ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿ ಗ್ರಾಮದ ಉಡುಸಲಮ್ಮ ದೇವಸ್ಥಾನದಲ್ಲಿ ಇತ್ತೀಚಿಗೆ ನಡೆದ ಕಳವು ಪ್ರಕರಣ ಭೇದಿಸಿರುವ ಪೊಲೀಸರು, ₹1,95,839 ಮೌಲ್ಯದ ಆಭರಣ ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಡಗಲಿ ತಾಲೂಕು ಕೆಂಚಮ್ಮನಹಳ್ಳಿ ಗ್ರಾಮದ ವೀರೇಶಿ ಹಾಗೂ ಕೂಡ್ಲಿಗಿ ತಾಲೂಕಿನ ಪಾಲಾಯನ ಕೋಟೆ ಗ್ರಾಮದ ಹೆಚ್.ಹನುಮಂತ ಬಂಧಿತರು.
ಕಳುವಾಗಿದ್ದ ₹1,46,786 ಮೌಲ್ಯದ ಬೆಳ್ಳಿಯ ದೇವರ ಮೂರ್ತಿ, ಆಭರಣ ಮತ್ತು ದೇವತೆಯ ಕೊರಳಿಗೆ ಹಾಕಿದ್ದ ₹12,900 ಮೌಲ್ಯದ ಕರಿಮಣಿ ಸರದ ಬಂಗಾರದ ತಾಳಿ, ₹26,153 ಮೌಲ್ಯದ ಕಂಚಿನ ಆಭರಣಗಳು, ₹10,000 ಮೌಲ್ಯದ ಆಂಪ್ಲಿಫಯರ್ ಪೊಲೀಸರು ಜಪ್ತಿ ಮಾಡಿರುವ ವಸ್ತುಗಳಾಗಿವೆ.
ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಎಸ್‌ಪಿ ಹರಿಬಾಬು ಶ್ಲಾಘಿಸಿದ್ದಾರೆ.
ನವೆಂಬರ್ 24ರಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಗಂಗೊಳ್ಳಿ ದೇವಸ್ಥಾನದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು: ಆರೋಪಿ ಅರ್ಚಕ ಬಂಧನ - Temple Gold Theft