ETV Bharat / state

ಮೈಸೂರು: ಹಿಂದೂ-ಮುಸ್ಲಿಂ‌ ದಂಪತಿ ಮನೆಯಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ಪೂಜೆ - Varamahalakshmi Festival

author img

By ETV Bharat Karnataka Team

Published : Aug 17, 2024, 10:37 AM IST

ಮೈಸೂರಿನಲ್ಲಿ ವರಮಹಾಲಕ್ಷ್ಮೀ ಪೂಜೆ ಅತ್ಯಂತ ಸಡಗರದಿಂದ ನಡೆಯಿತು. ಈ ವೇಳೆ ಹಿಂದೂ - ಮುಸ್ಲಿಂ ದಂಪತಿ ತಮ್ಮ ಮನೆಯಲ್ಲಿ ಅತ್ಯಂತ ಸಂಭ್ರಮದಿಂದ ದೇವಿಯ ಪೂಜೆ ಮಾಡಿದರು.

HINDU MUSLIM COUPLE  VARALAKSHMI FESTIVAL CELEBRATION  MYSURU
ಹಿಂದೂ-ಮುಸ್ಲಿಂ‌ ದಂಪತಿ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಸಂಭ್ರಮ (ETV Bharat)

ಮೈಸೂರು: ಹಿಂದೂ - ಮುಸ್ಲಿಂ ನಡುವೆ ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಡಿ.ದೇವರಾಜ ಅರಸ್ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ರಾಜ್ಯಾಧ್ಯಕ್ಷ ಜಾಕೀರ್ ಹುಸೇನ್ ಮನೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಮೈಸೂರಿನ ಕೋಟೆ ಹುಂಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಜಾಕೀರ್ ಹುಸೇನ್ ಮತ್ತು ಮಮತಾ ದಂಪತಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವ ಮೂಲಕ ಹಿಂದೂ - ಮುಸ್ಲಿಂ ನಡುವೆ ಏಕತೆ ಹಾಗೂ ಸೌಹಾರ್ದತೆ ಸಾರಿದ್ದಾರೆ.

Hindu Muslim couple  Varalakshmi festival celebration  Mysuru
ವರಮಹಾಲಕ್ಷ್ಮೀ ಪೂಜೆ (ETV Bharat)

ಕಳೆದ ಏಳು ವರ್ಷಗಳಿಂದ ದಂಪತಿಯು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಎಲ್ಲ ಹಬ್ಬಗಳನ್ನು ಸಂಪ್ರದಾಯದಂತೆ ಆಚರಿಸುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ಮಾಡಿ, ಪ್ರಸಾದ ಸಿದ್ಧಪಡಿಸಿ, ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಈ ದಂಪತಿಗೆ ಹಲವಾರು ಸಮುದಾಯದವರು ಹರಸುವ ಮೂಲಕ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ದಾಂಪತ್ಯ ಜೀವನವು ಭಾವೈಕ್ಯತೆಗೆ ಸಾಕ್ಷಿ ಪ್ರಜ್ಞೆಯಾಗಿದ್ದು, ಸರ್ವ ಧರ್ಮದವರೂ ಸರ್ವವರನ್ನು ಗೌರವಿಸಬೇಕು ಎಂಬ ಸಂದೇಶ ನೀಡುತ್ತಿದ್ದಾರೆ.

ಓದಿ: ಬೆಂಗಳೂರಿನಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ; ಬನಶಂಕರಿ ದೇವಿಗೆ ನೋಟಿನ ಅಲಂಕಾರ - Varamahalakshmi Festival

ETV Bharat Logo

Copyright © 2024 Ushodaya Enterprises Pvt. Ltd., All Rights Reserved.