ETV Bharat / state

ಕುರ್ಚಿ ಕಿತ್ತಾಟದಲ್ಲಿ ಡೆಂಗ್ಯೂ ನಿಯಂತ್ರಣ ಕಡೆಗಣನೆ: ಸಚಿವೆ ಶೋಭಾ ಕರಂದ್ಲಾಜೆ - Shobha Karandlaje

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಡೆಂಗ್ಯೂ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆರೋಗ್ಯ ಇಲಾಖೆ, ಸಿಎಂ, ಡಿಸಿಎಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.

author img

By ETV Bharat Karnataka Team

Published : Jul 7, 2024, 4:37 PM IST

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ETV Bharat)

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳವಾಗಿದ್ದು, ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆರೋಗ್ಯ ಇಲಾಖೆ, ಸಿಎಂ, ಡಿಸಿಎಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುರ್ಚಿ ಕಿತ್ತಾಟದಲ್ಲಿ ಡೆಂಗ್ಯೂ ನಿಯಂತ್ರಣವನ್ನು ಕಡೆಗಣಿಸಿದ್ದಾರೆ. ಇವರ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಶೇಷಾದ್ರಿಪುರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಡೆಂಗ್ಯೂ ಹೆಚ್ಚಾಗಿದೆ. ಝೀಕಾ ವೈರಸ್ ಸಹ ಬಂದಿದೆ ಎನ್ನಲಾಗುತ್ತಿದೆ. ಸರ್ಕಾರದ ವ್ಯವಸ್ಥೆ ಹದಗೆಟ್ಟಿದೆ, ಆಸ್ಪತ್ರೆಗಳಿಗೆ ಜನ ದೊಡ್ಡ ಪ್ರಮಾಣದಲ್ಲಿ ದಾಖಲಾಗುತ್ತಿದ್ದಾರೆ. ಸರಿಯಾದ ಔಷಧ ಸಿಗುತ್ತಿಲ್ಲ, ಔಷಧಗಳ ಬಿಲ್ ಜಾಸ್ತಿ ಮಾಡಿದ್ದಾರೆ. ಇದಕ್ಕೆ ಯಾವುದೇ ಕಾನೂನು ಇಲ್ಲ. ಡೆಂಗ್ಯೂ ಪರೀಕ್ಷೆಗೆ ಇಂತಿಷ್ಟು ಹಣ ತಗೋಬೇಕು ಅಂತ ನಿಯಮವಿದ್ದರೂ ಯಾರೂ ಪಾಲಿಸುತ್ತಿಲ್ಲ ಎಂದು ದೂರಿದರು.

ಡೆಂಗ್ಯೂ ಕಾರಣಕ್ಕೆ ಚಿಕ್ಕ ಹುಡುಗ ಮೃತಪಟ್ಟಿದ್ದಾನೆ. ಆರೋಗ್ಯ ಇಲಾಖೆ ನಿದ್ರೆಗೆ ಜಾರಿದೆ. ಸರ್ಕಾರದಲ್ಲೂ ಯಾವುದೇ ಕೆಲಸ ಆಗುತ್ತಿಲ್ಲ. ಕಾಮಗಾರಿಗಳೂ ಅರ್ಧಕ್ಕೆ ನಿಂತಿದೆ. ಹೀಗಾಗಿ ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಜಲಮಂಡಳಿ ಸರಿಯಾದ ಕೆಲಸ ಮಾಡುತ್ತಿಲ್ಲ. ತುಂಬಾ ಕಡೆ ನೀರು ಸೋರಿಕೆಯಾಗಿ ಸೊಳ್ಳೆಗಳು ಉತ್ಪತ್ತಿಗೆ ದಾರಿ ಸುಗಮವಾಗಿದೆ. ಇದ್ಯಾವುದನ್ನೂ ಗಮನಿಸುವ ಕೆಲಸ ಆಗುತ್ತಿಲ್ಲ ಎಂದು ಟೀಕಿಸಿದರು.

