ETV Bharat / state

ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ: ತಂದೆ-ತಾಯಿ ಸಾವು, ಮಗಳು ಪಾರು

ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ - ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅದೃಷ್ಟವಶಾತ್​ ಮಗಳು ಪಾರಾಗಿರುವ ಘಟನೆ ರಾಯಚೂರು ನಗರದ ಹೊರವಲಯದಲ್ಲಿ ನಡೆದಿದೆ.

daughter escape  family attempted suicide  Raichur
ತಂದೆ-ತಾಯಿ ಸಾವು, ಮಗಳು ಪಾರು
author img

By ETV Bharat Karnataka Team

Published : Mar 9, 2024, 5:10 PM IST

Updated : Mar 9, 2024, 6:13 PM IST

ರಾಯಚೂರು: ಒಂದೇ ಕುಟುಂಬದ 3 ಜನ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಹೊರವಲಯದ ಯರಮರಸ್ ಬೈಪಾಸ್ ರಸ್ತೆ ಓವರ್ ಬ್ರಿಡ್ಜ್ ಕೆಳಗೆ ನಡೆದಿದೆ. ಆತ್ಮಹತ್ಯೆ ಯತ್ನದಲ್ಲಿ ತಂದೆ - ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಮೊಹಮ್ಮದ್ ಸಮೀರ್ ( 45), ಜುಲ್ಲೇಕಾ ಬೇಗಂ (40) ಎಂದು ಗುರುತಿಸಲಾಗಿದೆ. ಗಾಯಾಳುವನ್ನು ನಹಿಮುನ್ನಿಸ್​ ಬೇಗಂ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?: ನಗರದ ಜ್ಯೋತಿ ಕಾಲೋನಿಯಲ್ಲಿ ಮೊಹಮ್ಮದ್ ಸಮೀರ್, ಜುಲ್ಲೇಕಾ ಬೇಗಂ ವಾಸಿಸುತ್ತಿದೆ. ಇಂದು ಹಠಾತ್ತನೇ ರೈಲ್ವೆ ಬಿಡ್ಜ್​ ಕೆಳಗೆ ಮೊಹಮ್ಮದ್ ಸಮೀರ್ ಮತ್ತು ಜುಲ್ಲೇಕಾ ಬೇಗಂ ತಮ್ಮ ಮಗಳು ನಹಿಮುನ್ನಿಸ್​ ಬೇಗಂ ಜೊತೆಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ, ಮೊಹಮ್ಮದ್ ಸಮೀರ್, ಜುಲ್ಲೇಕಾ ಬೇಗಂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪುತ್ರಿ ನಹಿಮುನ್ನಿಸ್​ ಬೇಗಂ ಅವರ ಕೈಮುರಿತ ಗೊಂಡಿದೆ. ಸುದ್ದಿ ತಿಳಿದಾಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ರಿಮ್ಸ್​ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.

ಅದಕ್ಕೂ ಮುನ್ನ ಕೈಮುರಿದು ಗಾಯಗೊಂಡಿದ್ದ ನಹಿಮುನ್ನಿಸ್​ ಬೇಗಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರಾಯಚೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.

ಓದಿ: ಕೇರಳ: ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

Last Updated : Mar 9, 2024, 6:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.