ಮಂಗಳೂರು: ನಗರದ ಕೆಪಿಟಿ ಸರ್ಕಲ್ ಬಳಿ ರಸ್ತೆಯಲ್ಲಿದ್ದ ಹೊಂಡ, ಗುಂಡಿಗಳನ್ನು ಟ್ರಾಫಿಕ್ ಎಸ್ಐ ಸ್ವತಃ ತಾವೇ ಸಲಿಕೆ ಹಿಡಿದು ದುರಸ್ಥಿಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರ್ ಸ್ವಾಮಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮಳೆಗೆ ಕೆಪಿಟಿ ಸರ್ಕಲ್ ಬಳಿ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈಶ್ವರ್ ಸ್ವಾಮಿ ಅವರು ಕೆಲವರೊಂದಿಗೆ ಸೇರಿಕೊಂಡು ಹಣ ಒಟ್ಟುಗೂಡಿಸಿ ಸಿಮೆಂಟ್, ಜಲ್ಲಿ ತಂದು ರಸ್ತೆಹೊಂಡಗಳನ್ನು ಮುಚ್ಚಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ, 8ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ - Fire Accident