ETV Bharat / state

ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಕಾಣೆಯಾದ 6 ಜನರಲ್ಲಿ ಮೂವರ ಶವ ಪತ್ತೆ - Vijayapura Raft Tragedy - VIJAYAPURA RAFT TRAGEDY

ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಕಾಣೆಯಾದವರ ಪೈಕಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ.

SIX PEOPLE DROWNED IN KRISHNA RIVER
ಶವವಾಗಿ ಪತ್ತೆಯಾದವರ ಫೋಟೋಗಳು (ETV Bharat)
author img

By ETV Bharat Karnataka Team

Published : Jul 3, 2024, 10:10 AM IST

Updated : Jul 3, 2024, 11:24 AM IST

ವಿಜಯಪುರ: ಜಿಲ್ಲೆಯ ಕೊಲ್ಹಾರ ಸಮೀಪ ಹರಿಯುವ ಕೃಷ್ಣಾ ನದಿಯಲ್ಲಿ ಮಂಗಳವಾರ ಸಂಜೆ ತೆಪ್ಪ ಮಗುಚಿ ನೀರು ಪಾಲಾದ 6 ಮಂದಿಗೆ ಇಂದು ಮತ್ತೆ ಶೋಧ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮುಂದಾಳತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೀನುಗಾರರು ಕೂಡಾ ಸಾಥ್ ನೀಡಿದ್ದಾರೆ.

ನೀರು ಪಾಲಾಗಿದ್ದ ಆರು ಜನರ ಪೈಕಿ ಇದೀಗ ಮೂವರ ಶವಗಳು ಪತ್ತೆಯಾಗಿವೆ. ನಿನ್ನೆ ಸಂಜೆಯೇ ಇಬ್ಬರ ಮೃತದೇಹ ಸಿಕ್ಕಿತ್ತು. ಇಂದು ಬೆಳಗ್ಗಿನ ಶೋಧ ಕಾರ್ಯದಲ್ಲಿ ಮತ್ತೊಬ್ಬನ ಶವ ದೊರೆತಿದೆ. ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ ಮತ್ತು ದಶರಥ ಗೌಡರ್ (54) ಎಂಬವರು ಶವವಾಗಿ ಪತ್ತೆಯಾಗಿದ್ದು, ಇನ್ನುಳಿದವರಿಗೆ ಶೋಧ ಮುಂದುವರೆದಿದೆ.

ಇಸ್ಪೀಟ್​ ಆಡುತ್ತಿರುವಾಗ ಪೊಲೀಸರು ದಾಳಿಯಿಂದ ತಪ್ಪಿಸಿಕೊಳ್ಳಲು ಎಂಟು ಮಂದಿ ತೆಪ್ಪ ಏರಿದ್ದರು. ಈ ಗುಂಪಿನಲ್ಲಿದ್ದ ಸಚಿನ್ ಮತ್ತು ಫಾರೂಕ್ ಎಂಬಿಬ್ಬರು ಈಜಿ ದಡ ಸೇರಿದ್ದರೆ, ಉಳಿದ ಆರು ಜನ ಕಾಣೆಯಾಗಿದ್ದರು. ಇದೀಗ ರಫೀಕ್, ಮೆಹಬೂಬ್​ ಸೇರಿ ಇತರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ರಕ್ಷಣೆಯಾದವರು:

  • ಸಚಿನ್ ಕಟಬರ
  • ಫಾರೂಕ್ ಅಹಮದ್

ಇವರ ಶವಗಳು ಪತ್ತೆ:

  • ಪುಂಡಲೀಕ ಯಂಕಂಚಿ
  • ತಯ್ಯಬ್​ ಚೌಧರಿ
  • ದಶರಥ ಗೌಡರ್ (54)

ಇವರು ಇನ್ನೂ ನಾಪತ್ತೆ:

  • ರಫೀಕ್ ಜಾಲಗಾರ
  • ಮಹಿಬೂಬ ವಾಲೀಕಾರ ಹಾಗೂ ಇತರರು

ಇದನ್ನೂ ಓದಿ: ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಜನರು ನೀರು ಪಾಲಾಗಿರುವ ಶಂಕೆ; ಇಬ್ಬರ ಮೃತ ದೇಹ ಪತ್ತೆ - Boat Tragedy

ನಡೆದಿದ್ದೇನು?: ಮಂಗಳವಾರ ಸಂಜೆ ಕೃಷ್ಣಾ ನದಿ ತಟದಲ್ಲಿ ಇಸ್ಪೀಟ್ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು. ಸ್ಥಳಕ್ಕೆ ಪೊಲೀಸರು ಬರುತ್ತಿರುವ ಸುದ್ದಿಯನ್ನು ಸ್ಥಳೀಯರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಯದಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ 8 ಮಂದಿ ನದಿ ನಡುಗಡ್ಡೆಯತ್ತ ತೆರಳಲು ಪ್ರಯತ್ನಿಸಿದರು. ಈ ವೇಳೆ ತೆಪ್ಪ ಪಲ್ಟಿಯಾಗಿದೆ. ಇಬ್ಬರು ಈಜಿ ದಡ ಸೇರಿದರೆ ಇನ್ನುಳಿದವರು ಕಾಣೆಯಾಗಿದ್ದರು.

"ಘಟನೆಯಲ್ಲಿ ಕಾಣೆಯಾದವರಿಗೆ ಶೋಧ ನಡೆಸಲಾಗುತ್ತಿದೆ. ಎಲ್ಲರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ" ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು.

ಇದನ್ನೂ ಓದಿ: ಸಿಲಿಂಡರ್ ಸ್ಫೋಟ: ಐವರಿಗೆ ಗಂಭೀರ ಗಾಯ, ನಾಲ್ವರ ಸ್ಥಿತಿ ಚಿಂತಾಜನಕ - Cylinder blast

Last Updated : Jul 3, 2024, 11:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.