ETV Bharat / state

ಶಿಕ್ಷಣ ಪಡೆದ ಕುವೆಂಪು ವಿವಿಯಲ್ಲೇ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದ ವಿಜಯ್ ಕುಮಾರ್

author img

By ETV Bharat Karnataka Team

Published : Feb 5, 2024, 10:22 PM IST

ವಿಜಯ್ ಕುಮಾರ್ ಹೆಚ್.ಬಿ. ಅವರು ತಾವು ಓದಿದ ವಿವಿಯಲ್ಲಿ ಕುಲ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಕುಲ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಿಜಯ್ ಕುಮಾರ್

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ಸರ್ಕಾರದಿಂದ ನೇಮಕಗೊಂಡಿದ್ದ ವಿಜಯ್‌ಕುಮಾರ್ ಹೆಚ್.ಬಿ. ಇಂದು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2014ರ ಕೆಎಎಸ್‌ ಬ್ಯಾಚ್‌ನ ಅಧಿಕಾರಿಯಾಗಿದ್ದು, ಕುವೆಂಪು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯೂ ಹೌದು.

ಮೂಲತಃ ಚನ್ನಗಿರಿ ತಾಲೂಕಿನವರಾದ ವಿಜಯ್‌ಕುಮಾರ್ 2018ರ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿವಿಯ ಕುಲಪತಿ ಪ್ರೊ.ಎಸ್.ವೆಂಕಟೇಶ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಎಸ್.ಗೋಪಿನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಸತ್ಯಪ್ರಕಾಶ್ ಎಂ.ಆರ್. ಸೇರಿದಂತೆ ವಿವಿಧ ಆಡಳಿತಾಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: ಕುವೆಂಪು ವಿಶ್ವವಿದ್ಯಾಲಯ : ಪದವಿ ಪರೀಕ್ಷೆ ನಡೆದು, 2 ದಿನಗಳಲ್ಲೇ ಫಲಿತಾಂಶ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.