ETV Bharat / state

ಬೆಂಗಳೂರಿನಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ; ಬನಶಂಕರಿ ದೇವಿಗೆ ನೋಟಿನ ಅಲಂಕಾರ - Varamahalakshmi Festival

author img

By ETV Bharat Karnataka Team

Published : Aug 16, 2024, 9:31 PM IST

ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

varamahalakshmi-festival
ಬೆಂಗಳೂರಿನಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ (ETV Bharat)

ಬೆಂಗಳೂರು: ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಂಡುಬಂತು. ಅಷ್ಟಲಕ್ಷ್ಮಿ ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆ ಬಂದಿದ್ದರು. ಪ್ರಮುಖವಾಗಿ, ಮಹಿಳೆಯರಿಗೆ ಇದು ಹೆಚ್ಚು ಮಹತ್ವದ ಹಬ್ಬವಾಗಿದೆ.

ಬೆಂಗಳೂರಿನ ಬನಶಂಕರಿ ದೇವಿಗೆ ಗರಿ ಗರಿ ನೋಟುಗಳು, ವಿವಿಧ ಬಗೆಯ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು. ಅಷ್ಟಲಕ್ಷ್ಮಿಯರ ಮೂರ್ತಿಗಳಿಗೆ ಅಭಿಷೇಕ ನಡೆಯಿತು. ಮಹಿಳೆಯರು ದೀಪ ಬೆಳಗಿ ಭಕ್ತಿ ಮೆರೆದರು.

ನಗರದ ಇತರೆ ಲಕ್ಷ್ಮೀ ದೇವಾಲಯಗಳಲ್ಲೂ ಮಹಾಲಕ್ಷ್ಮಿ ವ್ರತಾಚರಣೆಯ ಜೊತೆಗೆ, ಅಭಿಷೇಕ, ವಿಶೇಷ ಪೂಜಾಧಿಗಳು ನಡೆದವು. ಶೇಷಾದ್ರಿಪುರಂ ಮಹಾಲಕ್ಷ್ಮಿ ದೇವಾಲಯ ಆಕರ್ಷಕ ಅಲಂಕಾರದಿಂದ ರಾರಾಜಿಸುತ್ತಿತ್ತು. ಚೆಂಡು ಹೂ, ಸೇವಂತಿಗೆ, ತೋಮಾಳ ಹಾಗು ಆಕರ್ಷಕ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು.

ಜೆಡಿಎಸ್ ಎಂಎಲ್‌ಸಿ ಶರವಣ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಿಂದ ಆಚರಿಸಲಾಯಿತು. ಮಹಾಲಕ್ಷ್ಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳ್ಳಿ, ಚಿನ್ನದ ವಸ್ತುಗಳನ್ನು ದೇವಿಯ ಮುಂದಿಟ್ಟು ಪೂಜೆ ಸಲ್ಲಿಸಲಾಯಿತು. ಸ್ಯಾಂಡಲ್​ವುಡ್ ಹಿರಿಯ ನಟಿ ಪ್ರೇಮ ಕೂಡ ಭಾಗಿಯಾಗಿದ್ದರು.

ಬನಶಂಕರಿ ದೇವಿಗೆ ನೋಟಿನ ಅಲಂಕಾರ: ಬನಶಂಕರಿ ದೇವಿಗೆ ಒಂದು ಲಕ್ಷ ರೂಪಾಯಿ ಹಣದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. 10, 20 ಮತ್ತು 50 ರೂಪಾಯಿ ನೋಟು ಬಳಸಿಕೊಂಡು ಮಾಡಿರುವ ಅಲಂಕಾರ ಭಕ್ತರ ಗಮನ ಸೆಳೆಯಿತು. ಕಲರ್‌ಫುಲ್ ಲೈಟಿಂಗ್ಸ್ ಮೂಲಕ ಇಡೀ ದೇವಸ್ಥಾನ ಸಿಂಗಾರಗೊಂಡಿತ್ತು.

ಕೆ.ಆರ್.ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ: ಬೆಳಗ್ಗೆ ಕೆ.ಆರ್.ಮಾರ್ಕೆಟ್​ನಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರಾಹಕರ ಖರೀದಿ ಭರದಿಂದ ಸಾಗಿತ್ತು. ಹೂವು, ಹಣ್ಣು ಸೇರಿದಂತೆ ದೇವಿಯ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ಮಹಿಳೆಯರು ಸೇರಿದ್ದರು.

ಸಂಜೆ ಮನೆಗಳಲ್ಲಿ ಲಕ್ಷ್ಮಿ ಪೂಜೆ: ಇನ್ನು, ಸಂಜೆಯ ವೇಳೆ ಮಹಿಳೆಯರು ತಮ್ಮ‌ ಮನೆಗಳಲ್ಲಿ ಕೂರಿಸಿದ ಲಕ್ಷ್ಮಿಗೆ ಪೂಜೆ ಸಲ್ಲಿಸಿದರು. ಇದರೊಂದಿಗೆ ಈ ವರ್ಷದ ವರಮಹಾಲಕ್ಷ್ಮಿ ಹಬ್ಬ ಸಂಪನ್ನಗೊಂಡಿತು.

ಇದನ್ನೂ ಓದಿ: ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲದಲ್ಲಿ ಹಬ್ಬದ ಸಂಭ್ರಮ: ಹರಿದುಬಂದ ಭಕ್ತಸಾಗರ - Goravanahalli Mahalakshmi Devi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.