ETV Bharat / state

ಎಚ್.ಡಿ.ಕೋಟೆಯಲ್ಲಿ ಹುಲಿ ಕಳೇಬರ ಪತ್ತೆ: ಕಾದಾಟದಲ್ಲಿ ಸಾವನ್ನಪ್ಪಿರುವ ಶಂಕೆ - TIGER FOUND DEAD

ಮೈಸೂರಿನ ಎಚ್​.ಡಿ.ಕೋಟೆಯ ಗ್ರಾಮವೊಂದರ ಜಮೀನಿನಲ್ಲಿ ಹುಲಿ ಕಳೇಬರ ಪತ್ತೆಯಾಗಿದೆ. ಕಾದಾಟದಲ್ಲಿ ಹುಲಿ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

mysuru  HD kote  Tiger dead body  ಹುಲಿ ಕಳೇಬರ ಪತ್ತೆ
ಎಚ್.ಡಿ.ಕೋಟೆಯಲ್ಲಿ ಪತ್ತೆಯಾದ ಹುಲಿ ಕಳೇಬರ (ETV Bharat)
author img

By ETV Bharat Karnataka Team

Published : Dec 15, 2024, 8:05 AM IST

ಮೈಸೂರು: ಎಚ್​.ಡಿ.ಕೋಟೆ ಪಟ್ಟಣದ ಚಾಕಹಳ್ಳಿ ಗ್ರಾಮದ ಸಮೀಪ ಶನಿವಾರ ಹುಲಿ ಕಳೇಬರ ಪತ್ತೆಯಾಗಿದೆ. ಸುಮಾರು ಒಂದೂವರೆ ವರ್ಷದ ಮರಿಯಾಗಿದ್ದು, ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಮೃತಪಟ್ಟಿರಬಹುದು ಎಂದು ಅನುಮಾನಿಸಲಾಗಿದೆ.

ಅರಣ್ಯ ಇಲಾಖೆಯ ಡಿಸಿಎಫ್​​ ಬಸವರಾಜು, ಎಸಿಎಫ್​​ ಅಭಿಷೇಕ್​​, ಆರ್​ಎಫ್ಒ ಹನುಮಂತರಾಜು, ವೈದ್ಯಾಧಿಕಾರಿಗಳಾದ ಡಾ.ಮುಜಿಬ್​ ಹಾಗು ಡಾ.ರಮೇಶ್​​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

"ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಘಟನೆ ನಡೆದಿರಬಹುದು. ಹುಲಿ ಮೃತಪಟ್ಟ ಸ್ಥಳದ ಸುತ್ತಲೂ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಾಳೆಯವರೆಗೂ ಪರಿಶೀಲನೆ ನಡೆಸಿ ನಂತರ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ಹಲವು ದಿನಗಳಿಂದ ಪಟ್ಟಣ ವ್ಯಾಪ್ತಿ ಹಾಗೂ ಅಕ್ಕಪಕ್ಕದ ಹಳ್ಳಿಗಳಲ್ಲಿ ಹುಲಿ, ಮರಿ‌ಹುಲಿಗಳು ಓಡಾಡುತ್ತಿವೆ. ಇದು ರೈತರ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: ಕರುವಿನ ರಕ್ತದ ರುಚಿ ನೋಡಿ ಮತ್ತೆ ಬೇಟೆಗೆ ಬಂದ ಚಿರತೆ ಸೆರೆ : ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.