ETV Bharat / state

ಭದ್ರಾವತಿಯ VISL ಕಾರ್ಖಾನೆ ಪುನಶ್ಚೇತನದ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ - H D Kumaraswamy

ಕೇಂದ್ರದ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರಿಂದು ಭದ್ರಾವತಿಯ ಕಾರ್ಖಾನೆಗೆ ಭೇಟಿ ನೀಡಿ, ವಸ್ತು ಸ್ಥಿತಿಯನ್ನು ಅವಲೋಕಿಸಿದರು.

Union Minister H D Kumaraswamy
ಕಾರ್ಖಾನೆಯ ವಸ್ತು ಸ್ಥಿತಿ ಅವಲೋಕಿಸಿದ ಹೆಚ್​ ಡಿ ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : Jun 30, 2024, 8:21 PM IST

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (ETV Bharat)

ಶಿವಮೊಗ್ಗ : ಮೈಸೂರು ಮಹಾರಾಜರಿಂದ, ವಿಶ್ವೇಶ್ವರಯ್ಯನವರ ಪ್ಲಾನ್​ನಿಂದ ಪ್ರಾರಂಭವಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಖಾತೆ ಸಚಿವ ಹೆಚ್. ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Union Minister H D Kumaraswamy
ಸರ್ ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಗೆ ಪೂಜೆ ಸಲ್ಲಿಸಿದ ಹೆಚ್​ ಡಿ ಕುಮಾರಸ್ವಾಮಿ (ETV Bharat)

ಭಾನುವಾರ ಭದ್ರಾವತಿಯ ಕಾರ್ಖಾನೆಗೆ ಅವರು ಭೇಟಿ ನೀಡಿದ್ದರು. ಕಾರ್ಖಾನೆಯ ಒಳ ಭಾಗದಲ್ಲಿ ಇರುವ ಸರ್ ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಗೆ ಪೂಜೆ ಸಲ್ಲಿಸಿ, ಹಾರ ಹಾಕಿ, ನಂತರ ಕಾರ್ಖಾನೆಯ ವಸ್ತು ಸ್ಥಿತಿಯನ್ನು ಅವಲೋಕಿಸಿದರು. ನಂತರ ಸೈಲ್​ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಭದ್ರಾವತಿಯ VISL ಕಾರ್ಖಾನೆಯನ್ನು ಉಳಿಸಬೇಕೆಂಬುದು ಎಲ್ಲರ ಭಾವನೆ. ಹೀಗಾಗಿ ಕಾರ್ಖಾನೆಯ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕೆಂದೇ ನಾನು ಮತ್ತು ಸೈಲ್​ನ ಅಧ್ಯಕ್ಷರಾದ ಅಮರೇಂದ್ರ ಪ್ರಕಾಶ್ ಅವರಿಂದ ಮಾಹಿತಿ ಪಡೆದಿದ್ದೇವೆ. ಕಾರ್ಖಾನೆಯ ಆಡಳಿತ ವರ್ಗ ಹಾಗೂ ಕಾರ್ಮಿಕರು ಅವರ ಅನುಭವದ ಮಾಹಿತಿಯನ್ನು ಕೊಟ್ಟಿದ್ದಾರೆ. ಯಾವ ರೀತಿ ಕಾರ್ಖಾನೆಯನ್ನು ಮುಂದಿನ ದಿನಗಳಲ್ಲಿ ಪುನಶ್ಚೇತನಗೊಳಿಸಬಹುದು ಎಂಬ ಮಾಹಿತಿಯನ್ನು ಪಡೆದಿದ್ದೇನೆ ಎಂದರು.

Union Minister H D Kumaraswamy
ಕಾರ್ಖಾನೆಯ ವಸ್ತು ಸ್ಥಿತಿ ಅವಲೋಕಿಸಿದ ಹೆಚ್​ ಡಿ ಕುಮಾರಸ್ವಾಮಿ (ETV Bharat)

ಈಗ ಕೇಂದ್ರದಲ್ಲಿ‌ ಲೋಕಸಭೆಯ ಕಲಾಪಗಳು ನಡೆಯುತ್ತಿವೆ. ಇದರಿಂದ ಕೆಲವು ನಿರ್ಧಾರಗಳನ್ನು ನಾವು ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಿಲ್ಲ. ರಾಜ್ಯಸಭಾ ಸದಸ್ಯರಾದ ಜಯರಾಂ ರಮೇಶ್ ಅವರು ನಾನು ಅಧಿಕಾರ ವಹಿಸಿಕೊಂಡಾಗ ನನ್ನ ಮುಂದೆ ಐದು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆ ಹಿನ್ನೆಲೆ ನಾನು ಮಾಹಿತಿ ಪಡೆಯಲು ಭದ್ರಾವತಿಗೆ ಬಂದಿದ್ದೇನೆ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕಾರ್ಖಾನೆಯ ವಿಷಯದಲ್ಲಿ ಏನು ತೀರ್ಮಾನ ಆಗಬಹುದು, ಎಲ್ಲಾ ರೀತಿಯ ಸಾಧಕ- ಬಾಧಕಗಳು, ಕಾರ್ಮಿಕರ ಬದುಕು ಏನಿದೆ, ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಇರುವ ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಏನ್ ಮಾಡಬಹುದು ಎಂಬುದರ ಬಗ್ಗೆ ಸದ್ಯದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಿದ್ದೇನೆ ಎಂದು ತಿಳಿಸಿದರು.

