ETV Bharat / state

ಅಂಗಡಿಯ ಮೇಲ್ಛಾವಣಿ ಮುರಿದು ಲಕ್ಷಾಂತರ ಮೌಲ್ಯದ ಮದ್ಯ ಹೊತ್ತೊಯ್ದ ಕಳ್ಳರು! - Liquor Theft - LIQUOR THEFT

ಮದ್ಯದಂಗಡಿಯ ಮೇಲ್ಛಾವಣಿ ಮುರಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಮದ್ಯ ಹೊತ್ತೊಯ್ದಿದ್ದಾರೆ.

LIQUOR THEFT
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Aug 23, 2024, 9:58 PM IST

ದಾವಣಗೆರೆ: ಮದ್ಯದ ಅಂಗಡಿಯ ಬೀಗ ಮುರಿದು 1.5 ಲಕ್ಷ ರೂ ಮೌಲ್ಯದ ಮದ್ಯ ಸೇರಿದಂತೆ 82 ಸಾವಿರ ನಗದನ್ನು ಕಳ್ಳರು ಹೊತ್ತೊಯ್ದಿರುವ ಎರಡು ಪ್ರತ್ಯೇಕ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು, ದಾವಣಗೆರೆ ತಾಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಜಿಲ್ಲೆಯ ಮಾಯಕೊಂಡ ಹೋಬಳಿಯ ಪರಶುರಾಂಪುರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ಎಂಎಸ್‌ಐಎಲ್‌ ಮದ್ಯದಂಗಡಿಗೆ ಕಳ್ಳರು ಕನ್ನ ಹಾಕಿದ್ದಾರೆ. ಇದಲ್ಲದೆ ಹರಿಹರ ತಾಲ್ಲೂಕಿನ ಮಲೆಬೆನ್ನೂರು ಹೋಬಳಿಯ ಕೊಕ್ಕನೂರು ಗ್ರಾಮದ ಮಾರುತಿ ವೈನ್ಸ್‌ನಲ್ಲೂ ಕಳ್ಳತನ ನಡೆದಿದೆ.

ಮಾಯಕೊಂಡದ ಎಂಎಸ್‌ಐಎಲ್‌ ಮದ್ಯದಂಗಡಿಯ ಬೀಗ ಒಡೆದು ಕಳ್ಳರು ಮದ್ಯ ದೋಚಿದ್ದಾರೆ. ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್‌ ಅನ್ನು ಕೂಡಾ ಬಿಡದೆ ಹೊತ್ತೊಯ್ದಿದ್ದಾರೆ. ಇಂದು ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. 1.5 ಲಕ್ಷ ರೂ ಮೌಲ್ಯದ ಮದ್ಯ ಕಳುವಾಗಿದೆ ಎಂದು ಮಾಲೀಕ ಮಾಯಕೊಂಡ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೊಕ್ಕನೂರಿನ ಮದ್ಯದಂಗಡಿಯ ಸಿಮೆಂಟ್ ಶೀಟ್ ಚಾವಣಿ ಮುರಿದು ಒಟ್ಟು 82 ಸಾವಿರ ನಗದು ದೋಚಿದ್ದಾರೆ. ಮರುದಿನ ಮದ್ಯದಂಗಡಿಯ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಶೋಕ ಎಂಬವರು ಮಲೆಬೆನ್ನೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜೈಲಿನಿಂದ ಹೊರಬಂದು ಮತ್ತೆ ಮನೆಗಳ್ಳತನ: 50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ - House Burglary Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.