ETV Bharat / state

ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ್ದ ಪ್ರಕರಣ: ಮಾಟ - ಮಂತ್ರ ಮಾಡಿಸಿದ ವ್ಯಕ್ತಿ ಸೇರಿ ಮೂವರ ಬಂಧನ - Bagalkote Fire Incident

author img

By ETV Bharat Karnataka Team

Published : Jul 23, 2024, 7:07 PM IST

ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ್ದ ಪ್ರಕರಣವನ್ನು ಭೇದಿಸಲಾಗಿದೆ ಎಂದು ಐಜಿಪಿ ವಿಕಾಸ್‌ ಕುಮಾರ್‌ ಹೇಳಿದರು.

BAGALKOTE FIRE INCIDENT
ಭಸ್ಮಗೊಂಡ ಶೆಡ್​ (ETV Bharat)
ಐಜಿಪಿ ವಿಕಾಸ್‌ ಕುಮಾರ್‌ (ETV Bharat)

ಬಾಗಲಕೋಟೆ: ಜುಲೈ 16ರಂದು ಮುಧೋಳ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ವಿಕಾಸ್‌ ಕುಮಾರ್‌ ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಆಸ್ತಿ, ಅನೈತಿಕ ಸಂಬಂಧ, ಮಾಟ - ಮಂತ್ರದ ಕಾರಣಕ್ಕೆ ಈ ಘಟನೆ ನಡೆದಿರುವುದು ಕಂಡು ಬಂದಿದೆ. ಸಂಬಂಧಿಕರೇ ಇಂತಹ ಕೃತ್ಯ ಎಸೆಗಿದ್ದು, ಮಾಟ-ಮಂತ್ರ ಮಾಡಿಸಿದ ಓರ್ವ ವ್ಯಕ್ತಿ ಸೇರಿದಂತೆ ಇತರ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಅಮೀನಸಾಬ್​ ಸಿರಾಜಸಾಬ್​ ಪೆಂಡಾರಿ, ಬಾಬಾಲಾಲ್​ ಸಿರಾಜ್ ಪೆಂಡಾರಿ, ಜಾಕೀರ್​ಹುಸೇನ್​ ನದಾಫ್ ಎಂಬ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಸಿದ್ದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಪ್ರಕರಣದ ಹಿನ್ನೆಲೆ: ರಾತ್ರಿ ವೇಳೆ‌ ದಸ್ತಗಿರಸಾಬ್​ ಪೆಂಡಾರಿ ಅವರ ಕುಟುಂಬಸ್ಥರು ತೋಟದ ಶೆಡ್​​ನಲ್ಲಿ ಮಲಗಿದ್ದಾಗ ಆರೋಪಿಗಳು ಸಿಂಟೆಕ್ಸ್​​ನಲ್ಲಿ‌ ಪೆಟ್ರೋಲ್‌ ತುಂಬಿ ಅದನ್ನು ಎರಡು ಹೆಚ್​​ಪಿ ಮೋಟಾರ್ ಸಹಾಯದಿಂದ ಶೆಡ್ಡಿಗೆ ಸಿಂಪಡಿಸಿ‌ ಬೆಂಕಿ ಹಚ್ಚಿದ್ದರು. ಬೆಂಕಿ ಹಚ್ಚುವ ಮುನ್ನ ಶೆಡ್ಡಿನ ಬಾಗಿಲನ್ನು ಲಾಕ್ ಮಾಡಿದ್ದರು. ಘಟನೆಯಲ್ಲಿ ತಾಯಿ - ಮಗಳು ಸಜೀವ ದಹನವಾಗಿದ್ದರೆ, ಸುಟ್ಟು ಗಂಭೀರ ಗಾಯಗೊಂಡಿದ್ದ ಮಗ ಕೂಡ ಎರಡು ದಿನಗಳ ಬಳಿಕ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ: ಶೆಡ್​ಗೆ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು: ತಾಯಿ - ಮಗಳು ಸಜೀವ ದಹನ - Fire Incident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.