ETV Bharat / state

ಬಳ್ಳಾರಿ ಜೈಲಿಗೆ ನಟ ದರ್ಶನ್​ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ: ಸಿಎಂ - Darshan Jail Issue - DARSHAN JAIL ISSUE

ನಟ ದರ್ಶನ್​ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ ಎಂದು ಹೇಳಿದರು.

BELLARY JAIL  CM SIDDARAMAIAH  POLICE DEPARTMENT  BENGALURU
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Aug 27, 2024, 3:14 PM IST

ಸಿಎಂ ಸಿದ್ದರಾಮಯ್ಯ ಹೇಳಿಕೆ (ETV Bharat)

ಬೆಂಗಳೂರು : ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 9 ಜನರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದು, ವರದಿ ಆಧಾರದ ಮೇಲೆ ತಪ್ಪೆಸಗಿರುವ ಇನ್ನಷ್ಟು ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದರು.

ಸಿಎಂ ತೋರು ಬೆರಳಿಗೆ ಗುಂಡು ಸೂಜಿ ಚುಚ್ಚಿ ರಕ್ತಸ್ರಾವ: ಕಡತದ ಗುಂಡುಸೂಜಿ ಚುಚ್ಚಿ ಸಿಎಂ ಸಿದ್ದರಾಮಯ್ಯ ತೋರು ಬೆರಳಿನಲ್ಲಿ ರಕ್ತಸ್ರಾವವಾದ ಘಟನೆ ನಡೆಯಿತು. ಕರ್ನಾಟಕ ಮಾಹಿತಿ ಆಯೋಗ ಮುಖ್ಯ ಆಯುಕ್ತರ ನೇಮಕ ಸಭೆಗೆ ವಿಧಾನಸೌಧಕ್ಕೆ ಆಗಮಿಸಿದ ವೇಳೆ ವ್ಯಕ್ತಿಯೊಬ್ಬರು ಅರ್ಜಿ ನೀಡಲು ಮುಂದಾದರು.‌

ಸಿಎಂ ಅರ್ಜಿ ಕಡತವನ್ನು ಸ್ವೀಕರಿಸುವ ವೇಳೆ ಅದರಲ್ಲಿದ್ದ ಗುಂಡು ಸೂಜಿ ಬಲ ತೋರು ಬೆರಳಿಗೆ ಚುಚ್ಚಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ತೋರು ಬೆರಳಿನಿಂದ ರಕ್ತಸ್ರಾವ ಆಯಿತು. ಕೂಡಲೇ ವಿಧಾನಸೌಧ ಕ್ಲಿನಿಕ್ ನ ನರ್ಸಿಂಗ್ ಸಿಬ್ಬಂದಿಯನ್ನು ಕರೆಸಿ ತೋರು ಬೆರಳಿಗೆ ಬ್ಯಾಂಡೇಜ್ ಹಾಕಲಾಯಿತು.‌ ಬಳಿಕ ಸಿಎಂ ಸಭೆ ಆರಂಭಿಸಿದರು.

ಓದಿ: ಎರಡ್ಮೂರು ದಿ‌ನಗಳಲ್ಲಿ ನಟ ದರ್ಶನ್​​ರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುವುದು: ಸಚಿವ ಜಿ. ಪರಮೇಶ್ವರ್ - Minister G Parameshwar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.