ವಿಜಯನಗರ: ವಿಜಯದಶಮಿ ನಿಮಿತ್ತ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಬೆಲ್ಲದ ಬಂಡಿ ಉತ್ಸವದ ವೇಳೆ ಆಯೋಜಿಸಲಾದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಬೆಲ್ಲದ ಬಂಡಿ ಉತ್ಸವದಲ್ಲಿ ಎತ್ತಿನ ಬಂಡಿನ ಓಡಿಸುವ ಸ್ಪರ್ಧೆಯೇ ಪ್ರಮುಖ ಆಕರ್ಷಣೆ. ರಭಸದಿಂದ ಓಡುವ ಎತ್ತಿನ ಬಂಡಿಯೊಂದಿಗೆ ಊರಿನ ಜನರೂ ಓಡುವುದು ಸಾಮಾನ್ಯ. ಇದೇ ರೀತಿ ನಿನ್ನೆ ಬಂಡಿಯಿಂದ ಕೆಳಕ್ಕೆ ಬಿದ್ದು ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದೇ ಸ್ಪರ್ಧೆಯಲ್ಲಿ ಇನ್ನೊಬ್ಬ ಯುವಕ ಕೂಡಾ ಬಿದ್ದಿದ್ದು ಹೆಚ್ಚಿನ ಪ್ರಮಾಣದ ಗಾಯಗಳಾಗಿವೆ. ಬಂಡಿಯ ಎದುರಿನಿಂದ ಓಡುತ್ತಿದ್ದಾಗ ಹಿಂದಿನಿಂದ ಎತ್ತಿನ ಬಂಡಿಯಲ್ಲಿದ್ದ ಕಂಬ ಗುದ್ದಿದೆ. ಪರಿಣಾಮ ಹಾರಿ ಬಿದ್ದಿದ್ದು, ಆತನ ಮೈಮೇಲೆಯೇ ಎತ್ತು ಹಾರಿ ಹೋಗಿದೆ. ಗಾಯಾಳು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ: ಆಕರ್ಷಕ ಪಂಜಿನ ಕವಾಯತು, ರೋಮಾಂಚನಗೊಳಿಸಿದ ಬೈಕ್ ಸ್ಟಂಟ್