ETV Bharat / state

ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ಮೇಲೆ ಗೆಳತಿಯನ್ನು ಕೂರಿಸಿಕೊಂಡು ಜಾಲಿ ರೈಡ್​, ಯುವಕ ಸೆರೆ - Bike Rider Arrest - BIKE RIDER ARREST

ಸ್ನೇಹಿತೆಯನ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಬೈಕ್ ಚಲಾಯಿಸಿದ್ದ ಯುವಕನನ್ನು ಹೆಬ್ಬಾಳದ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಯುವಕನ ಬಂಧನ
ಯುವಕನ ಬಂಧನ (ETV Bharat)
author img

By ETV Bharat Karnataka Team

Published : May 19, 2024, 3:27 PM IST

Updated : May 19, 2024, 9:10 PM IST

ಪೆಟ್ರೋಲ್ ಟ್ಯಾಂಕ್ ಮೇಲೆ ಗೆಳತಿಯನ್ನು ಕೂರಿಸಿಕೊಂಡು ಜಾಲಿ ರೈಡ್ (ETV Bharat)

ಬೆಂಗಳೂರು: ಸ್ನೇಹಿತೆಯನ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಅಪಾಯಕಾರಿಯಾಗಿ ಬೈಕ್ ಚಲಾಯಿಸಿದ್ದ ಆರೋಪಿಯನ್ನು ಹೆಬ್ಬಾಳ ಸಂಚಾರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾವಲ್ ಭೈರಸಂದ್ರದ ನಿವಾಸಿ ಸಿಲಂಬರಸನ್ (21) ಬಂಧಿತ ಆರೋಪಿ. ಮೇ 17ರಂದು ಯಲಹಂಕದಿಂದ ಹೆಬ್ಬಾಳ ಮಾರ್ಗದ ಕೊಡಿಗೆಹಳ್ಳಿಯ ಫ್ಲೈ ಓವರ್ ಮೇಲೆ ಯುವಕ, ಪೆಟ್ರೋಲ್ ಟ್ಯಾಂಕ್ ಮೇಲೆ ತನ್ನ ಗೆಳತಿಯನ್ನು ಕೂರಿಸಿಕೊಂಡು ಬೈಕ್​ ಚಲಾಯಿಸಿದ್ದ.

ಹೆಲ್ಮೆಟ್ ಧರಿಸದೆ, ಸಾರ್ವಜನಿಕರ ಶಾಂತಿಗೆ ಧಕ್ಕೆಯುಂಟಾಗುವಂತೆ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿರುವ ದೃಶ್ಯವನ್ನ ಹಿಂಬದಿ ವಾಹನದ ಸವಾರರೊಬ್ಬರು ಸೆರೆ ಹಿಡಿದಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಹೆಬ್ಬಾಳ ಸಂಚಾರಿ ಠಾಣಾ ಪೊಲೀಸರು‌ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಆತನ ಚಾಲನಾ ಪರವಾನಗಿ ಅಮಾನತುಪಡಿಸಲು ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 'ನಮ್ಮ ಮೆಟ್ರೋ' ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಬೀಳುತ್ತೆ ದಂಡ! - Namma Metro

Last Updated : May 19, 2024, 9:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.