ETV Bharat / state

ಬಳ್ಳಾರಿ; ಹಳ್ಳದಲ್ಲಿ ಮಗುಚಿ ಬಿತ್ತು ಕಾರ್ಮಿಕರಿದ್ದ ಟ್ರ್ಯಾಕ್ಟರ್, ಹಲವರು ನೀರು ಪಾಲಾಗಿರುವ ಶಂಕೆ - TRACTOR OVERTURNED

ಕಾರ್ಮಿಕರನ್ನು ಕೆಲಸಕ್ಕಾಗಿ ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್​ವೊಂದು ಮಗುಚಿ ಬಿದ್ದಿದ್ದು, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ.

Tractor Overturned at Sandur
ಟ್ರ್ಯಾಕ್ಟ‌ರ್ ಮಗುಚಿ ಬಿದ್ದ ಸ್ಥಳ (ETV Bharat)
author img

By ETV Bharat Karnataka Team

Published : Oct 22, 2024, 1:57 PM IST

ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜಿಂದಾಲ್ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟ‌ರ್​ವೊಂದು ಹಳ್ಳದಲ್ಲಿ ಮಗುಚಿ ಬಿದ್ದಿದೆ. ಟ್ರ್ಯಾಕ್ಟರ್‌ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ತೋರಣಗಲ್ಲು ಹೋಬಳಿಯ ವಿಠಲಾಪುರ, ಮೆಟ್ರಿಕಿ, ರಾಜಾಪುರ, ಅಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಭಾರೀ ಮಳೆಯಾಗಿದೆ. ಹೀಗಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಟ್ರ್ಯಾಕ್ಟ‌ರ್ ಮಗುಚಿ ಬಿದ್ದ ಸ್ಥಳ (ETV Bharat)

ಜಿಂದಾಲ್ ಬಳಿಯ ಹಳ್ಳದ ಪಕ್ಕದಲ್ಲಿ ವಾಸವಿರುವ ಕಾರ್ಮಿಕರು ಎಂದಿನಂತೆ ಟ್ರ್ಯಾಕ್ಟರ್​ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಲ ಕಾರ್ಮಿಕರು ಈಜಿ ಹೊರ ಬಂದಿದ್ದಾರೆ. ಇನ್ನೂ ಕೆಲ ಕಾರ್ಮಿಕರು ಸಿಲುಕಿರುವ ಶಂಕೆ ಇದೆ.

Tractor Overturned at Sandur
ಟ್ರ್ಯಾಕ್ಟ‌ರ್ ಮಗುಚಿ ಬಿದ್ದ ಸ್ಥಳ (ETV Bharat)

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಪೊಲೀಸ್ ಇಲಾಖೆ ಹಾಗೂ ಮುಳುಗು ತಜ್ಞರು ಆಗಮಿಸಿ ಮಗುಚಿ ಬಿದ್ದ ಟ್ರ್ಯಾಕ್ಟ‌ರ್ ಶೋಧನಾ ಕಾರ್ಯ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತೋರಣಗಲ್‌ ಡಿಎಸ್ಪಿ ಪ್ರಸಾದ್‌ ಗೋಖಲೆ, 'ಕಾರ್ಮಿಕರೆಲ್ಲರೂ ಈಜಿ ಹೊರಬಂದಿದ್ದಾರೆ. ಯಾರಾದರೂ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿರಬಹುದಾದ ಶಂಕೆ ಇರುವುದರಿಂದ ಹುಡುಕಾಟ ನಡೆಸಿದ್ದೇವೆ' ಎಂದು ತಿಳಿಸಿದರು.

ಇದನ್ನೂ ಓದಿ; ಬೆಂಗಳೂರು: ರಾತ್ರಿ ಸುರಿದ ಮಳೆಗೆ ರಸ್ತೆಗಳು ಜಲಾವೃತ, ಪ್ರವಾಹ ಪರಿಸ್ಥಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.