ಹಾಸನ : ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಬಳಿ 5ನೇ ಬಾರಿ ಗುಡ್ಡ ಕುಸಿತಗೊಂಡು ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಮಂಗಳವಾರವಷ್ಟೇ ದೊಡ್ಡತಪ್ಪಲುವಿನಲ್ಲಿ ಭೂ ಕುಸಿತ ಸಂಭವಿಸಿತ್ತು. ಇಂದು ಮತ್ತೆ ಗುಡ್ಡ ಕುಸಿದು ಕಂಟೈನರ್ ವಾಹನ ಸೇರಿದಂತೆ ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಪಲ್ಟಿಯಾದ ಕಂಟೇನರ್‌ನಲ್ಲಿ ಚಾಲಕ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು – ಮಂಗಳೂರು ಸಂಪರ್ಕ ಕಡಿತಗೊಂಡು ಸಂಚಾರ ಬಂದ್ ಆಗಿದೆ. ಗುಡ್ಡ ಜರಿತದಿಂದ ಹೆದ್ದಾರಿಯ ಎರಡೂ ಬದಿಯಲ್ಲೂ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು, ಸವಾರರು ಪರದಾಡುವಂತಾಗಿದೆ.
ಕೇವಲ ಎರಡು ಮೂರು ಗಂಟೆಗಳ ಹಿಂದಷ್ಟೇ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೆಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಹೋದ ಬಳಿಕ ಮತ್ತೆ ಗುಡ್ಡ ಕುಸಿದಿದ್ದು, ಪ್ರಯಾಣಿಕರಲ್ಲಿ ಈಗ ಆತಂಕ ಶುರುವಾಗಿದೆ.
ಇದನ್ನೂ ಓದಿ : ಹಾಸನ: ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮತ್ತೆ ಭೂ ಕುಸಿತ - Landslide in NH 75