ETV Bharat / state

ಹೈವೇಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್;​ ಸಿನಿಮೀಯ ರೀತಿ ಚೇಸ್ ಮಾಡಿ ಖದೀಮರ ಹೆಡೆಮುರಿ ಕಟ್ಟಿದ ಪೊಲೀಸ್​ - ROBBERY GANG ARREST - ROBBERY GANG ARREST

ಹೈವೇಯಲ್ಲಿ ದರೋಡೆ ಕೃತ್ಯದಲ್ಲಿ ತೊಡಗಿದ್ದ ಐವರು ಖದೀಮರ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರು ಅಪ್ರಾಪ್ತರಾಗಿದ್ದು, ಅವರನ್ನು ಸಿನಿಮೀಯ ರೀತಿ ಚೇಸ್ ಮಾಡಿ ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

thieves arrested Davanagere  Robbery on the highway
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : Jun 11, 2024, 1:03 PM IST

ದಾವಣಗೆರೆ: ಹೈವೇಯಲ್ಲಿ ದರೋಡೆ ಮಾಡುತ್ತಿದ್ದವರನ್ನು ಸಿನಿಮೀಯ ರೀತಿ ಚೇಸ್ ಮಾಡಿದ ಪೊಲೀಸರು, ಮೂವರು ಖದೀಮರನ್ನು ಸೆರೆ ಹಿಡಿದು ಇನ್ನಿಬ್ಬರು ಅಪ್ರಾಪ್ತ ವಯಸ್ಸಿನವರನ್ನು ವಶಕ್ಕೆ ಪಡೆದ ಘಟನೆ ಜೂನ್​ 7ರಂದು ನಡೆದಿತ್ತು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹೆಚ್. ಕಲಪನಹಳ್ಳಿ ಬಳಿ ಹೈವೇಯಲ್ಲಿ ಲಾರಿ ಚಾಲಕನಿಂದ ಮೊಬೈಲ್ ಮತ್ತು ಹಣವನ್ನು ದರೋಡೆ ಮಾಡಿದ್ದರು.

ದರೋಡೆಗೆ ಒಳಗಾಗಿರುವ ಸಂದೀಪ್ ಶಿವನಗೌಡ ಹಿರೇಗೌಡ ಅವರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನವರು. ಲಾರಿ ಚಾಲಕ ವೃತ್ತಿ ಮಾಡುತ್ತಿದ್ದಾರೆ. ಜೂನ್ 7ರಂದು ಪುಣೆ- ಬೆಂಗಳೂರು ಮಾರ್ಗವಾಗಿ ತುಮಕೂರಿಗೆ ತೆರಳುತ್ತಿದ್ದರು. ಈ ವೇಳೆ ದಾವಣಗೆರೆಯ ಹೆಚ್. ಕಲಪನಹಳ್ಳಿ ಬಳಿಯ ಹೆದ್ದಾರಿಯಲ್ಲಿ ಊಟ ಮಾಡಲೆಂದು ಲಾರಿಯನ್ನು ನಿಲ್ಲಿಸಿದಾಗ ಖದೀಮರು ದರೋಡೆ ಮಾಡಿದ್ದರು.

ದರೋಡೆಕೋರರ ಅರೆಸ್ಟ್​ ಮಾಡಿದ ಪೊಲೀಸ್: ಸಂದೀಪ್ ಲಾರಿ ನಿಲ್ಲಿಸಿ ಊಟಕ್ಕೆ ತೆರಳುವ ವೇಳೆ ಐವರು ಖದೀಮರು ಪ್ಯಾಸೆಂಜರ್ ಆಟೋದಲ್ಲಿ ಬಂದು, ಸಂದೀಪ್ ಅವರ ಲಾರಿಯನ್ನು ಏರಿ ಹಣ, ಮೊಬೈಲ್ ದರೋಡೆ ಮಾಡುತ್ತಿರುವಾಗ ಸ್ಥಳೀಯರೊಬ್ಬರು ಕಂಡು ತಕ್ಷಣ 112 ತುರ್ತು ಸ್ಪಂದನ ವಾಹನಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಹತ್ತಿರದಲ್ಲಿಯೇ ಗಸ್ತು ಕರ್ತವ್ಯದಲ್ಲಿದ್ದ 112 ತುರ್ತು ಸ್ಪಂದನ ವಾಹನದ ಸಿಬ್ಬಂದಿಯವರು ತಕ್ಷಣ ಕಾರ್ಯ ಪ್ರವೃತ್ತರಾಗಿ ಸ್ಥಳಕ್ಕಾಗಮಿಸಿದ್ದರು. ಈ ವೇಳೆ ಖದೀಮರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು. ಪೊಲೀಸ್ ಸಿಬ್ಬಂದಿ ಸಿನಿಮೀಯ ರೀತಿ ಚೇಸಿಂಗ್​ ಮಾಡಿ ಐವರ ಪೈಕಿ ಇಬ್ಬರನ್ನು ಬಂಧಿಸಿದ್ದರು. ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ಕೈಗೊಂಡು, ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಬಳಿಕ ಮೂವರನ್ನು ಸೆರೆ ಹಿಡಿದಿದ್ದಾರೆ.

ಕುಶಾಲ್ (20), ವೆಂಕಟೇಶ್ (19) ಕಿರಣ್ ಕುಮಾರ್ (19) ಬಂಧಿತರು. ಇನ್ನಿಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದಾರೆ. ಸಂತ್ರಸ್ತ ಸಂದೀಪ್​ ಅವರಿಂದ ಕಿತ್ತುಕೊಂಡಿದ್ದ ₹1,200 ನಗದು ಹಣ ಹಾಗೂ ₹10,000 ಬೆಲೆಬಾಳುವ 1 ಮೊಬೈಲ್ ಫೋನ್ ಮತ್ತು ₹1,20,000 ಬೆಲೆಯ ಕೃತ್ಯಕ್ಕೆ ಬಳಸಿದ್ದ ಆಟೋವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಚೂರಿ ಇರಿತ ಪ್ರಕರಣದಲ್ಲಿ ನಿಷ್ಪಕ್ಷಪಾತ ಕ್ರಮ; ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದ ಸಚಿವ ಗುಂಡೂರಾವ್ - Stabbing BJP Workers

ETV Bharat Logo

Copyright © 2025 Ushodaya Enterprises Pvt. Ltd., All Rights Reserved.