ETV Bharat / state

ಬೆಂಗಳೂರಲ್ಲಿ ವಿದೇಶಿ ಮಹಿಳೆ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - foreign woman murder case

ಪ್ರವಾಸಕ್ಕೆ ಬಂದಿದ್ದ ಉಜ್ಬೇಕಿಸ್ಥಾನದ ಮಹಿಳೆಯನ್ನು ಕೊಲೆ ಮಾಡಿದ ಆರೋಪದಡಿ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಿದೇಶಿ ಮಹಿಳೆ ಕೊಲೆ ಪ್ರಕರಣ: ಅಸ್ಸೋಂ ಮೂಲದ ಇಬ್ಬರು ಆರೋಪಿಗಳ ಬಂಧನ

author img

By ETV Bharat Karnataka Team

Published : Mar 16, 2024, 6:54 AM IST

ಬೆಂಗಳೂರು: ಉಜ್ಬೇಕಿಸ್ಥಾನದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಬಳಿಯಿದ್ದ ವಿದೇಶಿ ಹಣ ಮತ್ತು ಮೊಬೈಲ್​ಗಾಗಿ ಹತ್ಯೆ ಮಾಡಿದ‌ ಆರೋಪದಡಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಅಸ್ಸೋಂ ಮೂಲದ ಇಬ್ಬರನ್ನು ಬಂಧಿಸಿ ಆರೋಪಿಗಳಿಂದ 13000 ಸಾವಿರ ನಗದು, 2000 ಮುಖಬೆಲೆಯ ಉಜ್ಬೇಕಿಸ್ಥಾನದ ಎರಡು ನೋಟುಗಳು 5000 ಮುಖ‌ಬೆಲೆಯ ಒಂದು ನೋಟನ್ನು ಸೀಜ್ ಮಾಡಲಾಗಿದೆ.

ಏನಿದು ಪ್ರಕರಣ?: ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಜರೀನಾ ಕಳೆದ ಆರು ದಿನಗಳಿಂದ ಶೇಷಾದ್ರಿಪುರ ಬಳಿಯಿರುವ ಜಗದೀಶ್ ಹೋಟೆಲ್​ನಲ್ಲಿ ತಂಗಿದ್ದರು. ಬುಧವಾರ ಸಂಜೆಯಿಂದ ಹೋಟೆಲ್​ ಸಿಬ್ಬಂದಿಗೆ ಪ್ರತಿಕ್ರಿಯಿಸಿದ ಕಾರಣ ಅನುಮಾನಗೊಂಡ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್‌ನ ಬಾಗಿಲು ತೆರೆದಿದ್ದರು. ಈ ವೇಳೆ ಜರೀನಾ ಶವ ರೂಪದಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶೇಷಾದ್ರಿಪುರ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದರು‌. ಬಳಿಕ ಅನುಮಾನಾಸ್ಪದ ಸಾವಿನಡಿ‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಹೋಟೆಲ್​ನಲ್ಲಿ‌ ಹೌಸ್ ಕೀಪಿಂಗ್​ ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳಿಬ್ಬರು ರೂಮ್ ಸರ್ವಿಸ್​ಗೆ ಹೋಗಿದ್ದಾಗ ಮಹಿಳೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ ಆಕೆ ಬಳಿಯಿದ್ದ ಹಣ ಮತ್ತು ಮೊಬೈಲ್​ ಕದ್ದು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಈ ಇಬ್ಬರಿಗಾಗಿ ವಿಶೇಷ ತಂಡ ರಚಸಿ ಶೋಧ ಕಾರ್ಯ ಆರಂಭಿಸಿ ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾರಿನಲ್ಲಿ ರಿಯಲ್​ ಎಸ್ಟೇಟ್ ಉದ್ಯಮಿ ಶವ ಪತ್ತೆ, ಕೊಲೆ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.