ಕರ್ನಾಟಕ ಮೆಮೊರಿ ಚಾಂಪಿಯನ್‍ಶಿಪ್ ಕಾರ್ಯಕ್ರಮ
ಕರ್ನಾಟಕ ಮೆಮೊರಿ ಚಾಂಪಿಯನ್‍ಶಿಪ್ ಕಾರ್ಯಕ್ರಮ (ETV Bharat)

ಸಿಎಂ, ಡಿಸಿಎಂ ಪರಿಶೀಲನೆಗೆ ಹೋಗುತ್ತಿಲ್ಲ. ಡೆಂಗ್ಯೂ ತಡೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಇದೊಂದು ಮಲಗಿರುವ ಸರ್ಕಾರ. ಸರ್ಕಾರಕ್ಕೆ ಹೇಳೋದಂದ್ರೆ ಬಂಡೆಗಲ್ಲು ಮೇಲೆ ನೀರು ಸುರಿದಂತೆ. ಯಾರು ಸಿಎಂ ಆಗಬೇಕು, ಡಿಸಿಎಂ ಆಗಬೇಕು ಅನ್ನೋ ಪೈಪೋಟಿ ನಡೀತಿದೆ. ಪೈಪೋಟಿ, ಒಳಜಗಳದ ಕಾರಣ ಸರ್ಕಾರ ಜನಸಾಮಾನ್ಯರನ್ನು ಮರೆತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ರೇಪ್, ಹಲ್ಲೆಗಳು ಹಾಡಹಗಲೇ ನಡೆಯುತ್ತಿವೆ. ಇನ್ನಷ್ಟು ಜನ ಸಾಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಆಗ್ರಹಿಸಿದರು.

ಜು.23ರಂದು ಕೇಂದ್ರ ಬಜೆಟ್ ಮಂಡನೆ ಇದೆ. ಸಣ್ಣ, ಲಘು, ಸೂಕ್ಷ್ಮ ಉದ್ದಿಮೆಗಳನ್ನು ಬೆಳೆಸುವ ಉದ್ದೇಶ ಇದೆ. 20 ಕೋಟಿ ಜನಕ್ಕೆ ಈ ಉದ್ದಿಮೆ ಕೆಲಸ ಕೊಡುತ್ತಿದೆ. ಇದನ್ನು ಬೆಳೆಸಬೇಕು, ಉಳಿಸಬೇಕು. ಆಹಾರ ಸಂಸ್ಕರಣೆ, ಖಾದಿ ವಲಯದಲ್ಲಿ ಸಿಗುವ ಮೂಲವಸ್ತುಗಳನ್ನು ಬೆಳೆಸಿ ವಿದೇಶಗಳ ಮಾರುಕಟ್ಟೆಗೆ ತಲುಪಿಸುವ ಕೆಲಸ ಆಗಬೇಕು. ಇದರಲ್ಲಿ ಯುವಕರನ್ನು ತೊಡಗಿಸುವಂಥ ಪ್ರಯತ್ನ ಆಗುತ್ತಿದೆ. ನನ್ನ ಇಲಾಖೆಯಿಂದ ಹಲವು ಪ್ರಸ್ತಾವನೆಗಳು ಇವೆ ರಾಜ್ಯದ ಅಭಿವೃದ್ಧಿಗೆ ಉತ್ತಮವಾದ ಅವಕಾಶಗಳು ಸಿಗುವ ನಿರೀಕ್ಷೆ ಇದೆ ಎಂದರು.

ಮೆಮೊರಿ ಚಾಂಪಿಯನ್‍ಶಿಪ್ ಕಾರ್ಯಕ್ರಮ: ಮತ್ತೊಂದೆಡೆ, ಶೇದ್ರಿಪುರದ ಗೋಲ್ಡನ್ ಮೆಟ್ರೋ ಹೋಟೆಲ್​ನಲ್ಲಿ ಕರ್ನಾಟಕ ಮೆಮೊರಿ ಚಾಂಪಿಯನ್‍ಶಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಇಂದಿನ ಸ್ಪರ್ಧಾ ಯುಗದಲ್ಲಿ ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸುವ ಇಂಥ ತರಬೇತಿಗಳ ಅಗತ್ಯ ಹೆಚ್ಚಾಗಿದೆ. ಸ್ಮರಣ ಶಕ್ತಿ ಹೆಚ್ಚಳಕ್ಕೆ ಆದ್ಯತೆ ಅನಿವಾರ್ಯ. ಇಲ್ಲಿನ ಮಕ್ಕಳು ಮುಂದೆ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸುವಂತಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳ: ಮುನ್ನೆಚ್ಚರಿಕೆ ಕ್ರಮಕ್ಕೆ ಗ್ರಾ.ಪಂ.ಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ - Dengue

ETV Bharat Logo

Copyright © 2024 Ushodaya Enterprises Pvt. Ltd., All Rights Reserved.