ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ತಾಯಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ತಾಯಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಅವರನ್ನು ಮನೆ ಹಿಂಭಾಗದ ತಿಪ್ಪೆಗುಂಡಿಗೆ ಎಸೆದಿರುವುದು ಬೆಳಕಿಗೆ ಬಂದಿದೆ.
ಹೀಗಿದೆ ಸಂತ್ರಸ್ತೆ ನೀಡಿದ ದೂರು: ಸಂತ್ರಸ್ತೆ ದೂರಿನ ಪ್ರಕಾರ, ನನಗೆ ಮೂವರು ಮಕ್ಕಳು. ಮೂವರಿಗೂ ಮದುವೆಯಾಗಿ ಅವರವರ ಮನೆಯಲ್ಲಿ ವಾಸಿಸುತ್ತಿದ್ಧಾರೆ. ಆದರೆ, ನನ್ನ ಮೂರನೇ ಮಗನಿಗೂ ಮದುವೆಯಾಗಿದ್ದು, ಆಕೆಯ ಹೆಂಡತಿ ಅವನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ಮೂರನೇ ಮಗ ನಮ್ಮ ಮನೆಯಲ್ಲಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆಗಸ್ಟ್ 4ರಂದು ನಾನು ಮನೆಯ ಹೊರಗಡೆ ಮಲಗಿದ್ದು, ನನ್ನ ಗಂಡ ಮನೆಯೊಳಗೆ ಮಲಗಿದ್ದರು. ಈ ವೇಳೆ, ಕುಡಿದ ಮತ್ತಿನಲ್ಲಿ ಕೂಲಿ ಮುಗಿಸಿಕೊಂಡು ಮನೆಗೆ ಬಂದ ನನ್ನ ಮೂರನೇ ಮಗ ನನ್ನನ್ನು ಎಳೆದುಕೊಂಡು ಮನೆ ಬಳಿಯ ತಿಪ್ಪೆಗುಂಡಿ ಬಳಿ ಕರೆದುಕೊಂಡು ಹೋಗಿದ್ದನು. ಅಲ್ಲಿ ಅಮಾನುಷವಾಗಿ ನನ್ನ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ನಾನು ಎಷ್ಟೇ ಕೂಗಿದರು ಸಹ ನನ್ನ ಸಹಾಯಕ್ಕೆ ಯಾರು ಬರಲೇ ಇಲ್ಲ. ನನಗೆ ಹೆಚ್ಚು ಸುಸ್ತು ಆಗಿದ್ದರಿಂದ ಇಡೀ ರಾತ್ರಿ ತಿಪ್ಪೆಗುಂಡಿಯಲ್ಲಿ ಕಳೆದಿದ್ದೇನೆ. ಬೆಳಗಿನ ಜಾವ 6 ಸುಮಾರಿಗೆ ಹೇಗೋ ನಡೆದುಕೊಂಡು ಮನೆ ಸೇರಿದೆ. ಬಳಿಕ ಈ ವಿಷಯ ನನ್ನ ಗಂಡನಿಗೆ ತಿಳಿಸಿದೆ. ಬಳಿಕ ನನ್ನ ಮಗ ಮತ್ತು ಸೊಸೆ ಮನೆಗೆ ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.
ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ ಗುಡಿಬಂಡೆ ಠಾಣೆಗೆ ಡಿವೈಎಸ್‌ಪಿ ಶಿವಕುಮಾರ್ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದರು. ಆಸ್ಪತ್ರೆಗೂ ಭೇಟಿ ನೀಡಿ ಆರೋಪಿಯ ತಂದೆಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಗುಡಿಬಂಡೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಜೈಸಲ್ಮೇರ್‌ನಲ್ಲಿ ಮನೆಗಳು ಕುಸಿದು ಮೂವರು ಸಾವು: 10 ಮಂದಿಗೆ ಗಾಯ - Houses Collapse In Jaisalmer