ETV Bharat / state

ಬೆಂಗಳೂರು: ಬಾರ್​ನಲ್ಲಿ ಮನಸೋ ಇಚ್ಛೆ ತಲ್ವಾರ್ ಬೀಸಿದ್ದ ಮೂವರ ಬಂಧನ - three youth Arrested

author img

By ETV Bharat Karnataka Team

Published : Jul 30, 2024, 8:28 PM IST

Updated : Jul 30, 2024, 10:21 PM IST

ಬಾರ್​ನಲ್ಲಿ ಕ್ಷುಲ್ಲಕ ವಿಚಾರವಾಗಿ ಕ್ಯಾತೆ ತೆಗೆದು ತಲ್ವಾರ್​ ನಿಂದ ಸಿಕ್ಕಸಿಕ್ಕವರ ಮೇಲೆ ಹಲ್ಲೆಗೆ ಯತ್ನಿಸಿದ್ದ ಮೂವರನ್ನು ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಬಾರ್​ನಲ್ಲಿ ಮನಸೋ ಇಚ್ಛೆ ತಲ್ವಾರ್ ಬೀಸಿದ್ದ ಮೂವರ ಬಂಧನ
ಬಾರ್​ನಲ್ಲಿ ಮನಸೋ ಇಚ್ಛೆ ತಲ್ವಾರ್ ಬೀಸಿದ್ದ ಮೂವರ ಬಂಧನ (ETV Bharat)

ಬೆಂಗಳೂರು: ಬಾರ್​ನಲ್ಲಿ ಕ್ಷುಲ್ಲಕ ವಿಚಾರವಾಗಿ ಕ್ಯಾತೆ ತೆಗೆದು ತಲ್ವಾರ್​ ನಿಂದ ಹಲ್ಲೆಗೆ ಯತ್ನಿಸಿದ್ದ ಮೂವರನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಅಮನ್, ರೆಹಮತ್ ಪಾಷಾ, ಸೈಯದ್ ಕಬೀರ್ ಬಂಧಿತರು.

ನಡೆದಿದ್ದೇನು?: ಬಂಧಿತ ಆರೋಪಿಗಳು ಜು.26 ರಂದು ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಬಾರ್​ವೊಂದಕ್ಕೆ ಬಂದಿದ್ದರು. ಈ ವೇಳೆ ಅಪರಿಚಿತ ಯುವಕನೊಬ್ಬ ವಿಡಿಯೋ ಮಾಡಿಕೊಳ್ಳುತ್ತಿರುವುದನ್ನು ಪ್ರಶ್ನಿಸಿ, ಆತನಿಂದ ಮೊಬೈಲ್ ಕಸಿದುಕೊಂಡಿದ್ದರು. ಇದರಿಂದ ಆತಂಕಗೊಂಡ ಯುವಕ ಕಳ್ಳ, ಕಳ್ಳ ಎಂದು ಚೀರಿದ್ದ. ಇದರಿಂದ ಸ್ಥಳದಲ್ಲಿದ್ದವರು ಯುವಕನ ನೆರವಿಗೆ ಧಾವಿಸಿ ಆರೋಪಿಗಳನ್ನು ಓಡಿಸಿದ್ದಾರೆ. ಈ ಪೈಕಿ ಒಬ್ಬನನ್ನು ಸಾರ್ವಜನಿಕರು ಹಿಡಿದುಕೊಂಡಿದ್ದರು. ಇದರಿಂದ ಪರಾರಿಯಾಗಿದ್ದ ಮೂವರು, ಗೆಳೆಯನನ್ನು ಬಿಡಿಸಲು ಮತ್ತೆ ಬಾರ್​ಗೆ ಬಂದು ಸಿಕ್ಕಸಿಕ್ಕವರ ಮೇಲೆ ಮನಸೋ ಇಚ್ಛೆ ತಲ್ವಾರ್ ಬೀಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ದೂರು ಬಂದ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಪುನೀತ್ ಕೆರೆಹಳ್ಳಿಗೆ ಷರತ್ತುಬದ್ಧ ಜಾಮೀನು ಮಂಜೂರು - Puneeth Kerehalli get bail

Last Updated : Jul 30, 2024, 10:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.