ಶಿವಮೊಗ್ಗ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೆನುವಿನಲ್ಲಿದ್ದ ಮುದ್ದೆಯನ್ನು ನೀಡದೆ ಬೇರೆ ಊಟವನ್ನು ನೀಡುತ್ತಿದ್ದ ಆರೋಪದ ಮೇಲೆ ವಾರ್ಡನ್ರನ್ನು ಸಸ್ಪೆಂಡ್ ಮಾಡುವಂತೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ಸೂಚಿಸಿದ್ದಾರೆ.
ಹೊಸನಗರ ತಾಲೂಕು ರಿಪ್ಪನ್ಪೇಟೆಯ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ಗೆ ಶನಿವಾರ ಶಾಸಕ ಗೋಪಾಲಕೃಷ್ಣ ಅವರು ದಿಢೀರ್ ಭೇಟಿ ನೀಡಿದ್ದರು. ಶಾಸಕರು ವಿದ್ಯಾರ್ಥಿಗಳ ಬಳಿ ಹೋಗಿ ಹಾಸ್ಟೆಲ್ನಲ್ಲಿ ಇರುವ ಸೌಲಭ್ಯಗಳ ಬಗ್ಗೆ, ಊಟದ ಮೆನು, ಊಟ ಹೇಗಿರುತ್ತದೆ ಎಂದು ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದುಕೊಂಡರು.
ನಂತರ ಅಡುಗೆ ಮನೆಗೆ ಹೋಗಿ ಮಕ್ಕಳಿಗೆ ನೀಡುವ ಊಟವನ್ನು ಪರಿಶೀಲಿಸಿದರು. ಈ ವೇಳೆ ಮಕ್ಕಳಿಗೆ ಯಾಕೆ ಮುದ್ದೆಯನ್ನು ಊಟಕ್ಕೆ ನೀಡುತ್ತಿಲ್ಲ ಎಂದು ವಾರ್ಡನ್ ಇಂದಿರಾ ಅವರಿಗೆ ಪ್ರಶ್ನೆ ಮಾಡಿದಾಗ ಅವರು ಸರಿಯಾದ ಉತ್ತರ ನೀಡದ ಸುಮ್ಮನೆ ನಿಂತಿದ್ದರು. ಇದರಿಂದ ಕೋಪಗೊಂಡ ಶಾಸಕರು ವಾರ್ಡನ್ ಅವರನ್ನು ಸಸ್ಪೆಂಡ್ ಮಾಡಲು ಪತ್ರ ರೆಡಿ ಮಾಡಿ ಎಂದು ತಮ್ಮ ಸಹಾಯಕರಿಗೆ ಸೂಚಿಸಿದರು.
ನಂತರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಅಲ್ಲಿಂದಲೇ ಫೋನ್ ಮಾಡಿ ವಾರ್ಡನ್ ಇಂದಿರಾ ಅವರನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದರು. ಅಲ್ಲದೆ ಮಕ್ಕಳಿಗೆ ಸರಿಯಾದ ಊಟ ನೀಡದ ಹಾಸ್ಟೆಲ್ನ ಇತರೆ ಸಿಬ್ಬಂದಿಗೆ ನೋಟಿಸ್ ನೀಡುವಂತೆ ತಾಕೀತು ಮಾಡಿದರು.
ಇದನ್ನೂ ಓದಿ: ಹಾವೇರಿ: ಸೌಲಭ್ಯ ವಂಚಿತ ಮಾರಂಬೀಡ ಮೊರಾರ್ಜಿ ವಸತಿ ಶಾಲೆ - Lack of Basic facilities