ಕಾರ್ಖಾನೆಯ ವಿಷಯವನ್ನು ಬಜೆಟ್​ನಲ್ಲಿ ತರುವ ಅವಶ್ಯಕತೆ ಇಲ್ಲ. ಕಾರ್ಖಾನೆಯನ್ನು 1998 ರಲ್ಲಿ ಸೈಲ್​ಗೆ ಸೇರಿಸಲಾಗಿದೆ. ಪ್ರಧಾನ ಮಂತ್ರಿಗಳು ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾದಲ್ಲಿ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. 2030ಕ್ಕೆ ನಮ್ಮ ದೇಶದಲ್ಲಿ 300 ಮಿಲಿಯನ್ ಟನ್ ಕಬ್ಬಿಣವನ್ನು ಉತ್ಪಾದನೆ ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ. ಈ ಗುರಿಯನ್ನು ತಲುಪಲು ಏನ್ ಕಾರ್ಯಕ್ರಮ ಮಾಡಬಹುದು ಎಂಬುದನ್ನು ಚಿಂತಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಖಾಯಂ ಕಾರ್ಮಿಕರು ನಷ್ಟದಲ್ಲಿರುವ ಕಾರ್ಖಾನೆ ಎಂಬ ಹಣೆಪಟ್ಟಿಯಿಂದ ಹೊರತನ್ನಿ ಎಂಬ ಬೇಡಿಕೆಯನ್ನಿಟ್ಟಿದ್ದಾರೆ. ಗುತ್ತಿಗೆ ಕಾರ್ಮಿಕರು ಕಾರ್ಖಾನೆಯನ್ನು ಉಳಿಸಿ ತಮಗೆ 20-26 ದಿನಗಳ ಕೆಲಸ ಸಿಗಬೇಕೆಂಬ ಬೇಡಿಕೆ ಇದೆ. ಹಾಲಿ ಲೋಕಸಭೆ ಅಧಿವೇಶನ ನಡೆಯುತ್ತಿರುವುದರಿಂದ ಕಾರ್ಖಾನೆ ಕುರಿತು ಯಾವುದೇ ಘೋಷಣೆಯನ್ನು ನಾನು ಇಲ್ಲಿ ಮಾಡಲು ಆಗುವುದಿಲ್ಲ, ಇದಕ್ಕೆ ಅನೇಕ ತೊಡಕುಗಳಿವೆ. ಕಾರ್ಖಾನೆಯ ಎಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಯಾವ ರೀತಿಯಲ್ಲಿ ಉಳಿಸಬೇಕೆಂಬುದನ್ನು ಚಿಂತನೆ ಮಾಡುತ್ತೇನೆ ಎಂದಿದ್ದಾರೆ.

ಭದ್ರಾವತಿಯಲ್ಲಿ ಪ್ರತಿಯೊಬ್ಬರದು ಒಂದೊಂದು ಬೇಡಿಕೆ ಇದೆ. ಇದರಿಂದ ಕಾರ್ಖಾನೆಯ ಆಸ್ತಿಯನ್ನು ಉಳಿಸಿಕೊಳ್ಳಬೇಕೆಂದು, ಕಾರ್ಮಿಕರ ಮುಂದಿನ ಜೀವನದ ಕುರಿತು ಸಹ ಒಂದು ತೀರ್ಮಾನ ಮಾಡುತ್ತಿದ್ದೇವೆ ಎಂದರು. ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ರಮಣದುರ್ಗ ಗಣಿಗಾರಿಕೆ ಕುರಿತು ಮೊದಲ ಒಂದು ಪ್ರಯತ್ನ ಈಗ ಪ್ರಾರಂಭವಾಗಿದೆ. ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ನಿಮಗೆ ಸಿಗಲಿದೆ ಎಂದು ಹೇಳಿದ್ದಾರೆ.

ಸಿಎಂ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಸ್ಥಾನದ ಕುರಿತು, ಇದು ಕಾಂಗ್ರೆಸ್ ಪಕ್ಷದ ವಿಷಯ. ಅದು ಅವರೇ ಬಗೆಹರಿಸಿಕೊಳ್ಳಬೇಕು ಎಂದರು. ಚಲುವರಾಯಸ್ವಾಮಿ ಅವರು ಮಂಡ್ಯದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕುಮಾರಸ್ವಾಮಿ ಸಹಕರಿಸಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಬೇಡಿಕೆ ಏನಿದೆ ಎಂಬುದನ್ನು ಅವರು ನೀಡಲಿ, ಪರಿಶೀಲನೆ ಮಾಡಲಾಗುವುದು ಎಂದರು.

ಎಮ್ಮೆಹಟ್ಟಿ ಗ್ರಾಮಕ್ಕೆ; ಮೃತರ ಕುಟುಂಬಗಳಿಗೆ ಸಾಂತ್ವನ: ಮೂರು ದಿನದ ಹಿಂದೆ ಎಮ್ಮೆಹಟ್ಟಿ ಗ್ರಾಮಸ್ಥರು ಪ್ರವಾಸಕ್ಕೆ ಹೋಗಿ ವಾಪಸ್ ಆಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದ ಕುಮಾರಸ್ವಾಮಿ ಅವರು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ‌ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಆ ಕುಟುಂಬದವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದ್ದೇನೆ. ಆ ಕುಟುಂಬಗಳಿಗೆ ಸಹಾಯ ಮಾಡುವ ಕುರಿತು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ : ಭದ್ರಾವತಿಯ VISL ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಭೇಟಿ - H D Kumaraswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.