತನೆಗೊಂಡಿದ್ದವು. ಆದರೆ ಈ ಬ್ಲಾಕ್​ಗಳ ಬಗ್ಗೆ ವಕ್ಫ್​ ಮಂಡಳಿ ಯಾವುದೇ ದಾಖಲೆ ಅಪ್​ಡೇಟ್ ಮಾಡಿರಲಿಲ್ಲ. ಹಳೇ ಸರ್ವೇ ನಂಬರ್ ಆಧರಿಸಿ ಪಹಣಿಯಲ್ಲಿ ವಕ್ಫ್​ ಎಂದು ಸೇರಿಸಿತ್ತು ಎನ್ನುವುದು ಸಭೆಯಲ್ಲಿ ಸಾಬೀತಾಗಿದೆ.

ಇನ್ನು ಧಾರವಾಡ ತಾಲೂಕಿನಲ್ಲಿ ವಕ್ಫ್​ ಸಂಬಂಧಿಸಿದಂತೆ 22 ರೈತರ ಪಹಣಿಗಳಲ್ಲಿ ತಿದ್ದುಪಡಿಯಾಗಿದ್ದು, ಅದರಲ್ಲಿ ಆರು ಕೇಸ್ ಇತ್ಯರ್ಥ ಮಾಡಿದ್ದೇವೆ. ಈ ಸಂಬಂಧ ವಕ್ಫ್ ಅಧಿಕಾರಿಗಳಿಂದ ಎನ್​ಒಸಿ ಸಹ ಪಡೆದಿದ್ದು, ಇನ್ನೆರಡು ದಿನದಲ್ಲಿ ಅಧಿಕೃತ ಆದೇಶ ಸಹ ಹೊರಬೀಳಲಿದೆ ಎಂದು ಧಾರವಾಡ ತಹಶೀಲ್ದಾರ್​ ಡಾ. ಡಿ.ಹೆಚ್. ಹೂಗಾರ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂಗೆ ರೈತರ ಬಗ್ಗೆ ಕಾಳಜಿ ಇದ್ರೆ ವಕ್ಫ್​ ​ಗೆಜೆಟ್ ನೋಟಿಫಿಕೇಷನ್ ರದ್ದುಪಡಿಸಲಿ: ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.